Home » ಕಾರ್ಕಳ : ವಿಕಲಚೇತನ ಮಗನನ್ನು ಬಾವಿಗೆ ತಳ್ಳಿ, ಆತ್ಮಹತ್ಯೆ ಮಾಡಿಕೊಂಡ ತಂದೆ!

ಕಾರ್ಕಳ : ವಿಕಲಚೇತನ ಮಗನನ್ನು ಬಾವಿಗೆ ತಳ್ಳಿ, ಆತ್ಮಹತ್ಯೆ ಮಾಡಿಕೊಂಡ ತಂದೆ!

0 comments

ಕಾರ್ಕಳ: ತನ್ನ ವಿಕಲಚೇತನ ಪುತ್ರನನ್ನು ಬಾವಿಗೆ ತಳ್ಳಿ, ನಂತರ ತಂದೆ ಕೂಡಾ ಆತ್ಮಹತ್ಯೆ ಮಾಡಿಕೊಂಡಂತಹ ಹೃದಯ ವಿದ್ರಾವಕ ಘಟನೆ ತಾಲೂಕು ಕೆರ್ವಾಶೆಯ ಗ್ರಾಮದಲ್ಲಿ ನಡೆದಿದೆ.

ಪಾಚರಬೆಟ್ಟು ಕೃಷ್ಣ ಪೂಜಾರಿ ಎಂಬುವರು ತನ್ನ ವಿಕಲಚೇತನ ಪುತ್ರ ದಿಪೇಶ್ (26)ನನ್ನು ಮನೆ ಸಮೀಪದ ಬಾವಿಗೆ ತಳ್ಳಿ ತಾನೂ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕೃಷ್ಣ ಪೂಜಾರಿ ಅವರ ಪತ್ನಿ ಅನಾರೋಗ್ಯಕ್ಕೀಡಾಗಿದ್ದು, ಇದ್ದ ಓರ್ವ ಮಗನೂ ವಿಕಲಚೇತನ ಎಂದು ಮನನೊಂದು ಕೃಷ್ಣ ಪೂಜಾರಿ ಈ ಕೃತ್ಯವೆಸಗಿದ್ದಾರೆ ಎನ್ನಲಾಗುತ್ತಿದೆ.

ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.

You may also like

Leave a Comment