Home » Dharmasthala Case: ಧರ್ಮಸ್ಥಳ ಪ್ರಕರಣ ಅಮಿತ್‌ ಶಾ ಭೇಟಿಯಾದ ಕರ್ನಾಟಕದ ಮಠಾಧೀಶರು: ಅಮಿತ್‌ ಶಾ ಹೇಳಿದ್ದೇನು?

Dharmasthala Case: ಧರ್ಮಸ್ಥಳ ಪ್ರಕರಣ ಅಮಿತ್‌ ಶಾ ಭೇಟಿಯಾದ ಕರ್ನಾಟಕದ ಮಠಾಧೀಶರು: ಅಮಿತ್‌ ಶಾ ಹೇಳಿದ್ದೇನು?

0 comments

Dharmasthala Case: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ಕರ್ನಾಟಕದ ಕೆಲ ಸ್ವಾಮೀಜಿಗಳು ಭೇಟಿ ಮಾಡಿ, ಈ ಪ್ರಕರಣವನ್ನು ಎನ್‌ಐಎ ತನಿಖೆಗೆ ವಹಿಸಬೇಕು ಎಂದು ಮನವಿ ಮಾಡಿದ್ದಾರೆ.

ಹಿಂದೂಗಳು, ಹಿಂದೂ ಧಾರ್ಮಿಕ ಕೇಂದ್ರಗಳ ಮೇಲೆ ಹಾಗೂ ಹಿಂದೂ ಮಠಾಧೀಶರ ಮೇಲೆ ಪದೇ ಪದೇ ದಾಳಿ ಆಗುತ್ತಿದೆ. ಆರಾರು ತಿಂಗಳ ಅಂತರದಲ್ಲಿ ದಾಳಿಗಳು ನಡೆಯುತ್ತಿವೆ. ಇದರ ಹಿಂದೆ ವ್ಯವಸ್ಥಿತ ಷಡ್ಯಂತ್ರ ಇದೆ. ಹೀಗಾಗಿ, ಸೂಕ್ತ ತನಿಖೆ ನಡೆಸಬೇಕು ಎಂದು ಸ್ವಾಮೀಜಿಗಳು ಆಗ್ರಹಿಸಿದರು.

ಧರ್ಮಸ್ಥಳ ಪ್ರಕರಣದ ಎಲ್ಲಾ ಬೆಳವಣಿಗೆಗಳನ್ನು ನಾನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ. ಧರ್ಮಸ್ಥಳ ಪ್ರಕರಣ ಕುರಿತು ಕ್ಯಾಬಿನೆಟ್‌ ನೇತೃತ್ವದಲ್ಲಿ ಸಭೆ ನಡೆಸಿ, ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಅಮಿತ್‌ ಶಾ ಹೇಳಿದ್ದಾರೆ. ಧರ್ಮ ಕ್ಷೇತ್ರಗಳ ವಿರುದ್ಧದ ಅಪಪ್ರಚಾರಕ್ಕೆ ಕಡಿವಾಣ ಹಾಕಲು ಹೊಸ ಕಾನೂನು ತರುತ್ತೇವೆ. ನೀವು ಸಮಾಜವನ್ನು ಜಾಗೃತಿಗೊಳಿಸಿ ಎಂದು ಸ್ವಾಮೀಜಿಗಳಿಗೆ ಅಮಿತ್‌ ಶಾ ಸಲಹೆ ನೀಡಿರುವ ಕುರಿತು ವರದಿಯಾಗಿದೆ.

You may also like