- Tirupathi : ನಾಡಿನ ಪ್ರಮುಖ ಧಾರ್ಮಿಕ ಕ್ಷೇತ್ರಗಳಲ್ಲಿ ತಿರುಪತಿ ತಿರುಮಲ ದೇವಸ್ಥಾನವು ಒಂದು. ಇಲ್ಲಿಗೆ ದೇಶದ ಮೂಲೆ ಮೂಲೆಗಳಿಂದ ಭಕ್ತರು ಆಗಮಿಸುತ್ತಿದ್ದು, ಕರ್ನಾಟಕದಿಂದಲೂ ದೇವರ ದರ್ಶನಕ್ಕೆ, ಲಕ್ಷಾಂತರ ಭಕ್ತರು ತೆರಳುತ್ತಾರೆ. ಈ ಹಿನ್ನೆಲೆಯಲ್ಲಿ ಇದೀಗ ಕರ್ನಾಟಕ ಸರ್ಕಾರವು ಟೂರ್ ಪ್ಯಾಕೇಜ್ ಅನ್ನು ಘೋಷಿಸಿದೆ.
ಹೌದು, ಕರ್ನಾಟಕದಿಂದ ತಿರುಪತಿಗೆ ತೆರಳುವ ಪ್ರಯಾಣಿಕರಿಗೆ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಇಲಾಖೆಯು ಗುಡ್ ನ್ಯೂಸ್ ನೀಡಿದೆ. ಬೆಂಗಳೂರು-ತಿರುಮಲ-ಮಂಗಾಪುರಂಗೆ ಟೂರ್ ಪ್ಯಾಕೇಜ್ ಆರಂಭಿಸಿದೆ. ಮೂರು ವಿಧದ ಲಕ್ಸುರಿ ಡಿಲಕ್ಸ್ ಬಸ್ ವ್ಯವಸ್ಥೆ ಮಾಡಲಾಗಿದೆ. ಟಿಕೆಟ್ ದರ, ದೇವರ ದರ್ಶನ ಸಮಯ, ಎಲ್ಲೆಲ್ಲಿ ಭೇಟಿ ನೀಡಬಹುದು ಎಂಬ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ ನೋಡಿ.
ಬಸ್ ಮತ್ತು ದರ್ಶನ ವ್ಯವಸ್ಥೆ:
ಮೂರು ವಿಧದ ಎ/ಸಿ ವೋಲ್ವೋ ಬಸ್‌ಗಳನ್ನು ಪ್ರವಾಸೋದ್ಯಮ ಇಲಾಖೆ ವ್ಯವಸ್ಥೆ ಮಾಡಿದ್ದು, ಬೆಂಗಳೂರಿನ ಇಲಾಖೆಯ ಕಚೇರಿ ಇರುವ ಯಶವಂತಪುರದ ಬಸ್ ನಿಲ್ದಾಣದಿಂದ ಪ್ರತಿ ದಿನ ಬಸ್ ಹೊರಡುತ್ತವೆ. ತಿರುಪತಿ, ಮಂಗಾಪುರ ಮತ್ತು ತಿರುಮಲಕ್ಕೆ ಭೇಟಿ ನೀಡಲಿದೆ. ಭಕ್ತರಿಗೆ ಒಂದೇ ದಿನದಲ್ಲೇ ಬಾಲಾಜಿ ದರ್ಶನ ಮಾಡಿಕೊಂಡು ಬರಬಹುದಾದ ಪ್ಯಾಕೇಜ್ ಇದಾಗಿದೆ.
ಒಬ್ಬರಿಗೆ ಟಿಕೆಟ್ ದರ ಎಷ್ಟು?:
ಬೆಂಗಳೂರು-ತಿರುಪತಿ ಟೂರ್ ಪ್ಯಾಕೇಜ್ ಡಿಲಕ್ಸ್ ಎಸಿ ಬಸ್ ಮೊತ್ತ 2270 ರೂಪಾಯಿ. ವೋಲ್ವೋ ಎಸಿ ಬಸ್ ನಲ್ಲಿ ಪ್ರಯಾಣಿವವರಿದ್ದರೆ ಆ ಆಯ್ಕೆ ಸಹ ಇದ್ದು, ಒಬ್ಬರಿಗೆ 2300 ರೂಪಾಯಿ ಇದೆ. ಇನ್ನೂ ಮಲ್ಟಿ – ಆಕ್ಸಲ್ ಬಸ್ ಸಹ ನಿಯೋಜಿಸಲಾಗಿದ್ದು, ಅದನ್ನು ಬುಕ್ ಮಾಡಿದ ಪ್ರತಿಯೊಬ್ಬರಿಗೂ 2405 ರೂಪಾಯಿ ನಿಗದಿಗೊಳಿಸಲಾಗಿದೆ.
