Home » Climate Risk: ಕರ್ನಾಟಕ ಸೇರಿ 14 ರಾಜ್ಯಗಳಿಗೆ ಭಾರಿ ಪ್ರವಾಹದ ಅಪಾಯ – ಆತಂಕಕಾರಿ ವರದಿ ಬಿಡುಗಡೆ

Climate Risk: ಕರ್ನಾಟಕ ಸೇರಿ 14 ರಾಜ್ಯಗಳಿಗೆ ಭಾರಿ ಪ್ರವಾಹದ ಅಪಾಯ – ಆತಂಕಕಾರಿ ವರದಿ ಬಿಡುಗಡೆ

0 comments
climate risk

Climate Risk: ಕರ್ನಾಟಕ ಸೇರಿ 14 ರಾಜ್ಯಗಳಿಗೆ ಭಾರಿ ಪ್ರವಾಹದ ಅಪಾಯವಿದೆ ಎಂಬ ಆತಂಕಕಾರಿ ವರದಿ ಬಿಡುಗಡೆಯಾಗಿದ್ದು, ಹವಾಮಾನ ವೈಪರಿತ್ಯದಿಂದ (Climate Risk) ರಾಜ್ಯಗಳು ಭಾರೀ ಪ್ರವಾಹಕ್ಕೆ ಒಳಗಾಗಳಿವೆ, ಈ ಪಟ್ಟಿಯಲ್ಲಿ ಕರ್ನಾಟಕ(Karnataka) ಸೇರಿದಂತೆ 14 ರಾಜ್ಯಗಳಿವೆ ಎಂದು ಅಧ್ಯಯನದ ವರದಿ ತಿಳಿಸಿದೆ.

ಆಸ್ಪ್ರೇಲಿಯಾದ ಕ್ರಾಸ್‌ ಡಿಪೆಂಡೆನ್ಸಿ ಇನಿಶಿಯೇಟಿವ್‌ (ಎಕ್ಸ್‌ ಡಿಐ) ಎಂಬ ಸಂಸ್ಥೆಯು, ​​2050ರ ವೇಳೆಗೆ ವಿಶ್ವದಾದ್ಯಂತ 2,600 ಭೂಪ್ರದೇಶಗಳು ಪರಿಸರ ನಾಶ, ಹವಾಮಾನ ವೈಪರೀತ್ಯದಿಂದ ಎದುರಿಸಬಹುದಾದ ಹಾನಿಯನ್ನು ಅಂದಾಜಿಸಿ, ‘ಗ್ರಾಸ್‌ ಡೊಮೆಸ್ಟಿಕ್‌ ಕ್ಲೈಮೇಟ್‌ ರಿಸ್ಕ್‌’ (Gross domestic Climate Risk) ಸಿದ್ದಪಡಿಸಿದ್ದು, ವರದಿಯಲ್ಲಿ ಸಂಭಾವ್ಯ ಅಪಾಯದ 100 ಪ್ರದೇಶಗಳ ಪಟ್ಟಿಯಲ್ಲಿ ಭಾರತದ 14 ರಾಜ್ಯಗಳಿವೆ.

ಪಟ್ಟಿಯಲ್ಲಿ ಕರ್ನಾಟಕ, ಬಿಹಾರ, ಉತ್ತರ ಪ್ರದೇಶ, ಅಸ್ಸಾಂ, ರಾಜಸ್ಥಾನ, ತಮಿಳುನಾಡು, ಮಹಾರಾಷ್ಟ್ರ, ಗುಜರಾತ್‌, ಪಂಜಾಬ್‌, ಕೇರಳ, ಮಧ್ಯಪ್ರದೇಶ, ಪಶ್ಚಿಮ ಬಂಗಾಳ, ಹರಿಯಾಣ ಮತ್ತು ಆಂಧ್ರ ಪ್ರದೇಶಗಳು ಇದ್ದು, ಈ ಪಟ್ಟಿಯಲ್ಲಿ ಕರ್ನಾಟಕ 65ನೇ ಸ್ಥಾನದಲ್ಲಿದೆ. ಈ ನೂರು ಪ್ರದೇಶಗಳ ಪಟ್ಟಿಯಲ್ಲಿ ಚೀನಾ, ಅಮೆರಿಕ ಮತ್ತು ಭಾರತ ಟಾಪ್ ಮೂರರಲ್ಲಿ ಸ್ಥಾನ ಪಡೆದಿವೆ.

ಸಂಸ್ಥೆಯ ನಿರ್ದೇಶಕ ಕಾರ್ಲ್ ಮಲ್ಲೋನ್‌, 320 ದಶಲಕ್ಷ ದತ್ತಾಂಶಗಳನ್ನು ಒಟ್ಟುಗೂಡಿಸಿ ಮಾನವ ನಿರ್ಮಿತ ಪರಿಸರ ಮತ್ತು ಹವಾಮಾನ ಬದಲಾವಣೆಯ ಪ್ರಭಾವವನ್ನು ಸಂಯೋಜಿಸಿ ಈ ಅಧ್ಯಯನ ವರದಿ ಸಿದ್ಧಪಡಿಸಲಾಗಿದೆ ಎಂದು ಹೇಳಿದ್ದಾರೆ.

2050ರ ವೇಳೆಗೆ 2,600ಕ್ಕೂ ಹೆಚ್ಚು ಪ್ರದೇಶಗಳಲ್ಲಿನ ಮಾನವ ನಿರ್ಮಿತ ಹವಾಮಾನ ಅಪಾಯದ ಸಂಭಾವ್ಯತೆಯನ್ನು ಸಂಸ್ಥೆ ಅಧ್ಯಯನ ನಡೆಸಿದೆ. ವರದಿಯಲ್ಲಿ, ಹೆಚ್ಚು ಸುಸಜ್ಜಿತವಾಗಿ ನಿರ್ಮಾಣವಾದ ರಾಜ್ಯ ಹೆಚ್ಚಿನ ಅಪಾಯಕ್ಕೆ ಒಳಗಾಗಲಿದೆ. ಈ ವರದಿ ಹವಾಮಾನಕ್ಕೆ ಸಂಬಂಧಿಸಿದ ಎಂಟು ವಿಭಿನ್ನ ಅಪಾಯಗಳಲ್ಲಿ ಪ್ರವಾಹವನ್ನು ಮಾತ್ರ ಪರಿಗಣಿಸಿದೆ.

2050ರಲ್ಲಿ ಪ್ರಾಕೃತಿಕ ವಿಕೋಪಕ್ಕೆ ಒಳಗಾಗುವ ಟಾಪ್ 100 ಸ್ಥಳಗಳಲ್ಲಿ ಚೀನಾ ಮೊದಲ ಸ್ಥಾನದಲ್ಲಿದೆ. ಭಾರತ ಎರಡನೇ ಸ್ಥಾನ ಪಡೆದಿದೆ. ಇದರಲ್ಲಿ, ಕೈಗಾರಿಕೆಗಳು, ನಗರಗಳು, ವಿಪರೀತ ಬದಲಾಗುವ ವಾತಾವರಣ, ನೆಲ ಹಾಗೂ ನದಿ ಪ್ರವಾಹಗಳು, ಪಟ್ಟಣಗಳಂತಹ ಮಾನವ ನಿರ್ಮಿತ ಮೂಲಸೌಕರ್ಯಗಳು ಹೆಚ್ಚಿರುವ ಪ್ರದೇಶ ಪ್ರಾಕೃತಿಕ ವಿಕೋಪಗಳಿಗೆ ಒಳಗಾಗುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಲಾಗಿದೆ.

You may also like

Leave a Comment