Home » Karnataka: ಅಪಘಾತದಲ್ಲಿ ಗಾಯಗೊಂಡವರಿಂದ ಚಿಕಿತ್ಸೆಗೂ ಮುನ್ನ ಹಣ ಕೇಳಿದ್ರೆ ವೈದ್ಯರಿಗೆ ಜೈಲು ಶಿಕ್ಷೆ!

Karnataka: ಅಪಘಾತದಲ್ಲಿ ಗಾಯಗೊಂಡವರಿಂದ ಚಿಕಿತ್ಸೆಗೂ ಮುನ್ನ ಹಣ ಕೇಳಿದ್ರೆ ವೈದ್ಯರಿಗೆ ಜೈಲು ಶಿಕ್ಷೆ!

0 comments

Karnataka: ಕರ್ನಾಟಕ ಸರ್ಕಾರವು ಅಪಘಾತ ಅಥವಾ ತುರ್ತು ಪರಿಸ್ಥಿತಿಯಲ್ಲಿ ಗಾಯಾಳುಗಳಿಂದ ಚಿಕಿತ್ಸೆಗೆ ಮುನ್ನ ಹಣ ಕೇಳಿದರೆ ವೈದ್ಯರಿಗೆ ಜೈಲು ಶಿಕ್ಷೆ ಆಗಲಿದೆ. ಈ ಕುರಿತಾಗಿ ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿದೆ. ಎಲ್ಲಾ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳು ತುರ್ತು ಚಿಕಿತ್ಸೆಯನ್ನು ಒದಗಿಸಬೇಕು ಎಂದು ಸರ್ಕಾರ ಸೂಚಿಸಿದೆ.

ಅಪಘಾತದಲ್ಲಿ ಗಾಯಗೊಂಡವರಿಗೆ ರಾಜ್ಯದ ಎಲ್ಲ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳು ಸೂಕ್ತ ಚಿಕಿತ್ಸೆ ನೀಡಬೇಕು. ಗಾಯಾಳುಗಳಿಗೆ ಚಿಕಿತ್ಸೆ ನೀಡುವಲ್ಲಿ ವಿಳಂಬ ಮಾಡುವ ಹಾಗಿಲ್ಲ. ಒಂದು ವೇಳೆ ಮುಂಗಡ ಹಣಕ್ಕೆ ಒತ್ತಾಯಿಸಿದರೆ ಜೈಲು ಶಿಕ್ಷೆ ವಿಧಿಸಲಾಗುವುದು.

ಕರ್ನಾಟಕ (Karnataka) ಖಾಸಗಿ ವೈದ್ಯಕೀಯ ಸಂಸ್ಥೆಗಳ ಕಾಯ್ದೆ 2007ರ ನಿಬಂಧನೆ ಅಡಿಯಲ್ಲಿ ರಸ್ತೆ ಅಪಘಾತ ಪ್ರಕರಣಗಳು ಮಾತ್ರವಲ್ಲದೆ, ಆಕಸ್ಮಿಕ ಅಥವಾ ಪ್ರೇರಿತ ಬೆಂಕಿ ಅವಘಡಗಳು, ವಿಷಪ್ರಾಶನ ಮತ್ತು ಕ್ರಿಮಿನಲ್ ಹಲ್ಲೆ ಪ್ರಕರಣಗಳು ಒಳಗೊಂಡಿದೆ.

ಇದನ್ನೂ ಓದಿ:GST on Condom: ಜಿಎಸ್ಟಿ ಕಡಿತದ ನಂತರವೂ ಕಾಂಡೋಮ್‌ ಬೆಲೆಗಳು ಅಗ್ಗವಾಗಿಲ್ಲ; ಏಕೆ?

ಇಂತಹ ಪ್ರಕರಣಗಳಲ್ಲಿ ಚಿಕಿತ್ಸೆಗೆ ಗಾಯಾಗಳು ಬಂದಾಗ ಮುಂಗಡ ಹಣಕ್ಕೆ ಬೇಡಿಕೆ ಇಡದೇ ಅವರಿಗೆ ಚಿಕಿತ್ಸೆ ನೀಡಬೇಕು. ಒಂದು ವೇಳೆ ತುರ್ತು ಚಿಕಿತ್ಸೆ ನೀಡದಿದ್ದಲ್ಲಿ ಅಥವಾ ಚಿಕಿತ್ಸೆಗೂ ಮುನ್ನ ಹಣ ಕೇಳಿದ್ದಲ್ಲಿ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಕಾಯ್ದೆ 2007 ರ ಸೆಕ್ಷನ್ 2ರ ಪ್ರಕಾರ ಒಂದು ಲಕ್ಷ ರೂಪಾಯಿವರೆಗೆ ದಂಡ ವಿಧಿಸುವುದರೊಂದಿಗೆ ಜೈಲು ಶಿಕ್ಷೆ ಆಗುವುದು.

You may also like