BPL card holders: ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಶಾಕಿಂಗ್ ನ್ಯೂಸ್ ನೀಡಿದೆ. ಹಣದ ಸಮಸ್ಯೆಯಿಲ್ಲದಿದ್ದರೂ ಬಿಪಿಎಲ್ ಕಾರ್ಡ್ ಹೊಂದಿರುವವರನ್ನು (BPL card holders) ಈ ಬಾರಿ ಟಾರ್ಗೆಟ್ ಮಾಡಲಾಗಿದೆ.
ಕಳೆದ ಹದಿನೈದು ದಿನಗಳಲ್ಲಿ ಸುಮಾರು 4.59 ಲಕ್ಷ ನಿಧನ ಹೊಂದಿರುವವರ ಹೆಸರಿನಲ್ಲಿರುವ ಬಿಪಿಎಲ್ ಕಾರ್ಡ್‌ಗಳನ್ನು ಪತ್ತೆ ಹಚ್ಚಿರುವ ಆಹಾರ ನಾಗರಿಕ ಸರಬರಾಜು ಇಲಾಖೆಯು ಈಗ ಅದನ್ನೆಲ್ಲ ಡಿಲೀಟ್ ಮಾಡಿದೆ.
ಯಾವ ಕುಟುಂಬಗಳು ಬಿಪಿಎಲ್ ಮಾನದಂಡಕ್ಕಿಂತ ಹೆಚ್ಚು ಆದಾಯ ಮತ್ತು ಆರ್ಥಿಕ ಸ್ಥಿತಿ ಹೊಂದಿದ್ದರೂ ಬಿಪಿಎಲ್ ಕಾರ್ಡ್ ಪಡೆಯುತ್ತಿದೆ ಎಂಬುವುದರ ಕುರಿತು ಇಲಾಖೆ ಮಹತ್ವದ ಕಾರ್ಯವನ್ನು ಮಾಡಿದೆ. ಸೂಕ್ತವಾದ ಕಾರ್ಯಾಚರಣೆ ನಡೆಸಿದ ದಂಡ ವಸೂಲಿಗೆ ರೆಡಿಯಾಗಿದೆ ಇಲಾಖೆ.
ಸರಕಾರಿ ಕೆಲಸದಲ್ಲಿದ್ದರೂ, ಬಿಪಿಎಲ್ ಬಳಕೆ ಮಾಡುವವರಿಗೂ ಇದು ಅನ್ವಯವಾಗಲಿದ್ದು, ಈ ಮೂಲಕ ಆಹಾರ ಇಲಾಖೆ ಬಿಪಿಎಲ್‌ಗೆ ಅರ್ಹರಿಲ್ಲದ ರೇಷನ್ ಕಾರ್ಡ್ ಡಿಲೀಟ್ ಮಾಡುವ ಮೂಲಕ ಅರ್ಹ ಫಲಾನುಭವಿಗಳಿಗೆ ದೊರಕುವಂತೆ ಮಾಡುವಲ್ಲಿ ದಿಟ್ಟ ಹೆಜ್ಜೆ ಇಟ್ಟಿದೆ.
