Home » Karnataka Cabinet : ಸಚಿವ ಸಂಪುಟ ಸರ್ಜರಿಗೆ ಹೈಕಮಾಂಡ್ ಗ್ರೀನ್ ಸಿಗ್ನಲ್ – ಯಾರು ಔಟ್? ಯಾರು ಇನ್?

Karnataka Cabinet : ಸಚಿವ ಸಂಪುಟ ಸರ್ಜರಿಗೆ ಹೈಕಮಾಂಡ್ ಗ್ರೀನ್ ಸಿಗ್ನಲ್ – ಯಾರು ಔಟ್? ಯಾರು ಇನ್?

0 comments

Karnataka Cabinet : ರಾಜ್ಯ ಸಚಿವ ಸಂಪುಟ ಪುನರ್ ರಚನೆ ಕುರಿತು ಸಾಕಷ್ಟು ದಿನಗಳಿಂದ ಚರ್ಚೆಯಾಗುತ್ತಿತ್ತು. ಇದೀಗ ಸಂಪುಟಕ್ಕೆ ಮೇಜರ್ ಸರ್ಜರಿ ನೀಡಲು ಹೈಕಮಾಂಡ್ ಒಪ್ಪಿಗೆ ನೀಡಿದ್ದು, ಸದ್ಯದಲ್ಲೇ ಇದು ನಡೆಯಲಿದೆ. ಹಾಗಿದ್ರೆ ಯಾರು ಸಂಪುಟಕ್ಕೆ ಸೇರ್ಪಡೆಯಾಗುತ್ತಾರೆ? ಯಾರು ಸಂಪುಟದಿಂದ ಹೊರ ನಡೆಯುತ್ತಾರೆ? ಎಂಬ ಸಂಭಾವ್ಯರ ಪಟ್ಟಿ ಇಲ್ಲಿದೆ ನೋಡಿ.

ಸಂಪುಟ ಪುನರ್‌ರಚನೆ ಹಿನ್ನೆಲೆಯಲ್ಲಿ ಹಲವಾರು ಹಾಲಿ ಸಚಿವರಿಗೆ ಸಚಿವ ಸ್ಥಾನದಿಂದ ವಿದಾಯ ನೀಡಿ, ಅವರನ್ನು ಪಕ್ಷದ ಸಂಘಟನಾ ಚಟುವಟಿಕೆಗಳಲ್ಲಿ ತೊಡಗಿಸಲು ನಿರ್ಧರಿಸಲಾಗಿದೆ. ಇದೇ ವೇಳೆ ಯುವ ಮುಖಂಡರು ಹಾಗೂ ಪಕ್ಷದ ನಿಷ್ಠಾವಂತ ನಾಯಕರು ಸಂಪುಟಕ್ಕೆ ಪ್ರವೇಶ ಪಡೆಯುವ ಸಾಧ್ಯತೆ ಇದೆ. ಬೆಳಗಾವಿ ಅಧಿವೇಶನದ ವೇಳೆಗೆ ಹೊಸ ಸಂಪುಟದೊಂದಿಗೆ ಸರ್ಕಾರ ಸಜ್ಜಾಗಲು ಸಿಎಂ ತಂತ್ರ ರೂಪಿಸಿದ್ದಾರೆ. ನವೆಂಬರ್ ತಿಂಗಳ ಕೊನೆಯ ವಾರದಲ್ಲಿ ಸಂಪುಟ ಪುನರ್‌ರಚನೆ ಖಚಿತವಾಗುವ ಸಾಧ್ಯತೆ ಹೆಚ್ಚಾಗಿದೆ. ಈ ಕುರಿತ ಅಂತಿಮ ನಿರ್ಧಾರ ಬಿಹಾರ ಚುನಾವಣೆ ಫಲಿತಾಂಶದ ಬಳಿಕ ಹೊರ ಬೀಳುವ ನಿರೀಕ್ಷೆಯಿದೆ.

