Home » Siddaramaiah: ವಿದ್ಯುತ್ ದರ ಏರಿಕೆಯ ಬಿಸಿ : ಸಿದ್ದರಾಮಯ್ಯ ಸರ್ಕಾರ ವಿರುದ್ಧ ರೊಚ್ಚಿಗೆದ್ದ ಜನರು

Siddaramaiah: ವಿದ್ಯುತ್ ದರ ಏರಿಕೆಯ ಬಿಸಿ : ಸಿದ್ದರಾಮಯ್ಯ ಸರ್ಕಾರ ವಿರುದ್ಧ ರೊಚ್ಚಿಗೆದ್ದ ಜನರು

0 comments
Siddaramaiah

Siddaramaiah:  ಕರ್ನಾಟಕದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರ ಪಟ್ಟವೇರಿದ ಬೆನ್ನಲ್ಲೆ ಉಚಿತ ವಿದ್ಯುತ್‌ ನೆಪದಲ್ಲಿ ಜನರಿಗೆ ಸದ್ದಿಲ್ಲದೇ ದರ ಏರಿಕೆ ಬಿಸಿ ತಟ್ಟಿದಂತಾಗಿದೆ.

ರಾಜ್ಯದ ಬಹುತೇಕ ಭಾಗಗಳಲ್ಲಿ ಈ ಬಾರಿ ವಿದ್ಯುತ್‌ ಬೆಲೆಯಲ್ಲಿ ಭಾರಿ ಬದಲಾವಣೆಯಾಗಿದ್ದು, ಹಳೆಯ ಬಿಲ್‌ಗೂ ಈ ಬಿಲ್‌ಗೂ ಏಕಾಏಕಿ ದರವನ್ನೂ ಏರಿಕೆ ಮಾಡಲಾಗಿದೆ. ಇದನ್ನು ಸೂಕ್ಷ್ಮವಾಗಿ ಗಮನಿಸಿದ ಜನ ಸಮಾನ್ಯರು ಸಿಟ್ಟಿಗೆದ್ದು ಆಕ್ರೋಶ ವ್ಯಕ್ತಪಡಿಸುತ್ತಿದ್ದಂತೆ ಇನ್ನೊಂದೆಡೆ ಬಿಲ್‌ ಕಲೆಕ್ಷರ್‌ ಹೊಡೆದು, ಎಂಟ್ರಿಗೂ ಬಿಡದಂತಹ ಗಲಾಟೆಗಳು ನಡೆಯುತ್ತಿದೆ. ಈ ವಿಚಾರ ಕುರಿತ ಗಲಾಟೆಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದು ಬೆಳಕಿಗೆ ಬರುತ್ತಿದೆ. ಅಲ್ಲದೇ ಸರ್ಕಾರ ಕಾಂಗ್ರೆಸ್‌ ಸರ್ಕಾರ ಆಸೆಯನ್ನು ತೋರಿಸಿ ಜನರು ಮೋಸ ಮಾಡಿದೆ ಎಂದು ಹಿಡಿ ಶಾಪವನ್ನು ಹಾಕುತ್ತಿದ್ದಾರೆ. ಇದೀಗ ಗಲಾಟೆಯಾದ ಕೆಲವೊಂದು ಘಟನೆಗಳನ್ನು ನೋಡುವುದಾದರೆ, ಶಿವಮೊಗ್ಗದ ಆಲ್ಕೋಳ ಬಡಾವಣೆಯಲ್ಲಿ ಸಿದ್ದರಾಮಯ್ಯ (Siddaramaiah) ಸರ್ಕಾರಿಂದ ವಿದ್ಯುತ್ ಬಿಲ್ ಮೂರುಪಟ್ಟು ಹೆಚ್ಚಳವಾಗಿ ಬಿಲ್‌ ಕಟ್ಟಲ್ಲ ಎಂದು ಕಿಡಿ ಕಾರಿದ್ದಾರೆ. ಫ್ರೀ ವಿದ್ಯುತ್ ಹೆಸರಲ್ಲಿ ಮೋ ಸ ಮಾಡಿದೆ ಎಂದು ಹೃದಯ ರೋಗ ಕಾಯಿಲೆಯಿಂದ ಬಳಲುತ್ತಿರುವ ಮಹಿಳೆ ಶಕುಂತಲಾ ಆಕ್ರೋಶ ವ್ಯಕ್ತಪಡಿಸಿದ್ದಾಳೆ. ಇನ್ನೂ ಧಾರವಾಡದಲ್ಲಿ ಸರ್ಕಾರದ ವಿರುದ್ಧ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗುತ್ತಿದೆ.ಉಚಿತ ವಿದ್ಯುತ್‌ ಬೇಡಬೇಡ ಮೊದಲಿನಂತೆ ಇರಲಿ ಎಂದು ಆಕ್ರೋಶ ಹೊರಹಾಕಿದ್ದಾಳೆ. ಹೀಗೆ ರಾಜ್ಯದ ಬಹುತೇಕ ಭಾಗಗಳಲ್ಲಿ ಡಬಲ್‌ ವಿದ್ಯುತ್‌ ಬಿಲ್‌ ಬಂದಿರೋದನ್ನು ನೋಡಿ ಜನರು ರೊಚ್ಚಿಗೆದ್ದಿದ್ದಾರೆ ಎಂದು ತಿಳಿಯಬಹುದಾಗಿದೆ.

 

ಇದನ್ನು ಓದಿ: Congress: ಆದಾಯ ಮೂಲ ಹೆಚ್ಚಿಸಲು “ಕಾಂಗ್ರೆಸ್‌ ಮೆಗಾ ಪ್ಲ್ಯಾನ್‌” : 5 ಗ್ಯಾರಂಟಿ ಜಾರಿಗಾಗಿ ಮದ್ಯದ ಬೆಲೆ ಏರುತ್ತಾ? 

You may also like

Leave a Comment