ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಇದೀಗ ಯುಜಿಸಿಇಟಿ-2022 ಎರಡನೇ ಸುತ್ತಿನ ಸೀಟು ಹಂಚಿಕೆ ಫಲಿತಾಂಶವನ್ನು ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ. ಸಿಇಟಿ ಪರೀಕ್ಷೆಯಲ್ಲಿ ರ್ಯಾಂಕ್ ಪಡೆದ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ತಮ್ಮ ಫಲಿತಾಂಶ ವೀಕ್ಷಿಸಬಹುದಾಗಿದೆ.
ಎಂಜಿನಿಯರಿಂಗ್, ವಾಸ್ತುಶಿಲ್ಪ, ಬಿ-ಫಾರ್ಮ್, ಕೃಷಿ ವಿಜ್ಞಾನ, ಯೋಗ ಮತ್ತು ಪ್ರಕೃತಿ ಚಿಕಿತ್ಸೆ ಕೋರ್ಸ್‌ಗಳ ಎರಡನೇ ಸುತ್ತಿನ ಸೀಟು ಹಂಚಿಕೆಯ ಫಲಿತಾಂಶವು ವೆಬ್‌ಸೈಟ್ https://cetonline.karnataka.gov.in/kea/ ನಲ್ಲಿ ಬಿಡುಗಡೆಯಾಗಿದೆ.
ಅಭ್ಯರ್ಥಿಗಳು ತಮ್ಮ ನೋಂದಣಿ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ನಮೂದಿಸಿ ಫಲಿತಾಂಶವನ್ನು ನೋಡಬಹುದು. ನಂತರ ಸೀಟು ಹಂಚಿಕೆಯಾದ ಅಭ್ಯರ್ಥಿಗಳು ಚಾಯ್ಸ್ ಅನ್ನು ಆಯ್ಕೆ ಮಾಡಲು ದಿನಾಂಕ 22-11-2022 ರಿಂದ 24-11-2022 ರವರೆಗೆ ಅವಕಾಶವಿದೆ. ಚಾಯ್ಸ್ ಅನ್ನು ಆಯ್ಕೆ ಮಾಡುವ ಮೊದಲು ಅಭ್ಯರ್ಥಿಗಳು ಅದರ ಬಗ್ಗೆ ಕೆಲವು ಮಾಹಿತಿಗಳನ್ನು ತಿಳಿದುಕೊಂಡು ನಂತರ ಆಯ್ಕೆ ಮಾಡುವಂತೆ ತಿಳಿಸಲಾಗಿದೆ.
ಇನ್ನು ಯುಜಿಸಿಇಟಿ -2022 ಎರಡನೇ ಸುತ್ತಿನ ಸೀಟು ಹಂಚಿಕೆಯ ಫಲಿತಾಂಶವನ್ನು ಚೆಕ್ ಮಾಡುವ ವಿಧಾನ ಹೇಗೆಂದರೆ, ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್ https://cetonline.karnataka.gov.in/kea/ ಗೆ ಭೇಟಿ ನೀಡಿ. ಕೆಇಎ ವೆಬ್‌ಸೈಟ್ ಮುಖಪುಟದಲ್ಲಿ ಯುಜಿಸಿಇಟಿ-2022 ಎರಡನೇ ಸುತ್ತಿನ ಸೀಟು ಹಂಚಿಕೆ ಫಲಿತಾಂಶ ಎನ್ನುವ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ನಂತರ ನಿಮಗೆ ಕೆಇಎ ಮತ್ತೊಂದು ಪೇಜ್ ಓಪನ್ ಆಗುತ್ತದೆ. ಆ ಪುಟದಲ್ಲಿ ಯುಜಿಸಿಇಟಿ-2022 ರ ನಂಬರ್ ನೀಡಿ ‘Submit’ ಎಂಬಲ್ಲಿ ಕ್ಲಿಕ್ ಮಾಡಬೇಕು. ಆಗ ಸ್ಕ್ರೀನ್ ಮೇಲೆ ಫಲಿತಾಂಶವು ಪ್ರಕಟವಾಗುತ್ತದೆ. ನಂತರ ಅಗತ್ಯ ಕ್ರಮಗಳನ್ನು ಸೀಟು ಹಂಚಿಕೆಗೆ ಕೈಗೊಳ್ಳಬಹುದು.
ಅಭ್ಯರ್ಥಿಗಳು ಮಾಡುವ ಆಯ್ಕೆಯ ಜೊತೆಗೆ ಅವರ KCET ಕಾರ್ಯಕ್ಷಮತೆ ಮತ್ತು ಸೀಟುಗಳ ಲಭ್ಯತೆಯನ್ನು ಆಧರಿಸಿ KCET-2022 ರ ಸೀಟು ಹಂಚಿಕೆಯಾಗುತ್ತದೆ. ಸೀಟು ಹಂಚಿಕೆಯಾದ ನಂತರ ತಮ್ಮಗೆ ಸಿಕ್ಕ ಸೀಟುಗಳಿಗೆ ಸರಿಯಾಗಿ ಅಭ್ಯರ್ಥಿಗಳು ಆಯ್ಕೆಗಳನ್ನು ಆರಿಸಿಕೊಳ್ಳಬಹುದು.