ಸಂಪುಟದಿಂದ ಯಾರೆಲ್ಲ ಔಟ್?
ಕೆ.ಹೆಚ್.ಮುನಿಯಪ್ಪ- ಆಹಾರ ಮತ್ತು ನಾಗರೀಕ ಸರಬರಾಜು (ದೇವನಹಳ್ಳಿ)
ದಿನೇಶ್ ಗುಂಡೂರಾವ್- ಆರೋಗ್ಯ ಸಚಿವ (ಗಾಂಧಿನಗರ)
ಹೆಚ್.ಸಿ.ಮಹದೇವಪ್ಪ- ಸಮಾಜ ಕಲ್ಯಾಣ ( ಟಿ.ನರಸೀಪುರ)
ಶರಣಬಸ್ಪ ದರ್ಶನಾಪುರ್- ಸಣ್ಣ ಕೈಗಾರಿಕೆ (ಶಹಾಪುರ್)
ಎನ್.ಎಸ್.ಬೋಸರಾಜು- ಸಣ್ಣ ನೀರಾವರಿ ವಿಜ್ಞಾನ ತಂತ್ರಜ್ಞಾನ (ವಿಧಾನ ಪರಿಷತ್)
ಡಾ.ಎಂ.ಸಿ.ಸುಧಾಕರ- ಉನ್ನತ ಶಿಕ್ಷಣ ಸಚಿವ(ಚಿಂತಾಮಣಿ)
ಶಿವಾನಂದ ಪಾಟೀಲ್- ಸಕ್ಕರೆ ಮತ್ತು ಜವಳಿ(ಬಸವನ ಬಾಗೇವಾಡಿ)
ರಹೀಂಖಾನ್- ಪೌರಾಡಳಿತ(ಬೀದರ್)
ಎಸ್.ಎಸ್.ಮಲ್ಲಿಕಾರ್ಜುನ- ತೋಟಗಾರಿಕೆ ಮತ್ತ ಗಣಿ (ದಾವಣಗೆರೆ)
ಆರ್.ಬಿ.ತಿಮ್ಮಾಪುರ್- ಅಬಕಾರಿ (ಮುದೋಳ)
ಕೆ.ವೆಂಕಟೇಶ್- ಪಶು ಸಂಗೋಪನೆ(ಪಿರಿಯ ಪಟ್ಟಣ)
ಡಿ.ಸುಧಾಕರ್- ಯೋಜನೆ ಮತ್ತು ಸಾಂಖ್ಯಿಕ (ಹಿರಿಯೂರು)

ಹೊಸದಾಗಿ ಸೇರುವವರು?
ಯು.ಟಿ.ಖಾದರ್ – ವಿಧಾನಸಭೆ ಸ್ಪೀಕರ್
ಕೆ.ಎನ್.ರಾಜಣ್ಣ – ಮಧುಗಿರಿ ಶಾಸಕ
ಆರ್.ವಿ.ದೇಶಪಾಂಡೆ – ಹಳಿಯಾಳ ಶಾಸಕ
ಬಿ.ಕೆ.ಹರಿಪ್ರಸಾದ್ – ವಿಧಾನ ಪರಿಷತ್ ಸದಸ್ಯ
ಎಂ.ಕೃಷ್ಣಪ್ಪ – ವಿಜಯನಗರ ಶಾಸಕ
ತನ್ವೀರ್‌ಸೇಠ್ – ನರಸಿಂಹರಾಜ ಶಾಸಕ
ಸಲೀಂ ಅಹಮದ್ – ವಿಧಾನ ಪರಿಷತ್ ಸದಸ್ಯ
ರಿಜ್ವಾನ್ ಅರ್ಷದ್ – ಶಿವಾಜಿನಗರ ಶಾಸಕ
ಮಾಗಡಿ ಬಾಲಕೃಷ್ಣ – ಮಾಗಡಿ ಶಾಸಕ
ಎನ್.ಎ.ಹ್ಯಾರಿಸ್ – ಶಾಸಕ
ರೂಪಕಲಾ ಶಶಿಧರ್ – ಶಾಸಕಿ
ಗೋಪಾಲಕೃಷ್ಣ ಬೇಳೂರು- ಸಾಗರ ಶಾಸಕ

You may also like