Kantara-1: ಇಂದು ಅಂದರೆ ಭಾನುವಾರ ಸಂಜೆ ರಾಷ್ಟ್ರಪತಿ ಭವನದಲ್ಲಿ ಕನ್ನಡ ಚಿತ್ರರಂಗದ ಬಹುನಿರೀಕ್ಷಿತ ಚಿತ್ರ ‘ಕಾಂತಾರ ಚಾಪ್ಟರ್ 1’ ಪ್ರದರ್ಶನಗೊಲ್ಲಳಿದ್ದು, ರಾಷ್ಟ್ರಪತಿಗಳು ಹಾಗೂ ಅಧಿಕಾರಿಗಳು ಚಿತ್ರ ವೀಕ್ಷಿಸಲಿದ್ದಾರೆ.
ಹೌದು, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ರಾಷ್ಟ್ರಪತಿ ಭವನದಲ್ಲಿ ‘ಕಾಂತಾರ ಚಾಪ್ಟರ್ 1’ ಚಿತ್ರದ ವಿಶೇಷ ಪ್ರದರ್ಶನ ಆಯೋಜಿಸಲಾಗಿದೆ. ಈ ಕಾರ್ಯಕ್ರಮವು ಕನ್ನಡ ಚಿತ್ರರಂಗದ ಸಾಧನೆಯನ್ನು ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವ ಮಹತ್ವದ ಕ್ಷಣವಾಗಿದೆ. ಚಿತ್ರದ ಕಥಾವಸ್ತು, ಸಾಂಸ್ಕೃತಿಕ ಚಿತ್ರಣ, ಮತ್ತು ಕಲಾತ್ಮಕ ಶೈಲಿಯು ಭಾರತದ ಸಾಂಸ್ಕೃತಿಕ ವೈವಿಧ್ಯತೆಯನ್ನು ಜಾಗತಿಕವಾಗಿ ಪ್ರತಿನಿಧಿಸುತ್ತಿದೆ ಎಂದು ಹೊಂಬಾಳೆ ಫಿಲಂಸ್ ತಿಳಿಸಿದೆ. ಈ ವಿಶೇಷ ಪ್ರದರ್ಶನವು ಕನ್ನಡ ಸಿನಿಮಾದ ಜಾಗತಿಕ ಮನ್ನಣೆಯನ್ನು ಗುರುತಿಸುವ ಮಹತ್ವದ ಕ್ಷಣವಾಗಿದೆ.
