Home » Karnataka Weather:ಕರ್ನಾಟಕದಲ್ಲಿ ಮತ್ತೆ 5 ದಿನ ಭಾರೀ ಮಳೆ ಸಾಧ್ಯತೆ! ಎಚ್ಚರ ಸಾರ್ವಜನಿಕರೇ!

Karnataka Weather:ಕರ್ನಾಟಕದಲ್ಲಿ ಮತ್ತೆ 5 ದಿನ ಭಾರೀ ಮಳೆ ಸಾಧ್ಯತೆ! ಎಚ್ಚರ ಸಾರ್ವಜನಿಕರೇ!

1 comment
Karnataka Weather

Karnataka Weather: ರಾಜ್ಯದಾದ್ಯಂತ ಬಿಸಿಲಿನ ಧಗೆ(Karnataka Weather) ಹೆಚ್ಚಾಗಿದ್ದು, ಮಳೆಗಾಗಿ ಎದುರು ನೋಡುತ್ತಿದ್ದ ಜನತೆಗೆ ಮುಖ್ಯ ಮಾಹಿತಿ ಇಲ್ಲಿದೆ ನೋಡಿ.ತಮಿಳುನಾಡಿನಲ್ಲಿ ಕಳೆದ ಕೆಲವು ದಿನಗಳಿಂದ ವಿವಿಧೆಡೆ ಗುಡುಗು ಮಿಂಚು ಸಹಿತ ಭಾರೀ ಮಳೆಯಾಗುತ್ತಿದ್ದು, ಡೆಲ್ಟಾ ಜಿಲ್ಲೆಗಳು ಮತ್ತು ದಕ್ಷಿಣ ಜಿಲ್ಲೆಗಳಲ್ಲಿ ಜೋರು ಮಳೆಯಾಗುತ್ತಿದೆ. ಚೆನ್ನೈ ಮತ್ತು ಉಪನಗರಗಳಲ್ಲೂ ವರುಣನ ಅಬ್ಬರ ಜೋರಾಗಿದೆ.ಈ ನಡುವೆ, ಕರ್ನಾಟಕದ(Karntakata )ಉತ್ತರ ಒಳನಾಡಿನ ಬಹುತೇಕ ಹೆಚ್ಚಿನ ಕಡೆಗಳಲ್ಲಿ ಮುಂದಿನ 5 ದಿನ ಭಾರಿ ಮಳೆಯಾಗಲಿದೆ(Rain Alert)ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಬೆಂಗಳೂರಿನಲ್ಲಿ ಮುಂಜಾನೆ ಬಿಸಿಲಿನ ವಾತಾವರಣವಿರಲಿದ್ದು, ಮಧ್ಯಾಹ್ನದ ಬಳಿಕ ಮೋಡಕವಿದ ವಾತಾವರಣ ನಿರ್ಮಾಣವಾಗಲಿದೆ. ಕರಾವಳಿಯ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ದಕ್ಷಿಣ ಒಳನಾಡಿನ ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ,ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರಿನಲ್ಲಿ ವರುಣನ ಆರ್ಭಟವಿರಲಿದೆ.

ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ರಾಯಚೂರು, ವಿಜಯಪುರ, ಯಾದಗಿರಿಯಲ್ಲಿ ಭಾರೀ ಮಳೆಯಾಗುವ(Karnataka Rain) ಸಂಭವವಿದೆ. ಮಂಚಿಕೆರೆ, ಗದಗ, ಅಡಕಿ, ಕಮಲಾಪುರ, ಮಂಡಗದ್ದೆ, ಕ್ಯಾಸಲ್ರಾಕ್, ಗುಂಜಿ, ಸೇಡಬಲ್, ಸೇಡಂ, ಚಿತ್ತಾಪುರ, ಮುದಗಲ್, ಸಂಡೂರು, ಶಿವಮೊಗ್ಗ, ಕೊಟ್ಟಿಗೆಹಾರದಲ್ಲಿ ಮಳೆಯಾಗಿದ್ದು,ದಕ್ಷಿಣ ಒಳನಾಡಿನ ಕೆಲವು ಪ್ರದೇಶಗಳಲ್ಲಿ, ಉತ್ತರ ಒಳನಾಡಿನ ಒಂದೆರಡು ಸ್ಥಳಗಳಲ್ಲಿ, ಗುಡುಗು ಸಹಿತ ಮಳೆಯಾಗುವ ಸಂಭವ ಹೆಚ್ಚಿದೆ.

ಇದನ್ನೂ ಓದಿ: Free Laptop For Students:ವಿದ್ಯಾರ್ಥಿಗಳೇ ಗಮನಿಸಿ, ನಿಮಗಿದೆ ಬಿಗ್ ಗುಡ್ ನ್ಯೂಸ್! ಉಚಿತ ಲ್ಯಾಪ್ ಟಾಪ್ ಪಡೆಯಲು ಅರ್ಜಿ ಆಹ್ವಾನ!

You may also like

Leave a Comment