5
Karnataka Gvt : ನಿಮ್ಮ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದರೆ ಈ ಒಂದು ನಂಬರಿಗೆ ಕರೆ ಮಾಡಿ ದೂರು ಸಲ್ಲಿಸಬಹುದಾಗಿದೆ ಎಂದು ಸರ್ಕಾರ ಪ್ರಕಟಣೆ ಹೊರಡಿಸಿದೆ. ಅಷ್ಟೇ ಅಲ್ಲ ಘನತ್ಯಾಜ್ಯ ವಿಲೇವಾರಿ ಕುರಿತು ದೂರುಗಳಿದ್ದರೆ ತಕ್ಷಣ ಈ ಸಂಖ್ಯೆಗೆ ಕರೆ ಮಾಡಿದ್ರೆ ಸಾಕು.
ಹೌದು,ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ಪ್ರತಿಯೊಂದು ಸಮಸ್ಯೆಗೂ ಒಂದೇ ಪರಿಹಾರ. ಅದು 8277506000 ಈ ನಂಬರ್ ಗೆ ಕರೆ ಮಾಡಿದ್ರೆ ಆಯ್ತು. ಫೋನ್ ಮಾತ್ರವಲ್ಲ ಈ ನಂಬರಿಗೆ ವಾಟ್ಸಾಪ್ ಚಾಟ್ ಕೂಡ ಮಾಡಿ ನೀವು ದೂರ ಸಲ್ಲಿಸಬಹುದು.
ಪಂಚಮಿತ್ರ ವಾಟ್ಸಾಪ್ ಚಾಟ್ ಬಾಟ್ ಅಥವಾ ಸಹಾಯವಾಣಿಯನ್ನು ಸಂಪರ್ಕಿಸಿ, ನಿಮ್ಮ ಗ್ರಾಮದ ಯಾವುದೇ ಸಮಸ್ಯೆಗಳಿಗೆ ತ್ವರಿತ ಸ್ಪಂದನೆ ಹಾಗೂ ಪರಿಹಾರ ಪಡೆಯಿರಿ. ಸರ್ಕಾರವೇ ಈ ಕುರಿತು ಪ್ರಕಟಣೆಯನ್ನು ಹೊರಡಿಸಿದೆ.
