7
Mangaluru: ಮನೆಯೊಂದಕ್ಕೆ ನುಗ್ಗಿ ಕಳ್ಳರು ನಗ-ನಗದು ಸಹಿತ ಕದ್ದೊಯ್ದ ಘಟನೆ ಕಾಪುವಿನ ಮಲ್ಲಾರು ಎಂಬಲ್ಲಿ ನಡೆದಿದೆ. ಆರ್.ಡಿ ಮಂಜಿಲ್ ಎಂಬ ಮನೆಯಲ್ಲಿ ಈ ಘಟನೆ ನಡೆದಿದೆ.
ಮನೆಯವರು ಸೌದಿ ಅರೇಬಿಯಾದಲ್ಲಿ ವಾಸವಿದ್ದು ಪ್ರತೀ ಎರಡು ಮೂರು ತಿಂಗಳಿಗೊಮ್ಮೆ ಬಂದು ಹೋಗುತ್ತಿರುತ್ತಾರೆ. ಮನೆಯೊಡತಿಯ ಮಗ ಇಮ್ರಾನ್ ಅವರು ಮನೆಗೆ ಬಂದಾಗ ಮನೆಯ ಸಿಸಿ ಕ್ಯಾಮೆರಾ ತಿರುಗಿರುವುದರ ಬಗ್ಗೆ ಗಮನಿಸಿದ್ದಾರೆ.
ಇಮ್ರಾನ್ ಮೊಬೈಲ್ ಮೂಲಕ ಸಿಸಿಟಿವಿ ದೃಶ್ಯ ಪರಿಶೀಲಿಸಿದಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ. ಹಣ, 60 ಸಾವಿರ ಬೆಲೆ ಬಾಳುವ ವಾಚ್, ಇತ್ಯಾದಿ ಅನೇಕ ವಸ್ತುಗಳನ್ನು ಎಗರಿಸಿದ್ದಾರೆ. ಈ ಬಗ್ಗೆ ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
