Karnataka Police: ರಾಜ್ಯದಲ್ಲಿ ಗ್ಯಾರಂಟಿಗಳ(Guaranty) ತಿಕ್ಕಾಟದ ನಡುವೆಯೇ, ರಾಜ್ಯ ಸರ್ಕಾರವು ಪೊಲೀಸ್ ಇಲಾಖೆಗೆ(Police department) ಮೇಜರ್ ಸರ್ಜರಿ ಮಾಡಿದ್ದು, 15 ಐಪಿಎಸ್(IPS) ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ. ಹೀಗಾಗಿ ದಕ್ಷಿಣ ಕನ್ನಡದ (Karnataka Police ) ಪೊಲೀಸ್ ವರಿಷ್ಠಾಧಿಕಾರಿಯಾಗಿ(ಎಸ್‌ಪಿ) ಖಡಕ್ ಐಪಿಎಸ್ ಅಧಿಕಾರಿ ಸಿ ಬಿ ರಿಷ್ಯಂತ್(C B Rishyant) ನೇಮಕ ಮಾಡಲಾಗಿದೆ.
ಅಂದಹಾಗೆ ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್() ವರಿಷ್ಠಾಧಿಕಾರಿ(Dakshina kannada SP) ವಿಕ್ರಮ್ ಅಮಟೆ(Vikram amate) ಅವರು ವೈದ್ಯಕೀಯ ರಜೆಯಲ್ಲಿ ತೆರಳಿದ್ದು, ಪ್ರಭಾರ ಪೊಲೀಸ್ ವರಿಷ್ಠಾಧಿಕಾರಿಯಾಗಿ ಐಪಿಎಸ್ ಅಧಿಕಾರಿ ರಿಷ್ಯಂತ್ ಸಿ.ಬಿ ಅವರನ್ನು ನಿಯೋಜಿಸಲಾಗಿತ್ತು. 2013ನೇ ಸಾಲಿನ ಕರ್ನಾಟಕ ವೃಂದದ ಐಪಿಎಸ್ ಅಧಿಕಾರಿಯಾಗಿರುವ ರಿಷ್ಯಂತ್ ಮಂಗಳೂರಿನಲ್ಲಿ ಎಎಸ್ಪಿಯಾಗಿ, ಬಾಗಲಕೋಟೆ, ದಾವಣಗೆರೆ ಹಾಗೂ ಮೈಸೂರು ಜಿಲ್ಲೆಗಳಲ್ಲಿ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದರು.
ಅಲ್ಲದೆ ಈ ಹಿಂದೆ ದಾವಣಗೆರೆಯ(Davangere) ಎಸ್‌ಪಿಯಾಗಿ ಸೇವೆ ಸಲ್ಲಿಸುತ್ತಿದ್ದರು. ನಂತರ ವಿಧಾನಸಭೆ ಚುನಾವಣೆಗೆ ಮುನ್ನ ಬೆಂಗಳೂರಿನಲ್ಲಿ ನಿಯೋಜನೆಗೊಂಡಿದ್ದರು.