ಹಾಗೇ ಎರಡನೇ ಸುತ್ತಿನ ಸೀಟು ಹಂಚಿಕೆಯ ಫಲಿತಾಂಶವನ್ನು ಡೌನ್‌ಲೋಡ್ ಮಾಡಿಕೊಂಡ ನಂತರ ಅದರ ಪಕ್ಕದಲ್ಲಿಯೇ ಕೆಸಿಇಟಿ ಸೀಟು ಹಂಚಿಕೆಯ ಪಟ್ಟಿ ಡೌನ್‌ಲೋಡ್ ಆಯ್ಕೆ ಇರುತ್ತದೆ.
ಅಭ್ಯರ್ಥಿಗಳು ತಮ್ಮ ಸೀಟು ನಿಯೋಜನೆಯ ಪತ್ರವನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. ಪಟ್ಟಿ ಆಯ್ಕೆ ಮಾಡಿಕೊಂಡು ಅಭ್ಯರ್ಥಿಗಳು ಅದರ ಶುಲ್ಕವನ್ನು ಪಾವತಿಸಿ ಪ್ರವೇಶ ಪತ್ರವನ್ನು ನವೆಂಬರ್ 23 ರಿಂದ 25ರೊಳಗೆ ಡೌನ್‌ಲೋಡ್ ಮಾಡಿಕೊಳ್ಳಬಹುದು. ಬಳಿಕ ಅಗತ್ಯವಿರುವ ದಾಖಲೆ ಮತ್ತು ಪ್ರಮಾಣಪತ್ರಗಳ ಜೊತೆಗೆ ಸೀಟು ಮತ್ತು ಗೊತ್ತುಪಡಿಸಿದ ಕಾಲೇಜಿಗೆ ವರದಿ ಮಾಡಿಕೊಳ್ಳಲು ನವೆಂಬರ್ 26 ಕೊನೆಯ ದಿನವಾಗಿರುತ್ತದೆ.
ಇನ್ನು ಸೀಟ್ ಮ್ಯಾಟ್ರಿಕ್ಸ್ ಪ್ರಕಟಣೆ 17-11-2022ರ 4 ಗಂಟೆಯ ನಂತರವಾಗಲಿದೆ. ಅರ್ಹ ಅಭ್ಯರ್ಥಿಗಳು ತಮ್ಮ ಆಯ್ಕೆಗಳನ್ನು ಬದಲಾಯಿಸಲು 17-11-2022 ರಿಂದ 19-11-2022ರ ವರೆಗೆ ಅವಕಾಶ ಇರುತ್ತದೆ. ಹಾಗೇ ಎರಡನೇ ಸುತ್ತಿನ ಸೀಟು ಹಂಚಿಕೆ ಫಲಿತಾಂಶ ಪ್ರಕಟಣೆ ದಿನಾಂಕ 21-11-2022ರ 4 ಗಂಟೆಯ ನಂತರವಿರುತ್ತದೆ. ಮತ್ತು ಸೀಟು ಹಂಚಿಕೆಯಾದ ಅಭ್ಯರ್ಥಿಗಳು ಚಾಯ್ಸ್ ಅನ್ನು 22-11-2022 ರಿಂದ 24-11-2022 ರವರೆಗೆ ಆಯ್ಕೆ ಮಾಡಬಹುದು.
ಜೊತೆಗೆ ಶುಲ್ಕ ಪಾವತಿ ಚಾಯ್ಸ್ -1 ಅಥವಾ ಚಾಯ್ಸ್- 2 ನ್ನು ಆಯ್ಕೆ ಮಾಡಿಕೊಂಡ ಅಭ್ಯರ್ಥಿಗಳಿಗೆ ಮಾತ್ರ 23-11-2022 ರಿಂದ 25-11-2022 ರ ವರೆಗೆ ಅವಕಾಶ ಇರುತ್ತದೆ. ಇನ್ನೂ ಪ್ರವೇಶ ಪತ್ರ ಡೌನ್‌ಲೋಡ್ ಮಾಡಿಕೊಳ್ಳುವುದು, ಚಾಯ್ಸ್ -1 ನ್ನು ಆಯ್ಕೆಯನ್ನು ಮಾಡಿಕೊಂಡ ಅಭ್ಯರ್ಥಿಗಳು ಮಾತ್ರ 23-11-2022 ರಿಂದ 25-11-2022 ರ ವರೆಗೆ ಇರುತ್ತದೆ. ಚಾಯ್ಸ್ -1 ಆಯ್ಕೆ ಮಾಡಿಕೊಂಡ ಅಭ್ಯರ್ಥಿಗಳು ಕಾಲೇಜಿನಲ್ಲಿ ಪ್ರವೇಶ ಪಡೆಯಲು 26-11-2022 ಕೊನೆಯ ದಿನಾಂಕ ಆಗಿರುತ್ತದೆ.
