Home » Mangaluru: ಕರ್ನಾಟಕ ಕಲಾಶ್ರೀ ಪುರಸ್ಕೃತ ಖ್ಯಾತ ನೃತ್ಯ ಗುರು ಕಮಲಾ ಭಟ್‌ ನಿಧನ

Mangaluru: ಕರ್ನಾಟಕ ಕಲಾಶ್ರೀ ಪುರಸ್ಕೃತ ಖ್ಯಾತ ನೃತ್ಯ ಗುರು ಕಮಲಾ ಭಟ್‌ ನಿಧನ

0 comments

Mangaluru: ಖ್ಯಾತ ನೃತ್ಯ ಗುರು ಕರ್ನಾಟಕ ಕಲಾಶ್ರೀ ಪುರಸ್ಕೃತ ಕಮಲಾ ಭಟ್‌ (70) ಮಂಗಳವಾರ ನಿಧನ ಹೊಂದಿದ್ದಾರೆ.

ಕಮಲಾಭಟ್‌ ಅವರು ಉರ್ವ ಸಂಸ್ಥೆಯ ನಾಟ್ಯಾಲಯದ ನಿರ್ದೇಶಕರಾಗಿದ್ದರು. ಇವರು 45 ವರ್ಷಗಳಿಂದ ಈ ಸಂಸ್ಥೆಯನ್ನು ನಡೆಸುತ್ತಿದ್ದರು.

ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಕರ್ನಾಟಕ ಕಲಾ ಶ್ರೀ, ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಉಡುಪಿ ಪೇಜಾವರ ಮಠದ ಪ್ರಶಸ್ತಿ ಸೇರಿ ಅನೇಕ ಪ್ರಶಸ್ತಿಗಳು ಇವರ ಮುಡಿಗೇರಿದೆ.

ಕಮಲಾ ಭಟ್‌ ಅವರ ಗುರು ಉಳ್ಳಾಲ ಮೋಹನ್‌ ಕುಮಾರ್‌. ಇವರು ತಮ್ಮ ಸಂಸ್ಥೆಯಿಂದ ರಾಜ್ಯದ ಪ್ರತಿಷ್ಠಿತ ವೇದಿಕೆಗಳಲ್ಲಿ ಸಾವಿರಾರು ನೃತ್ಯ ಕಾರ್ಯಕ್ರಮಗಳನ್ನು ನೀಡಿದ್ದು, ಪ್ರಶಂಸೆಗೆ ಪಾತ್ರರಾಗಿದ್ದರು.

You may also like

Leave a Comment