Home » Kateel: Kateel-ಹುಟ್ಟು-ಸಾವಿನ ಸೂತಕ ನಿಯಮವನ್ನು 3 ದಿನಕ್ಕೆ ಸೀಮಿತಗೊಳಿಸಲು ನಿರ್ಧಾರ, ಅಶೌಚ ನಿರ್ಣಯಗೋಷ್ಠಿಯಲ್ಲಿ ನಿರ್ಧಾರ

Kateel: Kateel-ಹುಟ್ಟು-ಸಾವಿನ ಸೂತಕ ನಿಯಮವನ್ನು 3 ದಿನಕ್ಕೆ ಸೀಮಿತಗೊಳಿಸಲು ನಿರ್ಧಾರ, ಅಶೌಚ ನಿರ್ಣಯಗೋಷ್ಠಿಯಲ್ಲಿ ನಿರ್ಧಾರ

0 comments

Kateel: ಹುಟ್ಟು ಮತ್ತು ಸಾವಿನ ಸಂದರ್ಭದಲ್ಲಿ ಅನುಸರಿಸುತ್ತಿದ್ದ 10 ದಿನಗಳ ಸೂತಕದ ಸಮಯವನ್ನು ಮೂರು ದಿನಗಳಿಗೆ ಮಿತಿಗೊಳಿಸಲು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಭ್ರಾಮರೀವನದಲ್ಲಿ ರವಿವಾರ ನಡೆದ ಅಶೌಚ ನಿರ್ಣಯ ಗೋಷ್ಠಿಯಲ್ಲಿ ನಿರ್ಣಯ ಮಾಡಲಾಗಿದೆ ಎಂದು ವರದಿಯಾಗಿದೆ.

ನಾಲ್ಕರಿಂದ ಏಳು ತಲೆಮಾರುವರೆಗಿನ ಹತ್ತು ದಿನಗಳವರೆಗಿನ ಅಶೌಚವನ್ನು ಸೃತಿ ನಿರ್ದೇಶನದ ಮೂಲಕ ಮೂರು ದಿನಗಳಿಗೆ ಮಿತಿಗೊಳಿಸಿ ನಿರ್ಣಯ ಮಾಡಲಾಯಿತು. ಈ ಕುರಿತು ವಿಮರ್ಶೆ ಮಾಡಲು 15 ದಿನಗಳ ಕಾಲಾವಕಾಶ ನೀಡಲಾಯಿತು.

ಸಮಾರೋಪದಲ್ಲಿ ಮಾತನಾಡಿದ ಪಲಿಮಾರು ಮಠದ ವಿದ್ಯಾಧೀಶತೀರ್ಥ ಸ್ವಾಮೀಜಿ, ಸ್ಮೃತಿ ಗ್ರಂಥಗಳು ಅಶೌಚವನ್ನು ಸಂಕುಚಿತಗೊಳಿಸಿದರೂ ದೋಷ, ವಿಸ್ತರಿಸಿದರೂ ದೋಷ ಎಂದು ಎಚ್ಚರಿಸಿದೆ. ಈ ಕಾಲಕ್ಕೆ ಅನುಗುಣವಾಗಿ ಶಾಸ್ತ್ರದ ಚೌಕಟ್ಟಿನಲ್ಲಿ ಪೂರ್ವಪಕ್ಷವನ್ನು ಇಟ್ಟುಕೊಂಡು ಮಾರ್ಪಾಡು ತರುವ ಅಗತ್ಯವಿದೆ. ಕಟೀಲಿನಲ್ಲಿ ನಡೆದ ಗೋಷ್ಠಿಯಲ್ಲಿ ಒಮ್ಮತಕ್ಕೆ ಬಂದು ನಿರ್ಣಯ ಮಾಡಲಾಗಿರುವುದು ಸಮಾಧಾನಕರ. ಇಂತಹ ಗೋಷ್ಠಿಗಳು ನಡೆಯುತ್ತಿರಲಿ ಎಂದು ಹೇಳಿದರು.

You may also like