2
Karkala: ಕಾರ್ಕಳ (Karkala) ಎಳ್ಳಾರೆ ಗ್ರಾಮ ಮಂಜರಬೆಟ್ಟು ನಿವಾಸಿ ರಮೇಶ ಇವರ ಮಗ ತೇಜಸ್ (17) ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಾ. 27ರಂದು ನಡೆದಿದೆ.
ತೇಜಸ್ 10 ನೇ ತರಗತಿಯಲ್ಲಿ ಕೆಲವು ವಿಷಯಗಳಲ್ಲಿ ಅನುತ್ತೀರ್ಣಗೊಂಡಿದ್ದು, ನಂತರ ಅಜೆಕಾರಿನಲ್ಲಿ ಟ್ಯೂಷನ್ ಪಡೆದು ಎಸ್.ಎಸ್‌ಎಲ್.ಸಿ ಸಪ್ಲಿಮೆಂಟರಿ ಪರೀಕ್ಷೆ ಬರೆದಿದ್ದು, ಅದರಲ್ಲಿ ಕೂಡ ಅನುತ್ತೀರ್ಣಗೊಂಡ ಕಾರಣ ಜೀವನದಲ್ಲಿ ಜಿಗುಪ್ಸೆಗೊಂಡು ತೆರೆದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಬಗ್ಗೆ ಅಜೆಕಾರು ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
