Kerala: ಕನ್ನಡಿಗರಿಗೆ ಮಾತ್ರವಲ್ಲದೆ ಇಡೀ ದೇಶದ ಜನತೆಗೆ ಭಾರಿ ನಿರೀಕ್ಷೆಯನ್ನು ಹುಟ್ಟು ಹಾಕಿರುವ ಕಾಂತರಾ ಚಾಪ್ಟರ್ 1 ಅಕ್ಟೋಬರ್ ಎರಡರಂದು ರಿಲೀಸ್ ಆಗಲಿದೆ ಎಂಬುದಾಗಿ ಈಗಾಗಲೇ ಚಿತ್ರ ನಿರ್ಮಾಣ ಸಂಸ್ಥೆಯು ಹೇಳಿಕೊಂಡಿದೆ. ಈ ಬೆನ್ನಲ್ಲೇ ಪರಭಾಷೆಗಳಲ್ಲಿ ಈ ಚಿತ್ರದ ವಿತರಣಾ ಹಕ್ಕನ್ನು ಪಡೆಯಲು ಅನೇಕರು ಮುಗಿ ಬೀಳುತ್ತಿದ್ದಾರೆ. ಇದರ ಬೆನ್ನಲ್ಲೇ ಕೇರಳದಲ್ಲಿ ಕಾಂತರಾ ಚಾಪ್ಟರ್ 1 ಪ್ರದರ್ಶನವನ್ನು ನಿಷೇಧಿಸಲಾಗುವುದು ಎಂಬ ಸುದ್ದಿಯು ಕೂಡ ಕೇಳಿ ಬರುತ್ತಿದೆ.
ಹೌದು, ಕೇರಳದಲ್ಲಿ ಕಾಂತರಾ ಸಿನಿಮಾ ಬ್ಯಾನ್ ಆಗಲಿದೆ ಎಂಬ ಸುದ್ದಿಯೊಂದು ಹರಿದಾಡುತ್ತಿದೆ. ಪೃಥ್ವಿರಾಜ್ ಪ್ರೊಡಕ್ಷನ್ಸ್ ಚಿತ್ರದ ವಿತರಣಾ ಹಕ್ಕನ್ನು ಪಡೆದ ಬೆನ್ನಲ್ಲೇ ಈ ಮಾತು ಕೇಳಿ ಬರುತ್ತಿದೆ.
ಕೇರಳದಲ್ಲಿನ ‘ಫಿಲ್ಮ್ ಎಕ್ಸಿಬಿಟರ್ಸ್ ಯುನೈಟೆಡ್ ಆರ್ಗನೈಸೇಶನ್ ಆಫ್ ಕೇರಳ’ (FEUOK) ಅಧ್ಯಕ್ಷ ಕೆ. ವಿಜಯಕುಮಾರ್ ಹೇಳುವಂತೆ, ರಾಜ್ಯದಲ್ಲಿ ಇತರ ಭಾಷಾ ಚಿತ್ರಗಳಿಗೆ ಮೊದಲ ದಿನಗಳಲ್ಲಿ ಕೇವಲ 50ರಷ್ಟು ಲಾಭ ನೀಡಲಾಗುತ್ತದೆ. ಆದರೆ ಪೃಥ್ವಿರಾಜ್ ಪ್ರೊಡಕ್ಷನ್ಸ್ ಈ ಸಿನಿಮಾಗೆ ಶೇಕಡಾ 55ರಷ್ಟು ಲಾಭಕ್ಕೆ ಬೇಡಿಕೆ ಇಟ್ಟಿದೆ. ಇಂತಹ ವಿಶೇಷ ಅವಕಾಶ COVID ಸಮಯದಲ್ಲಿ ಮಾತ್ರವೇ ಇತ್ತು, ಆಗ ಹೆಚ್ಚಿನ ಲಾಭ ನೀಡಲಾಗಿತ್ತು. ಈಗ ಅದು ಸಾಧ್ಯವಿಲ್ಲ. ಇದೆಲ್ಲ ಕಾರಣದಿಂದ ಕೇರಳದಲ್ಲಿ ರಿಲೀಸ್ ಆಗುತ್ತಾ? ನಿಷೇಧಗೊಳ್ಳುತ್ತಾ? ಎಂದು ಕಾದು ನೋಡಬೇಕಿದೆ.
