Home » Karkala: ಬೈಕಿನಲ್ಲಿ ಹೋಗುತ್ತಿದ್ದಾಗ ಅಡ್ಡ ಬಂದ ನಾಯಿ; ಎರಡು ತಿಂಗಳ ಹಿಂದಷ್ಟೇ ಮದುವೆಯಾದ ಯುವತಿ ಸಾವು

Karkala: ಬೈಕಿನಲ್ಲಿ ಹೋಗುತ್ತಿದ್ದಾಗ ಅಡ್ಡ ಬಂದ ನಾಯಿ; ಎರಡು ತಿಂಗಳ ಹಿಂದಷ್ಟೇ ಮದುವೆಯಾದ ಯುವತಿ ಸಾವು

0 comments
Karkala

Karkala: ನಾಯಿಯೊಂದು ಬೈಕ್‌ಗೆ ಅಡ್ಡ ಬಂದ ಪರಿಣಾಮ ಬೈಕ್‌ ಪಲ್ಟಿಯಾಗಿ ನವವಿವಾಹಿತೆಯೊಬ್ಬರು ದಾರುಣವಾಗಿ ಸಾವಿಗೀಡಾದ ಘಟನೆಯೊಂದು ಹೊಸ್ಮಾರು ಬಳಿ ನಡೆದಿದೆ.

Actor Darshan: ಪರಪ್ಪನ ಅಗ್ರಹಾರದಲ್ಲಿ ಜೈಲು ಅಧಿಕಾರಿಗಳು ತಲೆನೋವಾಗಿ ಪರಿಣಮಿಸಿದ ದರ್ಶನ್‌

ವಿಶಾಲ್‌ ಅವರ ಪತ್ನಿ ನೀಕ್ಷಾ (26) ಎಂಬುವವರೇ ಮೃತ ಮಹಿಳೆ. ಕಾರ್ಕಳ ಗುರುವಾಯನಕೆರೆ ರಸ್ತೆಯ ಹೊಸ್ಮಾರು ಸೇತುವೆ ಬಳಿ ಜೂ.28 ರ ಸಂಜೆ ತನ್ನ ಗಂಡನೊಂದಿಗೆ ಬೈಕ್‌ನಲ್ಲಿ ಹೋಗುತ್ತಿದ್ದಾಗ ನಾಯಿ ದಿಢೀರ್‌ ಅಡ್ಡ ಬಂದಿದ್ದು, ಬೈಕ್‌ ರಸ್ತೆಗೆಸೆಯಲ್ಪಟ್ಟಿತ್ತು.

ಸಹಸವಾರೆ ನೀಕ್ಷಾ ಅವರಿಗೆ ಈ ಅಪಘಾತದಲ್ಲಿ ತೀವ್ರ ಗಾಯವಾಗಿದ್ದು, ಆಸ್ಪತ್ರೆಗೆ ಕರೆದೊಯ್ಯುವ ಸಂದರ್ಭದಲ್ಲಿ ದಾರಿ ಮಧ್ಯೆ ಕೊನೆಯುಸಿರೆಳೆದಿದ್ದಾರೆ ಎನ್ನಲಾಗಿದೆ.

ನವವಿವಾಹಿತೆ ಈದು ಗ್ರಾಮ ಕರೆಂಬಾಲುವಿನ ವಿಶಾಲ್‌ ಅವರ ಪತ್ನಿ ನೀಕ್ಷಾ ಇವರಾಗಿದ್ದು, ಇವರ ಮದುವೆ ಎರಡು ತಿಂಗಳ ಹಿಂದಷ್ಟೇ ನಡೆದಿತ್ತು.

ನೀಕ್ಷಾ ಅವರ ತಂದೆ ಪ್ರೀತಿ ಟೈಮ್ಸ್‌ ಸೆಂಟರ್‌ ಮಾಲಕರಾದ ಪ್ರಕಾಶ್‌ ಅವರು ಒಂಭತ್ತು ತಿಂಗಳ ಹಿಂದೆ ಮೃತ ಹೊಂದಿದ್ದರು. ನೀಕ್ಷಾ ಅವರ ಮೃತದೇಹ ಕಾರ್ಕಳ ಸರಕಾರಿ ಆಸ್ಪತ್ರೆಯ ಶವಾಗಾರದಲ್ಲಿದೆ ಎಂದು ವರದಿಯಾಗಿದೆ.

Uppinangady: ಸಾಕು ನಾಯಿಯಿಂದ ತಪ್ಪಿತು ಮನೆಯೊಡತಿಯ ಆತ್ಮಹತ್ಯೆ; ಕುತೂಹಲಕಾರಿ ಘಟನೆ ವಿವರ ಇಲ್ಲಿದೆ

You may also like

Leave a Comment