Home » Kantilal Bhuria: ಇಬ್ಬರು ಹೆಂಡತಿ ಇರೋ ಗಂಡನಿಗೆ 2 ಲಕ್ಷ – ಕಾಂಗ್ರೆಸ್ ನಾಯಕನಿಂದ ಗ್ಯಾರಂಟಿ ಘೋಷಣೆ !!

Kantilal Bhuria: ಇಬ್ಬರು ಹೆಂಡತಿ ಇರೋ ಗಂಡನಿಗೆ 2 ಲಕ್ಷ – ಕಾಂಗ್ರೆಸ್ ನಾಯಕನಿಂದ ಗ್ಯಾರಂಟಿ ಘೋಷಣೆ !!

0 comments
Kantilal Bhuria

Kantilal Bhuria: ಸದ್ಯ ದೇಶದಲ್ಲಿ ನಡೆಯುತ್ತಿರುವ ಲೋಕಸಭಾ ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೆ ಬಂದರೆ ಪ್ರತಿಯೊಬ್ಬ ಮಹಿಳೆಗೂ ಒಂದು ಲಕ್ಷ ರೂಪಾಯಿಯನ್ನು ನೀಡುವ ಗ್ಯಾರಂಟಿಯನ್ನು ಈಗಾಗಲೇ ಕಾಂಗ್ರೆಸ್ ಘೋಷಣೆ ಮಾಡಿದೆ. ಆದರೀಗ ಈ ಬೆನ್ನಲ್ಲಿ ಕಾಂಗ್ರೆಸ್ ಅಭ್ಯರ್ಥಿಯೊಬ್ಬರು ಅಚ್ಚರಿಯ ಘೋಷಣೆಯನ್ನೊಂದು ಮಾಡಿದ್ದಾರೆ.

ಹೌದು, ಮಧ್ಯಪ್ರದೇಶದ(Madhyapradesh) ರತ್ಲಂ ಕ್ಷೇತ್ರದ ಅಭ್ಯರ್ಥಿಯಾಗಿರುವ ಕಾಂತಿಲಾಲ್ ಭುರಿಯಾ(Kantilal Bhuria), ಕಾಂಗ್ರೆಸ್‌ (Congress) ಪಕ್ಷ ಏನಾದರೂ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ, ಇಬ್ಬರು ಪತ್ನಿಯರು ಇರುವ ಪುರುಷರಿಗೆ 2 ಲಕ್ಷ ರೂ. ಸಿಗಲಿದೆ ಎಂದು ಹೊಸ ಗ್ಯಾರಂಟಿ ಘೋಷಿಸಿದ್ದಾರೆ.

ಇದನ್ನೂ ಓದಿ: ಪ್ರಜ್ವಲ್ ಪ್ರಕರಣ ಬಳಿಕ ‘ಮದುವೆಗೆ ಹಾಸನದ ಹೆಣ್ಣು ಬೇಡ ಅನ್ನುತ್ತಿದ್ದಾರೆ ಜನ’ ; ಮಹಿಳೆ ಆಕ್ರೋಶ

ಅಂದಹಾಗೆ ಈ ಮೊದಲೆ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲಿ ದೇಶದ ಪ್ರತಿ ಮಹಿಳೆಗೆ ‘ಮಹಾಲಕ್ಷ್ಮೀ ಯೋಜನೆ'(Mahalakshmi) ಯಡಿ ವರ್ಷಕ್ಕೆ 1 ಲಕ್ಷ ರೂಪಾಯಿಯನ್ನು ನೀಡೋದಾಗಿ ಭರವಸೆ ನೀಡಿತ್ತು. ಇದರ ಬೆನ್ನಲ್ಲಿಯೇ ಭುರಿಯಾ ಹೇಳಿಕೆ ಭಾರೀ ವಿವಾದ ಸೃಷ್ಟಿಸಿದೆ. ಅಲ್ಲದೆ ಅವರು ಪ್ರಧಾನಿ ನರೇಂದ್ರ ಮೋದಿ(PM Modi) ಯವರನ್ನೂ ಟೀಕಿಸಿ ಮಾತನಾಡಿದ್ದಾರೆ.

ಈ ಬೆನ್ನಲ್ಲೇ ಕಾಂಗ್ರೆಸ್‌ ಅಭ್ಯರ್ಥಿ ಹೇಳಿಕೆಗೆ ಬಿಜೆಪಿ(BJP) ಕಿಡಿಕಾರಿದೆ. ಇದು ಆಕ್ಷೇಪಾರ್ಹ ಹೇಳಿಕೆ. ಭೂರಿಯಾ ವಿರುದ್ಧ ಭಾರತ ಚುನಾವಣಾ ಆಯೋಗ ಕ್ರಮ ಕೈಗೊಳ್ಳಬೇಕು ಎಂದು ಹೇಳಿದೆ. ಬಿಜೆಪಿ ವಕ್ತಾರ ನರೇಂದ್ರ ಸಲೂಜಾ ಕಾಂತಿಲಾಲ್ ಭೂರಿಯಾ ಅವರ ಹೇಳಿಕೆಯನ್ನು ಪೋಸ್ಟ್‌ ಮಾಡಿದ್ದು, “140 ಕೋಟಿ ಜನರನ್ನು ಪ್ರತಿನಿಧಿಸುವ ದೇಶದ ಮುಖ್ಯಸ್ಥ” ವಿರುದ್ಧ ಅವರ ಹೇಳಿಕೆಗಳು “ಆಕ್ಷೇಪಾರ್ಹ” ಎಂದು ಟೀಕಿಸಿದ್ದಾರೆ.

ಇದನ್ನೂ ಓದಿ: Prajwal Revanna Case: ಪ್ರಜ್ವಲ್ ರೇವಣ್ಣನ ವಿಡಿಯೋ ಶೇರ್ ಮಾಡಿದ ‘ಪ್ರಜ್ವಲ್’ ನನ್ನು ಬಂಧಿಸಿದ ಪೋಲೀಸರು !!

You may also like

Leave a Comment