Home » KC Veerendra Pappi: ಅಕ್ರಮ ಹಣ ವರ್ಗಾವಣೆ ಮತ್ತು ಆಸ್ತಿ ಗಳಿಕೆ ಆರೋಪ: ಕಾಂಗ್ರೆಸ್‌ ಶಾಸಕ ಕೆಸಿ ವೀರೇಂದ್ರ ಇಡಿ ಕಸ್ಟಡಿಗೆ

KC Veerendra Pappi: ಅಕ್ರಮ ಹಣ ವರ್ಗಾವಣೆ ಮತ್ತು ಆಸ್ತಿ ಗಳಿಕೆ ಆರೋಪ: ಕಾಂಗ್ರೆಸ್‌ ಶಾಸಕ ಕೆಸಿ ವೀರೇಂದ್ರ ಇಡಿ ಕಸ್ಟಡಿಗೆ

0 comments

KC Veerendra pappi: ಅಕ್ರಮ ಹಣ ವರ್ಗಾವಣೆ, ಅಕ್ರಮ ಆಸ್ತಿ ಗಳಿಕೆ ಆರೋಪಕ್ಕೆ ಸಂಬಂಧಪಟ್ಟಂತೆ ಚಿತ್ರದುರ್ಗದ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಅವರನ್ನು ಬೆಂಗಳೂರಿನ 35ನೇ ಸಿಸಿಹೆಚ್‌ ಆಗಸ್ಟ್‌ 28ರ ವರೆಗೆ ಜಾರಿ ನಿರ್ದೇಶನಾಲಯ ತನ್ನ ಕಸ್ಟಡಿಗೆ ನೀಡಿದೆ.

14 ದಿನ ತಮ್ಮ ವಶಕ್ಕೆ ನೀಡಲು ಇಡಿ ಮನವಿ ಮಾಡಿತ್ತು. ತನಿಖೆ ಅಗತ್ಯವಿದ್ದು, ಕೋಟ್ಯಾಂತರ ರೂ. ನಗದು ಕೆಜಿ ಗಟ್ಟಲೇ ಚಿನ್ನ ಪತ್ತೆಯಾಗಿದೆ. ವಿದೇಶದಲ್ಲಿ ವ್ಯವಹಾರ ಮಾಡಿದ್ದಾರೆ. ಕಸಿನೋಗಳು, ಆನ್ಲೈನ್‌ ಬೆಟ್ಟಿಂಗ್‌ ಸೈಟ್‌ಗಳ ವ್ಯವಹಾರ ನಡೆದಿದೆ. ಅಕ್ರಮ ವಹಿವಾಟು ಆಗಿದೆ. ಇದರ ಕುರಿತು ವಿಚಾರಣೆಯಿದೆ ಎಂದು ಇಡಿ ಪರ ವಕೀಲರು ಮನವಿ ಮಾಡಿದರು. ಎರಡೂ ಕಡೆಯ ವಾದ ಆಲಿಸಿದ ನ್ಯಾಯಾಧೀಶರು ಸೈಯದ್‌ ಬಿ ರೆಹಮಾನ್‌ ಅವರು ಆಗಸ್ಟ್‌ 28 ರವರೆಗೆ ಇಡಿ ವಶಕ್ಕೆ ನೀಡಿ ಆದೇಶ ನೀಡಿದ್ದಾರೆ.

You may also like