Freezer murder: ಶ್ರದ್ಧಾ ವಾಕರ್ ಹತ್ಯೆ ಪ್ರಕರಣ ಇಡೀ ದೇಶವನ್ನೇ ದಂಗುಬಡಿಸಿತ್ತು. ಆದರೆ ಇದೀಗ ಮತ್ತೆ ಅದೇ ರೀತಿಯ ಪ್ರಕರಣ ಬೆಳಕಿಗೆ ಬಂದಿದೆ. ಆದರೆ ಈ ಘಟನೆ ಮಾತ್ರ ಅದಕ್ಕಿಂತಲೂ ಭಯಾನಕವಾಗಿದ್ದು ನಿಮ್ಮನ್ನು ಬೆಚ್ಚಿಬೀಳಿಸುತ್ತದೆ. ಯಾಕೆಂದ್ರೆ ಇಲ್ಲೊಬ್ಬ ವ್ಯಕ್ತಿ ವೃದ್ಧರೊಬ್ಬರ ಮೃತದೇಹವನ್ನು ಎರಡು ವರ್ಷಗಳ ಕಾಲ ಫ್ರೀಜರ್‌ನಲ್ಲಿ(Freezer murder)ಇರಿಸಿದ್ದಾನೆ!
ಹೌದು, ಯುಕೆಯಲ್ಲಿ ಜಾನ್ ವೈನ್ರೈಟ್(71) ಎಂಬುವವರು 2018ರ ಸೆಪ್ಟೆಂಬರ್ನಲ್ಲಿ ನಿಧನರಾಗಿದ್ದರು. ಆದರೆ ಅವರ ದೇಹವನ್ನು 2020ರ ಆಗಸ್ಟ್ 22ರವರೆಗೆ ಡೇಮಿಯನ್ ಜಾನ್ಸನ್ ಎಂಬ, 52 ವರ್ಷದ ವ್ಯಕ್ತಿಯೊಬ್ಬ ಫ್ರೀಜರ್‌ನಲ್ಲಿ ಇರಿಸಿ, ಅವರ ಪಿಂಚಣಿ ಹಣದಲ್ಲಿ ಶಾಪಿಂಗ್ ಮಾಡುತ್ತಾ ಕಾಲ ಕಳೆಯುತ್ತಿದ್ದನು. ಸದ್ಯ ಈ ಆರೋಪವನ್ನು ಈಗ ಒಪ್ಪಿಕೊಂಡಿರುವ ಈತ ವೃದ್ಧರ ಮೃತದೇಹವನ್ನು ಫ್ರೀಜರ್ನಲ್ಲಿರಿಸಿ ಅವರ ಹಣವನ್ನು ನಾನು ಉಪಯೋಗಿಸುತ್ತಿದ್ದೆ, ಶಾಪಿಂಗ್ ಮಾಡುತ್ತಿದ್ದೆ ಎಂದು ಹೇಳಿದ್ದಾರೆ.
ಇನ್ನು ವೈನ್ರೈಟ್ ಅವರ ಸಾವಿಗೆ ಏನು ಕಾರಣ ಎಂದು ಇನ್ನೂ ಬಹಿರಂಗವಾಗಿಲ್ಲ. ಇಬ್ಬರೂ ಬರ್ಮಿಂಗ್‌ಹ್ಯಾಮ್‌ನ ಡೌನ್‌ಟೌನ್ ಕ್ಲೀವ್‌ಲ್ಯಾಂಡ್ ಟವರ್, ಹೋಲಿವೆಲ್ ಹೆಡ್‌ನಲ್ಲಿರುವ ಫ್ಲಾಟ್‌ನಲ್ಲಿ ವಾಸಿಸುತ್ತಿದ್ದಾಗ ಅಪರಾಧ ನಡೆದಿದೆ ಎಂದು ಅಂದಾಜಿಸಲಾಗಿದೆ.
ಅಂದಹಾಗೆ ಇದೇ ರೀತಿಯ ಪ್ರಕರಣ ಈ ಹಿಂದೆ ನಮ್ಮ ಭಾರತದ ಕೊಲ್ಕೊತ್ತದಲ್ಲಿ ನಡೆದಿದ್ದು, 43 ವರ್ಷದ ವ್ಯಕ್ತಿಯೊಬ್ಬರು ತಮ್ಮ ಹೆಬ್ಬೆರಳಿನ ಗುರುತನ್ನು ಬಳಸಿಕೊಂಡು ಪ್ರತಿ ತಿಂಗಳು ಪಿಂಚಣಿ ಸಂಗ್ರಹಿಸಲು ಸುಮಾರು ಮೂರು ವರ್ಷಗಳ ಕಾಲ ತನ್ನ ಮೃತ ತಾಯಿಯ ಶವವನ್ನು ಡೀಪ್ ಫ್ರೀಜರ್‌ನಲ್ಲಿ ಇರಿಸಿ ಬಂಧನಕ್ಕೊಳಗಿದ್ದರು.
ಇದನ್ನೂ ಓದಿ: ಮದುವೆಯಾಗದ ಯುವಕರಿಗೆ ಮದುವೆ ಭಾಗ್ಯ ಗ್ಯಾರಂಟಿ- ಪಕ್ಷೇತರ ಅಭ್ಯರ್ಥಿಯ ಪ್ರಣಾಳಿಕೆ ಫುಲ್ ವೈರಲ್!
