Home » ಕಾರ್ಕಳ : ನಿಟ್ಟೆಯ ಶ್ಯಾಮ ಕೋಟ್ಯಾನ್ ನಾಪತ್ತೆ

ಕಾರ್ಕಳ : ನಿಟ್ಟೆಯ ಶ್ಯಾಮ ಕೋಟ್ಯಾನ್ ನಾಪತ್ತೆ

by Praveen Chennavara
0 comments

ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ನಿಟ್ಟೆ ಗ್ರಾಮದ ಮಜಾಲು ದರ್ಖಾಸ್ ಹೌಸ್ ಎಂಬಲ್ಲಿಯ ಶ್ಯಾಮ ಕೋಟ್ಯಾನ್ (65) ಎಂಬವರು ಸೆ. 13ರ ಸೋಮವಾರ ಬೆಳಗ್ಗೆ ಮನೆಯಿಂದ ಹೋದವರು ಕಾಣೆಯಾಗಿದ್ದಾರೆ.

ಇವರು ಮನೆಯಿಂದ ಹೋದಾಗ ಗುಲಾಬಿ ಬಣ್ಣದ ಶರ್ಟ್ ಹಾಗೂ ಕಂದು ಬಣ್ಣದ ಲುಂಗಿ ಧರಿಸಿದ್ದು, ಕನ್ನಡ, ತುಳು, ಹಿಂದಿ ಭಾಷೆ ಮಾತನಾಡುತ್ತಾರೆ.

ಈ ಬಗ್ಗೆ ಇವರ ಮಗಳು ಶ್ರೀಮತಿ ಅಖಿಲಾರವರು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಇವರನ್ನು ಕಂಡಲ್ಲಿ ಕಾರ್ಕಳ ಪೊಲೀಸ್ ಠಾಣೆಗೆ ಅಥವಾ 9768219432 ಸಂಖ್ಯೆಗೆ ತಿಳಿಸಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

You may also like

Leave a Comment