Home » Karnataka CM : ಸಿದ್ದರಾಮಯ್ಯಗೆ ಶಾಕ್ ಮೇಲೆ ಶಾಕ್ – ಕಾಂಗ್ರೆಸ್ ನಾಯಕರಿಂದಲೇ ರಾಜೀನಾಮೆಗೆ ಆಗ್ರಹ, ಇವರನ್ನು ಸಿಎಂ ಮಾಡಲು ಎಲ್ಲರೂ ಸೇರಿ ಪ್ಲಾನ್!!

Karnataka CM : ಸಿದ್ದರಾಮಯ್ಯಗೆ ಶಾಕ್ ಮೇಲೆ ಶಾಕ್ – ಕಾಂಗ್ರೆಸ್ ನಾಯಕರಿಂದಲೇ ರಾಜೀನಾಮೆಗೆ ಆಗ್ರಹ, ಇವರನ್ನು ಸಿಎಂ ಮಾಡಲು ಎಲ್ಲರೂ ಸೇರಿ ಪ್ಲಾನ್!!

0 comments

Karnataka CM: ಮುಡಾ ಹಗರಣದ A2 ಆರೋಪಿಯಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜೀನಾಮೆಗೆ ಬಿಜೆಪಿ ಹಾಗೂ ಜೆಡಿಎಸ್‌ ನಾಯಕರು ಆಗ್ರಹಿಸುತ್ತಿದ್ದಾರೆ. ಆದ್ರೆ ಸಿದ್ದರಾಮಯ್ಯ ಅವರ ರಾಜೀನಾಮೆಗೆ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಮಾತ್ರವಲ್ಲದೇ ಕಾಂಗ್ರೆಸ್‌ ಕೆಲ ನಾಯಕರು ಸಹ ರಾಜೀನಾಮೆಗೆ ಒತ್ತಾಯಿಸುತ್ತಿದ್ದಾರೆ. ಕಾರಣ ಏನಂದರೆ ಮುಂದಿನ ಮುಖ್ಯಮಂತ್ರಿಯಾಗಿ ಬೇರೆಯವರನ್ನು ನೇಮಿಸಲು ಕೈ ನಾಯಕರು ಪ್ಲಾನ್ ಮಾಡಿದ್ದಾರೆ.

ಹೌದು, ರಾಜ್ಯದಲ್ಲಿ ಸಿಎಂ(Karnataka CM) ಬದಲಾವಣೆಯ ಗುಸು ಗುಸು ಕೈ ಪಾಳಯದಲ್ಲಿ ಜೋರಾಗಿದ್ದು, ಸಿದ್ದರಾಮಯ್ಯ ಅವರ ರಾಜೀನಾಮೆಗೆ ಸ್ವ ಪಕ್ಷದ ನಾಯಕರು ಆಗ್ರಹಿರಿಸುರುವುದು ಅಚ್ಚರಿ ಮೂಡಿಸಿದೆ. ಅಲ್ಲದೆ ಈ ಬೆಳವಣೆಗೆಯ ಮಧ್ಯೆ ಸಚಿವ ಸತೀಶ್‌ ಜಾರಕಿಹೊಳಿ(Satish Jarakiholi) ಅವರು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್‌ ಖರ್ಗೆ ಅವರನ್ನ ಭೇಟಿ ಮಾಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಇತ್ತ ಸತೀಶ್‌ ಜಾರಕಿಹೊಳಿ ಅವರ ಸಾವಿರಾರು ಬೆಂಬಲಿಗರು ಹಾಗೂ ಅಭಿಮಾನಿಗಳು ಹೋದ ಹೋದ ಕಡೆಯಲ್ಲೆಲ್ಲಾ ʼಮುಂದಿನ ಮುಖ್ಯಮಂತ್ರಿ ಸತೀಶ್‌ ಜಾರಕಿಹೊಳಿʼ ಎಂದು ಘೋಷಣೆ ಕೂಗುತ್ತಿದ್ದಾರೆ. ಇದರ ನಡುವೆ ತುಮಕೂರು ನಗರದಲ್ಲಿ ನಡೆಯುತ್ತಿದ್ದ DSS ಸಭೆಯಲ್ಲಿ ʼಮುಂದಿನ ಮುಖ್ಯಮಂತ್ರಿ ಸತೀಶ್ ಜಾರಕಿಹೊಳಿʼ ಎಂಬ ಘೋಷಣೆ ಕೇಳಿಬಂದಿದೆ. ಸತೀಶ್ ಜಾರಕಿಹೊಳಿಯವರ ಸಮ್ಮುಖದಲ್ಲೇ ಈ ಘೋಷಣೆ ಹೊರಬಿದ್ದಿದೆ.

ಸತೀಶ್‌ ಜಾರಕಿಹೊಳಿ ಹೇಳಿದ್ದೇನು?
ಈ ಕುರಿತು ಸುದ್ದಿಗಾರರ ಜೊತೆಗೆ ಮಾತನಾಡಿರುವ ಸಚಿವ ಸತೀಶ್‌ ಜಾರಕಿಹೊಳಿ, ʼಮುಂದಿನ ಸಿಎಂ ಕೂಗು ಶುರು ಮಾಡಿದರೆ ನಾನೇನು ಮಾಡಲಿ? ಈ ಭೇಟಿಯಲ್ಲಿ ಏನು ವಿಶೇಷ ಇಲ್ಲ. ಪರಮೇಶ್ವರ್ ಊಟ ಮಾಡಿಸಿದ್ರು ಅಷ್ಟೇ. ನನ್ನದು ಬೇರೆ ಕಾರ್ಯಕ್ರಮ ಇತ್ತು. ಅಲ್ಲಿಗೆ ಬಂದಿದ್ದೆ, ಅದರಂತೆಯೇ ಇಲ್ಲಿಗೂ ಬಂದಿದ್ದೆ ಅಷ್ಟೇ. ನಾವು ಸಿಎಂಗೆ ರಾಜೀನಾಮೆ ನೀಡುವುದು ಬೇಡ ಅಂತಾ ಹೇಳಿದ್ದೇವೆ. ದಲಿತ ಸಿಎಂ ಪ್ರಸ್ತಾವನೆ ಸಧ್ಯಕ್ಕಿಲ್ಲ. ಇದ್ದಾಗ ನಾವೇ ಕರೆದು ಹೇಳುತ್ತೇವೆʼ ಎಂದು ಸ್ಪಷ್ಟನೆ ನೀಡಿದ್ದಾರೆ.

You may also like

Leave a Comment