Home » Karma Hit back: ಸಿಬಿಐಗೆ ನಿರ್ಬಂಧ: ಸಿಎಂ ಸಿದ್ವಿಲಾಸಕ್ಕೆ ಉಘೇಉಘೇ: ಸಿದ್ದಾಪರಾದ ಸಾಬೀತಿಗೆ ಇನ್ನೊಂದೇ ಹೆಜ್ಜೆ – ಹೆಚ್‌ಡಿಕೆ ಟಾಂಗ್

Karma Hit back: ಸಿಬಿಐಗೆ ನಿರ್ಬಂಧ: ಸಿಎಂ ಸಿದ್ವಿಲಾಸಕ್ಕೆ ಉಘೇಉಘೇ: ಸಿದ್ದಾಪರಾದ ಸಾಬೀತಿಗೆ ಇನ್ನೊಂದೇ ಹೆಜ್ಜೆ – ಹೆಚ್‌ಡಿಕೆ ಟಾಂಗ್

5 comments

Karma Hit back: ರಾಜ್ಯದಲ್ಲಿ ಕೇಂದ್ರೀಯ ತನಿಖಾ ದಳದ (CBI) ಪ್ರವೇಶಕ್ಕೆ ಇದ್ದ ಮುಕ್ತ ಅವಕಾಶವನ್ನು ಹಿಂಪಡೆದಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ(Congress Govt) ಕ್ರಮವನ್ನು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ(MP H D Kumaraswami) ಅವರು ಕಟುವಾಗಿ ಟೀಕಿಸಿದ್ದಾರೆ. ಸಿಬಿಐಗೆ ನಿರ್ಬಂಧ ಹಾಕಿರುವುದು ಎಂದರೆ ಮುಖ್ಯಮಂತ್ರಿ(CM) ಮೂಡಾ ಅಕ್ರಮ(MUDA Scam) ಒಪ್ಪಿಕೊಂಡಂತೆ ಆಗಿದೆ ಎಂದಿದ್ದಾರೆ.

ಶ್ರೀಮಾನ್ ಸಿದ್ದರಾಮಯ್ಯನವರೇ.. ನಿಮ್ಮ ‘ಸಿದ್ವಿಲಾಸ’ಕ್ಕೆ ಉಘೇಉಘೇ ಎನ್ನಲೇಬೇಕು ಎಂದು ಕೇಂದ್ರ ಸಚಿವರು ವ್ಯಂಗ್ಯವಾಗಿ ಕುಟುಕಿ, ಲೇವಡಿ ಮಾಡಿದ್ದಾರೆ. ಆವತ್ತು ಹಗರಣಗಳಿಂದ ತಪ್ಪಿಸಿಕೊಳ್ಳಲು ಲೋಕಾಯುಕ್ತಕ್ಕೇ ಸಮಾಧಿ ಕಟ್ಟಿ ಎಸಿಬಿ ರಚನೆ ಮಾಡಿಕೊಂಡ್ರಿ. ಈಗ ಮೂಡಾಗರಣದಿಂದ ತಪ್ಪಿಸಿಕೊಳ್ಳು ಅದೇ ಲೋಕಾಯುಕ್ತವೇ ಗತಿ ಆಗಿದೆ. ಕರ್ಮ ಹಿಟ್ ಬ್ಯಾಕ್ (Karma Hit back) ಎಂದರೇ ಇದೇ ಅಲ್ಲವೇ ಸಿದ್ದರಾಮಯ್ಯನವರೇ? ಎಂದು ತೀಕ್ಷ್ಣವಾಗಿ ಪ್ರಶ್ನಿಸಿದ್ದಾರೆ.

ನಿಮ್ಮ ಗ್ರಹಚಾರಕ್ಕೆ ಎಸಿಬಿಯನ್ನೂ ಹೈಕೋರ್ಟ್ ಬರ್ಖಾಸ್ತು ಮಾಡಿಬಿಟ್ಟಿತು. ಆದರೆ ಈಗ ಲೋಕಾಯುಕ್ತವನ್ನೇ ಗುರಾಣಿಯಾಗಿ ಮಾಡಿಕೊಂಡು ಸಿಬಿಐ ರಾಜ್ಯಕ್ಕೆ ಪ್ರವೇಶ ಮಾಡದಂತೆ ಸಂಪುಟದಿಂದ ಬಾಗಿಲು ಬಂದ್ ಮಾಡಿಸಿದ್ರಿ. ಅಲ್ಲಿಗೆ ಆರೋಪಿ ಅಂತ ಇದ್ದವರು ಅಪರಾಧಿಯಾದ ಎಂದೇ ಲೆಕ್ಕ. ‘ಸಿದ್ದಾಪರಾದ’ ಸಾಬೀತಿಗೆ ಇನ್ನೊಂದೇ ಹೆಜ್ಜೆ ಬಾಕಿ ಇದೆ ಎಂದು ಕೇಂದ್ರ ಸಚಿವರು ಸಿಎಂಗೆ ಟಾಂಗ್ ನೀಡಿದ್ದಾರೆ. ನಾನು ಭಾವಿಸಿದಷ್ಟು ಧೈರ್ಯವಂತರು ಅಲ್ಲ ನೀವು. ನಿಮಗೂ ಭಯವಿದೆ! ಅದೇ ಈ ನೆಲದ ಕಾನೂನಿನ ಶಕ್ತಿ. ಏನಂತೀರಿ ಸಿದ್ಧರಾಮಯ್ಯನವರೇ? ಎಂದು ಕೇಂದ್ರ ಸಚಿವರು ಕಾಲೆಳೆದಿದ್ದಾರೆ.

You may also like

Leave a Comment