Home » D V Sadananda Gouda: ಚುನಾವಣಾ ನಿವೃತ್ತಿ ಘೋಷಿಸಿದ್ರೂ ಲೋಕಸಭಾ ಸ್ಪರ್ಧೆ ಬಗ್ಗೆ ಸುಳಿವು ಕೊಟ್ಟ ಮಾಜಿ ಸಿಎಂ ಸದಾನಂದಗೌಡ !!

D V Sadananda Gouda: ಚುನಾವಣಾ ನಿವೃತ್ತಿ ಘೋಷಿಸಿದ್ರೂ ಲೋಕಸಭಾ ಸ್ಪರ್ಧೆ ಬಗ್ಗೆ ಸುಳಿವು ಕೊಟ್ಟ ಮಾಜಿ ಸಿಎಂ ಸದಾನಂದಗೌಡ !!

1 comment
D V Sadananda Gouda

D V Sadananda Gouda: ಮಾಜಿ ಸಿಎಂ ಹಾಗೂ ಹಾಲಿ ಸಂಸದರಾದ ಬಿಜೆಪಿಯ ಪ್ರಬಲ ನಾಯಕ ಸದಾನಂದ ಗೌಡ(D V Sadananda Gouda)ಅವರು ಕೆಲಸ ಸಮಯದ ಹಿಂದೆ ರಾಜಕೀಯವಾಗಿ ಚುನಾವಣಾ ನಿವೃತ್ತಿಯನ್ನು ಘೋಷಿಸಿದ್ದರು. ಆದರೆ ಇದೀಗ ಅಚ್ಚರಿ ಎಂಬಂತೆ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಸುಳಿವು ನೀಡಿದ್ದಾರೆ.

ಹೌದು, ಹೊಸಬರಿಗೆ ಅವಕಾಶ ನೀಡಬೇಕೆಂದು ಹಾಗೂ ಹೈಕಮಾಂಡ್ ನಿರ್ಧಾರಕ್ಕೆ ಮಣಿದು ಬಿಜೆಪಿ ನಾಯಕ ಸದಾನಂದ ಗೌಡ ಅವರು ಕೆಲವು ತಿಂಗಳ ಹಿಂದೆ ಬಹಿರಂಗವಾಗಿ ರಾಜಕೀಯ ನಿವೃತ್ತಿ ಘೋಷಿಸಿದ್ರು. ಆದರೀಗ ತನ್ನ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಎಂಟು ವಿಧಾನಸಭಾ ಕ್ಷೇತ್ರಗಳ ಪಕ್ಷದ ಮುಖಂಡರು ಒತ್ತಾಯ ಮಾಡಿದ್ದಾರೆ. ನೋಡೋಣ ಏನಾಗುತ್ತದೆ ಎಂದು ಮಾರ್ಮಿಕವಾಗಿ ಡಿ.ವಿ.ಸದಾನಂದಗೌಡ ಹೇಳಿಕೆ ನೀಡಿದ್ದಾರೆ.

ಇದನ್ನು ಓದಿ: ಹಿಂದೂ ಅಧಿಕಾರಿಯಿಂದ ಮುಸ್ಲಿಂ ಆಗಿ ಮತಾಂತರ! ಹಿಂದೂ ಪತ್ನಿ ಇದ್ದರೆ, ಮುಸ್ಲಿಂ ಯುವತಿ ಜೊತೆ ಮದುವೆ!!!

ಪಕ್ಷದ ಹಿರಿಯ ನಾಯಕರು ನಮ್ಮ ಮನೆಗೆ ಬಂದು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಮತ್ತೆ ಚುನಾವಣೆಗೆ ಕಣಕ್ಕಿಳಿಯುವಂತೆ ಒತ್ತಾಯಿಸಿದ್ದಾರೆ. ನಾನು ನನ್ನ ಸುದೀರ್ಘ ರಾಜಕೀಯ ಅನುಭವದಿಂದ ನನ್ನದೇ ಆದ ನಿರ್ಧಾರ ಕೈಗೊಂಡಿದ್ದೆ. ನನ್ನ ಅನುಭವವನ್ನು ಪಕ್ಷಕ್ಕೆ ಧಾರೆ ಎರೆಯಬೇಕು ಎಂಬ ಯೋಚನೆಯಿದೆ. ಮುಂದೆ ಏನೆಂದು ನಿರ್ಧಾರ ಮಾಡುವೆ ಎಂದಿದ್ದಾರೆ.

ಅಂದಹಾಗೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಪ್ರತಿಪಕ್ಷದ ನಾಯಕ ಆರ್‌.ಅಶೋಕ್ ಅವರು ಬುಧವಾರ ಸದಾನಂದಗೌಡರ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದ್ದರು. ಈ ಭೇಟಿ ಬಳಿಕ ಗೌಡರು ಈ ಹೇಳಿಕೆ ನೀಡಿದ್ದು ಅಚ್ಚರಿಗೆ ಕಾರಣವಾಗಿದೆ.

You may also like

Leave a Comment