1
Karkala: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಪ್ರತಿಷ್ಠಿತ ಕಂಬಳ ಕೂಟಗಳಲ್ಲಿ ಒಂದಾದ ಮಿಯ್ಯಾರು (Karkala) ಲವಕುಶ ಜೋಡುಕರೆ ಕಂಬಳ ಕೂಟವು ಮಾ.15ಶನಿವಾರ ಬೆಳಿಗ್ಗೆ 8.00ಗಂಟೆಯಿಂದ ಪ್ರಾರಂಭವಾಗಲಿದೆ ಎಂದು ಎಂದು ಮಿಯ್ಯಾರು ಕಂಬಳ ಸಮಿತಿಯ ಅಧ್ಯಕ್ಷರು ಹಾಗೂ ಕ್ಷೇತ್ರದ ಶಾಸಕರು ಆಗಿರುವ ವಿ. ಸುನಿಲ್ ಕುಮಾರ್ ಮತ್ತು ಕಾರ್ಯಾಧ್ಯಕ್ಷರಾಗಿರುವ ಜೀವನ್‌ದಾಸ್ ಅಡ್ಯಂತಾಯರವರು ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಈ ವರ್ಷ ಕೂಡ ಸುಮಾರು 250ಕ್ಕೂ ಹೆಚ್ಚು ಜೋಡಿ ಓಟದ ಕೋಣಗಳು ಭಾಗವಹಿಸುವ ನಿರೀಕ್ಷೆಯಿದ್ದು, ಜೊತೆಗೆ
ಕಂಬಳ ಕ್ಷೇತ್ರದಲ್ಲಿ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಸಾಧನೆಗೈದ ನಾಲ್ಕು ಜನ ಸಾಧಕರನ್ನು ಈ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಗುವುದು. ಈ ಕಂಬಳ ಕ್ರೀಡೋತ್ಸವಕ್ಕೆ ಎಲ್ಲಾ ಕೋಣಗಳ ಯಜಮಾನರಿಗೆ, ಓಟಗಾರರಿಗೆ, ಕಂಬಳ ಕ್ರೀಡಾ ಪ್ರೇಮಿಗಳಿಗೆ ಆತ್ಮೀಯ ಸ್ವಾಗತ ಎಂದು ಪ್ರಕಟಣೆಯಲ್ಲಿ ಕಂಬಳ ಸಮಿತಿ ತಿಳಿಸಿದ್ದಾರೆ.
