Home » KEA: KEA-ಕರ್ನಾಟಕ ವಿಧಾನ ಪರಿಷತ್ತಿನ ಸಚಿವಾಲಯದ ವಿವಿಧ ಹುದ್ದೆಗಳ ಪರೀಕ್ಷೆ ದಿನಾಂಕ ಘೋಷಣೆ

KEA: KEA-ಕರ್ನಾಟಕ ವಿಧಾನ ಪರಿಷತ್ತಿನ ಸಚಿವಾಲಯದ ವಿವಿಧ ಹುದ್ದೆಗಳ ಪರೀಕ್ಷೆ ದಿನಾಂಕ ಘೋಷಣೆ

by ಕಾವ್ಯ ವಾಣಿ
0 comments
PSI Recruitment

KEA: ಈಗಾಗಲೇ ಕರ್ನಾಟಕ ವಿಧಾನ ಪರಿಷತ್ತಿನ ಸಚಿವಾಲಯದ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿಗಳನ್ನು ಆಹ್ವಾನ ಮಾಡಲಾಗಿತ್ತು. ಇದೀಗ ಈ ಹುದ್ದೆಗಳಿಗೆ ಸಂಬಂಧಿಸಿದಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಸ್ಪರ್ಧಾತ್ಮಕ ಪರೀಕ್ಷಾ ಪರಿಷ್ಕೃತ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ.

ಕರ್ನಾಟಕ ವಿಧಾನ ಪರಿಷತ್ತಿನ ಸಚಿವಾಲಯದ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಮಾಡಿದವರಿಗೆ ಮಾರ್ಚ್ 22 ರಿಂದ ಪರೀಕ್ಷೆ ಇರುತ್ತದೆ. ವಿಧಾನ ಪರಿಷತ್ತಿನ ಸಚಿವಾಲಯದ ವಿವಿಧ ಹುದ್ದೆಗಳ ನೇಮಕಾತಿಗೆ ಪರೀಕ್ಷೆಗಳನ್ನು ಮಾರ್ಚ್ 22, 23, 24 ಹಾಗೂ 25 ರಂದು ಪರೀಕ್ಷೆಗಳು ನಡೆಯಲಿವೆ.

 

ಜೂನಿಯ‌ರ್ ಕೌನ್ಸಲ‌ರ್ ಆಪರೇಟ‌ರ್, ಕಂಪ್ಯೂಟರ್ ಆಪರೇಟರ್, ಸಹಾಯಕರು, ಕಿರಿಯ ಸಹಾಯಕರು, ಕಂಪ್ಯೂಟರ್ ಆಪರೇಟ‌ರ್, ಕಿರಿಯ ಕೌನ್ಸಲರ್ ಆಪರೇಟ‌ರ್, ಹಿರಿಯ ಪ್ರೋಗ್ರಾಮರ್, ಕಿರಿಯ ಪ್ರೋಗ್ರಾಮರ್, ಡಾಟಾ ಎಂಟ್ರಿ ಸಹಾಯಕ ಈ ಕೆಲಸಗಳಿಗೆ ಅರ್ಜಿ ಸಲ್ಲಿಸಿರುವಂತ ಅಭ್ಯರ್ಥಿಗಳಿಗೆ ಪರೀಕ್ಷೆ ದಿನಾಂಕಗಳನ್ನು ಘೋಷಣೆ ಮಾಡಲಾಗಿದೆ

 

ಹಿರಿಯ ಪ್ರೋಗ್ರಾಮರ್, ಕಿರಿಯ ಪ್ರೋಗ್ರಾಮರ್, ಕಂಪ್ಯೂಟರ್ ಆಪರೇಟರ್, ಜೂನಿಯ‌ರ್ ಕೌನ್ಸಲ‌ರ್ ಆಪರೇಟ‌ರ್ ಹುದ್ದೆಗಳಿಗೆ ಪತ್ರಿಕೆ-2 (Specific paper) ಪ್ರಶ್ನೆ ಪತ್ರಿಕೆಗಳನ್ನು ಇಂಗ್ಲಿಷ್‌ನಲ್ಲಿ ಇರುತ್ತವೆ.

 

ಸಹಾಯಕರು, ಕಿರಿಯ ಸಹಾಯಕರು, ಕಂಪ್ಯೂಟರ್ ಆಪರೇಟರ್, ಕಿರಿಯ ಕೌನ್ಸಲ‌ರ್ ಆಪರೇಟ‌ರ್ ಈ ಉದ್ಯೋಗಗಳು ಗ್ರೂಪ್- ಸಿ ಹುದ್ದೆಗಳು ಆಗಿವೆ. ಪತ್ರಿಕೆ-1ರ ಪಠ್ಯ ಕ್ರಮವು ಮತ್ತು ಗರಿಷ್ಠ ಅಂಕಗಳು ಒಂದೇ ಇರುವುದರಿಂದ ಒಂದಕ್ಕಿಂತ ಹೆಚ್ಚು ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಮಾಡಿದ ಅಭ್ಯರ್ಥಿಗಳು ಯಾವುದಾದ್ರೂ ಒಂದು ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆಗೆ ಹಾಜರಾಗಿ ಗೈರು ಹಾಜರಾದ ಪ್ರವೇಶ ಪತ್ರವನ್ನು (ಹಾಲ್ ಟಿಕೆಟ್) ಪ್ರಾಧಿಕಾರಕ್ಕೆಸಲ್ಲಿಸಿದ್ದಲ್ಲಿ ಅರ್ಜಿ ಸಲ್ಲಿಸಿದ ಉಳಿದ ಮೇಲ್ಕಂಡ ಹುದ್ದೆಗಳಿಗೆ ಪತ್ರಿಕೆ-1 ಅಂಕಗಳನ್ನು ಪರಿಗಣಿಸಲಾಗುವುದು

ಪರೀಕ್ಷೆ ದಿನಾಂಕದ ಲಿಂಕ್ ಇಲ್ಲಿದೆ:

https://cetonline.karnataka.gov.in/keawebentry456/klc2024/klcexamschedkannada.pdf

 

https://cetonline.karnataka.gov.in/keawebentry456/klc2024/20250219112452kannada.pdf

You may also like