Home » Karnataka Rain: ಬಿರು ಬೇಸಿಗೆಯ ನಡುವೆ ವರುಣನ ಕೃಪೆ; ಏಳು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

Karnataka Rain: ಬಿರು ಬೇಸಿಗೆಯ ನಡುವೆ ವರುಣನ ಕೃಪೆ; ಏಳು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

353 comments
Karnataka Rain

Karnataka Rain: ಬಿರು ಬೇಸಿಗೆ ನಡುವೆ ರಾಜ್ಯದ ಹಲವೆಡೆ ವರುಣನ ಕೃಪೆ ಮುಂದು ವರಿದಿದ್ದು, ಬುಧವಾರವೂ ಕೆಲವು ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ. ಹವಾಮಾನ ಇಲಾಖೆಯು ಏಳು ಜಿಲ್ಲೆಗಳಿಗೆ ‘ ಯೆಲ್ಲೊ ಅಲರ್ಟ್’ ಘೋಷಿಸಿದೆ.

ಇದನ್ನೂ ಓದಿ: CAA: ಪೌರತ್ವ ಕಾಯಿದೆ ಜಾರಿ ತಡೆಯಲು ಸಾಧ್ಯವೇ ಇಲ್ಲ- ಗುಡುಗಿದ ಅಮಿತ್ ಶಾ

ವಿಜಯಪುರ, ಬಾಗಲಕೋಟೆ, ಬೆಳಗಾವಿ, ಚಿಕ್ಕಮಗಳೂರು, ಹಾಸನ, ಕೊಡಗು ಹಾಗೂ ಮೈಸೂರು ಜಿಲ್ಲೆಗೆ ‘ಯೆಲ್ಲೊ ಅಲರ್ಟ್’ ನೀಡಲಾಗಿದೆ. ಈ ಜಿಲ್ಲೆಗಳಲ್ಲಿ ಒಂದೆರಡು ಕಡೆ ಗುಡುಗು ಸಹಿತ ಮಳೆ ಮತ್ತು ಬಿರುಗಾಳಿಯಾಗುವ ಸಾಧ್ಯತೆಯಿದೆ. ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಒಣಹವೆ ಇರುವ ಸಂಭವವಿದೆ ಎಂದು ಇಲಾಖೆ ತಿಳಿಸಿದೆ.

ಇದನ್ನೂ ಓದಿ:  Free Food: ಮತದಾನದ ಗುರುತು ತೋರಿಸಿ, ಉಚಿತ ದೋಸೆ, ತುಪ್ಪದ ಲಾಡು ನಿಮ್ಮದಾಗಿಸಿ

ಕೆಲ ಜಿಲ್ಲೆಗಳಲ್ಲಿ ಮಳೆಯ ಜತೆಗೆ ಬಿಸಿಗಾಳಿ ಕಾಣಿಸಿಕೊಳ್ಳುವ ಸಾಧ್ಯತೆಯೂ ಇದೆ. ರಾಯಚೂರು, ವಿಜಯಪುರ, ಯಾದಗಿರಿ, ಬಾಗಲಕೋಟೆ, ಕಲಬುರಗಿ, ಚಿತ್ರದುರ್ಗ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಬಿಸಿಗಾಳಿ ಹೆಚ್ಚಾಗುವ ಸಂಭವವಿದೆ.

You may also like

Leave a Comment