Home News Room Booking: ಸಂಗಾತಿ ಜೊತೆ ಹೋಟೆಲ್ ರೂಂ ಗಳಿಗೆ ಹೋದಾಗ ಈ 3 ವಿಚಾರ ನೆನಪಿರಲಿ

Room Booking: ಸಂಗಾತಿ ಜೊತೆ ಹೋಟೆಲ್ ರೂಂ ಗಳಿಗೆ ಹೋದಾಗ ಈ 3 ವಿಚಾರ ನೆನಪಿರಲಿ

Room Booking : ಪ್ರೇಮಿಗಳು, ಸಂಗಾತಿಗಳು ಅಥವಾ ಮದುವೆಯಾದ ದಂಪತಿಗಳು ಪ್ರವಾಸದ ವೇಳೆ ಅಥವಾ ಪ್ರಯಾಣದ ಸಂದರ್ಭದಲ್ಲಿ ಉಳಿದುಕೊಳ್ಳಲು ಹೋಟೆಲ್ಗಳಲ್ಲಿ ರೂಮ್ ಬುಕ್ ಮಾಡಿಕೊಳ್ಳುತ್ತಾರೆ.  ಇಲ್ಲಿ ಅವರು ತಮ್ಮ ಗೌಪ್ಯತೆಯನ್ನು ಕಾಪಾಡಿಕೊಳ್ಳುತ್ತಾರೆ. ಇಂತಹ ಸಂದರ್ಭದಲ್ಲಿ ಕೆಲವು ರೂಂ ಗಳಲ್ಲಿ ಕಿಡಿಗೇಡಿಗಳು ಸಂಗಾತಿಗಳನ್ನು ಟ್ರ್ಯಾಪ್ ಮಾಡಿ, ಅವರ ಖಾಸಗಿ ಕ್ಷಣಗಳನ್ನು ರೆಕಾರ್ಡ್ ಮಾಡಿ ಅವರಿಂದ ಹಣ ವಸೂಲಿ ಮಾಡುವುದು ಕೂಡ ಉಂಟು. ಹೀಗಿರುವಾಗ ನೀವೇನಾದರೂ ತಮ್ಮ ಸಂಗಾತಿ ಜೊತೆ ಹೋಟೆಲ್ ರೂಂ ಗಳಿಗೆ ಹೋದ ಸಂದರ್ಭದಲ್ಲಿ ಈ ಮೂರು ವಿಚಾರಗಳ ಬಗ್ಗೆ ನಿಗಾ ಇರಬೇಕು. ಹಾಗಿದ್ದರೆ ಅವು ಯಾವುವು ಎಂದು ನೋಡೋಣ