ಟಿಕೆಟ್ ಬುಕ್ಕಿಂಗ್ ಹೇಗೆ?
ತಿರುಪತಿ ಬಾಲಾಜಿ ಭಕ್ತರು ಪ್ರಯಾಣಿಕರು/ಪ್ರವಾಸಿಗರು ಪ್ರವಾಸೊದ್ಯಮ ಇಲಾಖೆಯ ಅಧಿಕೃತ ಜಾಲತಾಣದ ಈ https://kstdc.co/tour_packages/tirupathi-mangapura-tptf/ ಲಿಂಕ್ ಬಳಸಿ ನೀವು ಬುಕ್ ಮಾಡಬೇಕು. ದೂರವಾಣಿ 080-43344334 ಇಲ್ಲವೇ ಮೊಬೈಲ್ 8970650070 ಸಂಖ್ಯೆಗೆ ಕರೆ ಮಾಡಿಯೂ ನೀವು ಬುಕ್ ಮಾಡಿಕೊಳ್ಳಬಹುದು. ಇಲ್ಲವೇ ಖದ್ದು ಇಲಾಖೆ ಕಚೇರಿಗೆ ತೆರಳಿಯು ಬುಕ್ ಮಾಡಬಹುದಾಗಿದೆ.
ತಿರುಪತಿ ತಿಮ್ಮಪ್ಪನ ದರ್ಶನ ಸಮಯ, ವಿವರ
ಈ ಮೂರು ಬಸ್‌ಗಳು ಪ್ರತಿದಿನ ರಾತ್ರಿ 8 ಗಂಟೆ ಬೆಂಗಳೂರಿನ ಯಶವಂತಪುರದ ನಿಗದಿತ ಸ್ಥಳದಿಂದ ನಿರ್ಗಮಿಸಲಿವೆ. ಮರುದಿನ ಬೆಳಗಿನ ಜಾವ 2 ಗಂಟೆಗೆ ತಿರುಪತಿ ತಲುಪುವ ಬಸ್ ಪ್ರಯಾಣಿಕರಿಗೆ ಫ್ರೆಶ್ ಅಪ್ ಆಗಲು ಬೆಳಗ್ಗೆ 4.30 ವರೆಗೂ ಸಮಯ ನೀಡಲಾಗುತ್ತದೆ. ಆ ಹೊತ್ತಿಗೆ ಉಪಹಾರ ಸಿದ್ಧವಿರುತ್ತದೆ. ಬೆಳಗಿನ ಉಪಹಾರ ಮುಗಿಸಿಕೊಂಡು ಅಲ್ಲಿಂದ ತಿರುಮಲ ಸರ್ವ ದರ್ಶನಕ್ಕೆ ಹೊರಡಲಾಗುತ್ತದೆ. ಜನಸಂದಣಿ ಅವಲಂಬಿಸಿ ದರ್ಶನದ ವ್ಯವಸ್ಥೆ ಮಾಡಲಾಗಿರುತ್ತದೆ. ವೆಂಕಟೇಶ್ವರನ ದರ್ಶನ ಬಳಿಕ ಶ್ರೀ ಪದ್ಮಾವತಿ ದೇವಸ್ಥಾನಕ್ಕೆ ಭೇಟಿ ನೀಡಿ ಅಲ್ಲಿ ದರ್ಶನ, ದೇವಾಲಯ ವೀಕ್ಷಣೆ ಬಳಿಕ ಬೆಂಗಳೂರಿಗೆ ಬಸ್ ಹಿಂತಿರುಗುತ್ತದೆ.
