Kedarnath: ಉತ್ತರಾಖಂಡದಲ್ಲಿ ಭಾರಿ ಮಳೆಯಿಂದಾಗಿ ಕೇದಾರನಾಥ ಯಾತ್ರೆಯನ್ನು ನಿಲ್ಲಿಸಲಾಗಿದೆ. ಸೋನ್‌ಪ್ರಯಾಗ್ ಮತ್ತು ಗೌರಿಕುಂಡ್‌ನಲ್ಲಿ ಪ್ರಯಾಣಿಕರನ್ನು ನಿಲ್ಲಿಸಲಾಗಿದೆ. ರುದ್ರಪ್ರಯಾಗ್ ಮತ್ತು ಚಮೋಲಿ ಜಿಲ್ಲೆಗಳಿಗೆ ಹವಾಮಾನ ಇಲಾಖೆ ಮಳೆ ಎಚ್ಚರಿಕೆ ನೀಡಿದೆ. ರುದ್ರಪ್ರಯಾಗ್ ಮತ್ತು ಉತ್ತರಾಖಂಡದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರಿ ಮಳೆಯಾಗುತ್ತಿರುವುದರಿಂದ ಅಲಕನಂದಾ ನದಿಯಲ್ಲಿ ನೀರಿನ ಮಟ್ಟ ಹೆಚ್ಚಾಗಿದೆ.
ಭೂಕುಸಿತದ ನಂತರ ಬದರಿನಾಥಕ್ಕೆ ಹೋಗುವ ರಸ್ತೆಯನ್ನು ಸಹ ಮುಚ್ಚಲಾಗಿದೆ. ಇನ್ನು ಗೌರಿಕುಂಡದಲ್ಲಿ ಗುಡ್ಡ ಕುಸಿತದ ಹಿನ್ನೆಲೆ ಕಾರ್ಯಾಚರಣೆ ನಡಯುತ್ತಿದ್ದು, ಕುಸಿದ ಮಣ್ಣು ತೆಗೆದುಹಾಕುವ ಕೆಲಸ ನಡೆಯುತ್ತಿದೆ, ಇದರಿಂದ ಯಾತ್ರೆ ಶೀಘ್ರದಲ್ಲೇ ಪ್ರಾರಂಭವಾಗಬಹುದೆಂದು ಅಂದಾಜಿಸಲಾಗಿದೆ. ಭಾರೀ ಮಳೆಯಿಂದಾಗಿ ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದಾರೆ.
ವಾಸ್ತವವಾಗಿ, ಈ ದಿನಗಳಲ್ಲಿ ಉತ್ತರಾಖಂಡದಲ್ಲಿ ಭಾರೀ ಮಳೆಯಾಗುತ್ತದೆ. ಇದರಿಂದಾಗಿ, ಭೂಕುಸಿತದ ಘಟನೆಗಳು ಸಂಭವಿಸುವುದು ಮಾಮೂಲು. ಇತ್ತೀಚೆಗೆ, ಭಾರೀ ಮಳೆಯಿಂದಾಗಿ ಸೋನ್‌ಪ್ರಯಾಗದಲ್ಲಿ ಭೂಕುಸಿತ ಸಂಭವಿಸಿತ್ತು. ಇದರಲ್ಲಿ ಕೇದಾರನಾಥದಿಂದ ಹಿಂತಿರುಗುತ್ತಿದ್ದ 40 ಕ್ಕೂ ಹೆಚ್ಚು ಭಕ್ತರು ಸಿಲುಕಿಕೊಂಡಿದ್ದರು. ನಂತರ ಸೋನ್‌ಪ್ರಯಾಗ ಭೂಕುಸಿತ ಪ್ರದೇಶದ ಬಳಿ ಸಿಲುಕಿದ್ದ 40 ಭಕ್ತರನ್ನು ರಾಜ್ಯ ವಿಪತ್ತು ಪ್ರತಿಕ್ರಿಯೆ ಪಡೆ (SDRF) ಯಶಸ್ವಿಯಾಗಿ ರಕ್ಷಿಸಿತು.
#WATCH | Heavy rainfall in Rudraprayag and adjacent areas of Uttarakhand has increased the water flow in the Alaknanda River. However, the river is still flowing below the danger mark.
#Uttarakhand pic.twitter.com/z3goASQeKO
— ANI (@ANI) July 7, 2025
ಇದನ್ನೂ ಓದಿ: Online Betting: ಆನ್‌ಲೈನ್ ಬೆಟ್ಟಿಂಗ್ ದಂಧೆಗೆ ಕಡಿವಾಣ ಹಾಕಲು ಹೊಸ ಮಸೂದೆ ರೂಪಿಸಿದ ಸರ್ಕಾರ!
