1
ಮಂಗಳೂರು : ಕಾಂತಾರ ನಿರ್ದೇಶಕ ರಿಷಬ್ ಶೆಟ್ಟಿ ಮತ್ತು ಪ್ರಗತಿ ಶೆಟ್ಟಿ ಕಟೀಲಿಗೆ ಭೇಟಿ ನೀಡಿ ತಾಯಿ ದುರ್ಗಾಪರಮೇಶ್ವರಿಯ ದರುಶನ ಪಡೆದಿದ್ದಾರೆ.
ಕಾಂತಾರ ಸಿನಿಮಾ ಎಲ್ಲೆಡೆ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು, ಒಟಿಟಿಯಲ್ಲಿಯೂ ಸದ್ದು ಮಾಡುತ್ತಿದೆ. ರಿಷಬ್ ಹಾಗೂ ಪ್ರಗತಿ ಶೆಟ್ಟಿ ಸಿನಿಮಾ ಯಶಸ್ಸಿನ ನಂತರ ಸಾಕಷ್ಟು ದೇವಾಲಯಗಳಿಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದಾರೆ.
ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ಮುಖಂಡ ಮಿಥುನ್ ರೈ ಮೊದಲಾದವರಿದ್ದರು.
