Home » Crime: ಕಾಪು: ಫಿಶ್‌ಮೀಲ್‌ ಸಂಸ್ಥೆಯಿಂದ 2 ಲಕ್ಷ ಡಾಲರ್‌ ಹಣ ಸೈಬರ್‌ ಕಳ್ಳರ ಪಾಲು!

Crime: ಕಾಪು: ಫಿಶ್‌ಮೀಲ್‌ ಸಂಸ್ಥೆಯಿಂದ 2 ಲಕ್ಷ ಡಾಲರ್‌ ಹಣ ಸೈಬರ್‌ ಕಳ್ಳರ ಪಾಲು!

by ಕಾವ್ಯ ವಾಣಿ
0 comments
Cyber Crime

Crime: ಉದ್ಯಾವರದ ಯಶಸ್ವಿ ಫಿಶ್‌ಮೀಲ್‌ ಮತ್ತು ಆಯಿಲ್‌ ಕಂಪೆನಿಯ ಸಹ ಕಂಪೆನಿ ಸುರಮಿ ಘಟಕಕ್ಕೆ ಯಂತ್ರೋಪಕರಣಗಳ ಖರೀದಿ ವಿಚಾರದಲ್ಲಿ ಹಾಂಕಾಂಗ್‌ನ ವಿತರಕ ಕಂಪೆನಿಯೊಂದಿಗೆ ಮಾಡಿಕೊಂಡಿದ್ದ ಖರೀದಿ ಒಪ್ಪಂದದ ಸುಳಿವಿನ ಆಧಾರದಲ್ಲಿ ಸೈಬರ್‌ ಕಳ್ಳರು ಯಶಸ್ವಿ ಫಿಶ್‌ಮೀಲ್‌ ಕಂಪೆನಿಯೊಂದಿಗೆ ನಕಲಿ ಇಮೇಲ್‌ ಐಡಿ ಮೂಲಕ ಸಂಪರ್ಕ ಸಾಧಿಸಿ 2 ಲಕ್ಷ ಡಾಲರ್‌ ಹಣವನ್ನು ತಮ್ಮ ಖಾತೆಗೆ ಜ. 23ರಂದು ವರ್ಗಾಯಿಸಿಕೊಂಡಿದ್ದಾರೆ.

ಈ ವಂಚನೆ ಪ್ರಕರಣ ಹಾಂಕಾಂಗ್‌ನ ವಿತರಕ ಕಂಪೆನಿಯ ಪಾಸ್ಕಲ್‌ ಎಂಬವರು ಯಶಸ್ವಿ ಫಿಶ್‌ಮೀಲ್‌ ಕಂಪೆನಿಗೆ ಬಂದ ಸಮಯದಲ್ಲಿ ಬೆಳಕಿಗೆ ಬಂದಿದ್ದು, ಈ ಕುರಿತಾಗಿ (Crime) ಕಾಪು ಪೊಲೀಸ್‌ ಠಾಣೆಗೆ ಯಶಸ್ವಿ ಫಿಶ್‌ಮೀಲ್‌ ಕಂಪೆನಿಯ ಆಡಳಿತ ವಿಭಾಗದ ಮುಖ್ಯಸ್ಥರು ದೂರು ನೀಡಿದ್ದು ತನಿಖೆ ಮುಂದುವರಿದಿದೆ.

You may also like