ಕ್ಯಾಮೆರಾ ಹುಡುಕಿ

ನಿಮ್ಮ ಮೊಬೈಲ್ ಟಾರ್ಚ್ ಅಥವಾ ಟಾರ್ಚ್ ಆನ್ ಮಾಡಿ ಕೋಣೆಯ ಪ್ರತಿಯೊಂದು ಮೂಲೆಯನ್ನೂ ಸಂಪೂರ್ಣವಾಗಿ ಪರೀಕ್ಷಿಸಿ. ಎಲ್ಲಿಯಾದರೂ ಕ್ಯಾಮೆರಾ ಲೆನ್ಸ್ ಇದ್ದರೆ, ಅದರ ಮೇಲೆ ಬೆಳಕು ಬಿದ್ದಾಗ ಅದು ಹೊಳೆಯುತ್ತದೆ. ವಿಶೇಷವಾಗಿ ಗಾಜಿನಂತೆ ಹೊಳೆಯುವ ನೀಲಿ ಅಥವಾ ನೇರಳೆ ಪ್ರತಿಬಿಂಬವಿದ್ದರೆ, ಅಲ್ಲಿ ಕ್ಯಾಮೆರಾ ಇರುವ ಸಾಧ್ಯತೆಯಿದೆ. ಕನ್ನಡಿಗಳು ಮತ್ತು ಪೀಠೋಪಕರಣಗಳ ಮೂಲೆಗಳಲ್ಲಿ ಅಂತಹ ವಸ್ತುಗಳು ಇರುವ ಸಾಧ್ಯತೆ ಇದೆ. ಕ್ಯಾಮೆರಾ ಇರುವ ಅನುಮಾನ ಧೃಡವಾಗಿದ್ದರೆ, ನೀವು ಆನ್‌ಲೈನ್‌ನಲ್ಲಿ ಲಭ್ಯವಿರುವ RF ಡಿಟೆಕ್ಟರ್‌ಗಳು ಅಥವಾ ಲೆನ್ಸ್ ಡಿಟೆಕ್ಟರ್‌ಗಳನ್ನು ಖರೀದಿಸಬಹುದು ಮತ್ತು ಅವುಗಳನ್ನು ನಿಮ್ಮೊಂದಿಗೆ ಕೊಂಡೊಯ್ಯಬಹುದು. ಇವು ಕ್ಯಾಮೆರಾದ ರೇಡಿಯೋ ಆವರ್ತನವನ್ನು ಪತ್ತೆ ಮಾಡಬಹುದು.

ಉಚಿತ ವೈ-ಫೈ ಮೇಲೆ ಎಚ್ಚರ

ಹೋಟೆಲ್ ಉಚಿತ ವೈ-ಫೈ ಬಳಸುವ ಮೊದಲು ಒಮ್ಮೆ ನಿಮ್ಮ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಿ. ತೀರಾ ಅಗತ್ಯವಿಲ್ಲದಿದ್ದರೆ ಹೋಟೆಲ್ ವೈ-ಫೈ ಬಳಸಬೇಡಿ. ಹೋಟೆಲ್ ವೈ-ಫೈ ಬಳಸುವುದರಿಂದ ಇತರರು ನಿಮ್ಮ ಫೋನ್ ಮತ್ತು ಲ್ಯಾಪ್‌ಟಾಪ್‌ನಲ್ಲಿರುವ ಡೇಟಾವನ್ನು ಹ್ಯಾಕ್ ಮಾಡುವ ಸಾಧ್ಯತೆ ಹೆಚ್ಚಾಗುತ್ತದೆ.

ಇತರ ವಸ್ತುಗಳ ಬಗ್ಗೆ ನಿಗಾ ಇರಿಸಿ

ಅನೇಕ ರಹಸ್ಯ ಕ್ಯಾಮೆರಾಗಳು ವೈ-ಫೈನೊಂದಿಗೆ ಕಾರ್ಯನಿರ್ವಹಿಸುತ್ತವೆ. ನೀವು ‘ಫಿಂಗ್’ ನಂತಹ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು ಮತ್ತು ನೆಟ್‌ವರ್ಕ್‌ಗೆ ಸಂಪರ್ಕಗೊಂಡಿರುವ ಸಾಧನಗಳನ್ನು ಪರಿಶೀಲಿಸಬೇಕು. ನೀವು ಐಪಿ ಕ್ಯಾಮೆರಾಗಳನ್ನು ಕಂಡ ತಕ್ಷಣವೇ ಅಲರ್ಟ್‌ ಆಗಿ ಇರಿ. ಹೊಗೆ ಪತ್ತೆಕಾರಕಗಳು, ಅಲಾರಾಂ ಗಡಿಯಾರಗಳು, ಟೆಡ್ಡಿ ಬೇರ್‌ಗಳು ಮತ್ತು ಪವರ್ ಸಾಕೆಟ್‌ಗಳಂತಹ ಅನುಮಾನಾಸ್ಪದ ವಸ್ತುಗಳನ್ನು ಬೇರೆ ಸ್ಥಳದಲ್ಲಿಡುವುದು ಒಳ್ಳೆಯದು.