Home » D.V.Sadananda Gowda: “ನಾನಾಡಿದ ಆ ಒಂದು ಮಾತಿನಿಂದ ನನ್ನ ಸಿಎಂ ಸ್ಥಾನ ಕಳೆದುಕೊಂಡೆ”- ಸದಾನಂದ ಗೌಡ

D.V.Sadananda Gowda: “ನಾನಾಡಿದ ಆ ಒಂದು ಮಾತಿನಿಂದ ನನ್ನ ಸಿಎಂ ಸ್ಥಾನ ಕಳೆದುಕೊಂಡೆ”- ಸದಾನಂದ ಗೌಡ

by Mallika
1 comment
D.V.Sadananda Gowda

D.V.Sadananda Gowda: ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರು, “ಒಕ್ಕಲಿಗ ಸಮಾಜದ ಕಾರ್ಯಕ್ರಮವೊಂದರಲ್ಲಿ ನಾನು ಹೇಳಿದ್ದ ಒಂದು ಮಾತಿನಿಂದ ನನ್ನ ಸಿಎಂ ಸ್ಥಾನಕ್ಕೆ ಕುತ್ತು ಬಂತು” ಎಂಬ ಮಾಹಿತಿಯನ್ನು ಹೇಳಿದ್ದಾರೆ.

ಅವರು ಮಂಗಳವಾರ ಕಡಬದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದು, ಅಲ್ಲಿ ಅವರು ನಾನು ಮುಖ್ಯಮಂತ್ರಿಯಾಗಿದ್ದಾಗ ಬೆಂಗಳೂರಿನ ಒಕ್ಕಲಿಗ ಮುಖಂಡರು ಸೇರಿ ಭೈರವೈಕ್ಯ ಆದಿಚುಂಚನಗಿರಿ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರಿಗಾಗಿ ಅದ್ದೂರಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾಗ, ನಾನು ಒಕ್ಕಲಿಗ ಸಮುದಾಯದಲ್ಲಿ ಹುಟ್ಟಿ ಆದಿಚುಂಚನಗಿರಿ ಸ್ವಾಮೀಜಿಯವರ ಆಶೀರ್ವಾದ ಪಡೆದು ರಾಜ್ಯದ ಮುಖ್ಯಮಂತ್ರಿಯಾಗಿದ್ದೇನೆ” ಎಂದು ಹೇಳಿದ್ದು, ನನ್ನ ಸ್ಥಾನಕ್ಕೆ ಮುಳುವಾಯಿತು ಎಂದು ಬೇಸರದಿಂದ ಹೇಳಿದರು.

ಅಂದಿನ ರಾಜ್ಯ ಬಿಜೆಪಿ ನಾಯಕರು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯುವಂತೆ ಮಾಡಿದ್ದರು ಕುರಿತು ಪರೋಕ್ಷವಾಗಿ ಹೇಳಿದರು.

ಇದನ್ನು ಓದಿ: Dr.Bro ಅವರಿಂದ Instagram ಮೂಲಕ ಅಧಿಕೃತ ಮಾಹಿತಿ; ನಮಸ್ಕಾರ ದೇವ್ರು ಎನ್ನುತ್ತಾ ತಾನೆಲ್ಲಿರುವೆ ಎಂಬ ಮಾಹಿತಿ ಬಿಚ್ಚಿಟ್ಟ ಗಗನ್‌ ಶ್ರೀನಿವಾಸ್‌!!!

You may also like

Leave a Comment