Kantara Chapter 1 Advance Booking: ಕಾಂತಾರ: ಚಾಪ್ಟರ್ 1 ಸಿನಿಮಾ ಅ.2 ರಂದು ರಿಲೀಸ್ ಆಗಲಿದೆ. ಇವತ್ತಿನಿಂದಲೇ ಅಡ್ವಾನ್ಸ್ ಬುಕಿಂಗ್ ಪ್ರಾರಂಭವಾಗಿದೆ. ಕಾಂತಾರ ಅಡ್ವಾನ್ಸ್ ಬುಕಿಂಗ್ ಹೆಚ್ಚಿದೆ. ಪಿವಿಆರ್, ಐನಾಕ್ಸ್ ಸೇರಿ ಹಲವು ಮಲ್ಟಿಫ್ಲೆಕ್ಸ್‌ಗಳಲ್ಲಿ ಚಿತ್ರಕ್ಕೆ ಸಾಕಷ್ಟು ಶೋ ನೀಡಲಾಗಿದೆ. ಸಿಂಗಲ್ ಸ್ಕ್ರೀನ್‌ಗಳ ಟಿಕೆಟ್‌ಗಳನ್ನು ಆನ್‌ಲೈನ್‌ನಲ್ಲಿ ಬಿಡಲಾಗಿದೆ. ಈಗಾಗಲೇ ಹಲವು ಶೋಗಳು ಸೋಲ್ಡ್‌ಔಟ್ ಆಗಿದೆ.

ಪಿವಿಆರ್ ಜೊತೆ ಹೊಂಬಾಳೆ ಒಪ್ಪಂದ ಮಾಡಕೊಂಡಿರುವುದರಿಂಧ ಐನಾಕ್ಸ್ ಹಾಗೂ ಪಿವಿಆರ್ ಇದ್ದ ಕಡೆ ಸಿನಿಮಾ ಶೋ ಹೆಚ್ಚಿದೆ ಎನ್ನಬಹುದು. ಕೋರ್ಟ್ ಆದೇಶದ ಪ್ರಕಾರ ಟಿಕೆಟ್ ದರ ವಿಷಯಕ್ಕೆ ಮಧ್ಯಂತರ ತಡೆ ನೀಡಿರುವುದರಿಂದ ಕಾಂತಾರ: ಚಾಪ್ಟರ್ 1 ಟಿಕೆಟ್ ದರದಲ್ಲಿ ಏರಿಕೆ ಆಗಿದೆ.
ಮಲ್ಟಿಪ್ಲೆಕ್ಸ್ಗಳಲ್ಲಿ ಕ್ಲಾಸಿಕ್ ಅಂದರೆ ಕೆಳ ಹಂತದ ಆಸನಗಳಿಗೆ 340-400 ರೂಪಾಯಿ ಆಸುಪಾಸಿನಲ್ಲಿ ಟಿಕೆಟ್ ದರ ನಿಗದಿ ಮಾಡಲಾಗಿದೆ. ಪ್ರೈಮ್ ಆಸನಗಳಿಗೆ 450-500 ರೂಪಾಯಿ ಟಿಕೆಟ್ ದರ ನಿಗದಿ ಆಗಿದೆ. ರಿಕ್ಲೈನರ್ ಆಸನಗಳಿಗೆ 800 ರೂಪಾಯಿ ಆಸುಪಾಸಿನಲ್ಲಿ ಟಿಕೆಟ್ ದರ ಇದೆ. ಥಿಯೇಟರ್ನಲ್ಲಿ 200 ರೂಪಾಯಿಯಿಂದ 350 ರೂಪಾಯಿ ಆಸುಪಾಸಿನಲ್ಲಿ ದರ ನಿಗದಿ ಆಗಿದೆ.
