Home » ಸಹಜ ಲೈಂಗಿಕ ಕ್ರಿಯೆ ನಡೆಸದೆ, ಎರಡು ತೊಡೆಗಳ ಮಧ್ಯೆ ಮಾಡಿದರೂ ಅದು ರೇಪ್ | ಮಹತ್ವದ ತೀರ್ಪು ನೀಡಿದ ಕೇರಳ ಕೋರ್ಟು!!

ಸಹಜ ಲೈಂಗಿಕ ಕ್ರಿಯೆ ನಡೆಸದೆ, ಎರಡು ತೊಡೆಗಳ ಮಧ್ಯೆ ಮಾಡಿದರೂ ಅದು ರೇಪ್ | ಮಹತ್ವದ ತೀರ್ಪು ನೀಡಿದ ಕೇರಳ ಕೋರ್ಟು!!

1,171 comments

ಎರ್ನಾಕುಳಂ: ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಕೇರಳ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಎಲ್ಲರೂ ಅಂದುಕೊಳ್ಳುವ ಸಹಜ ಲೈಂಗಿಕ ಕ್ರಿಯೆ ನಡೆಯದಿದ್ದರೂ ಸಂತ್ರಸ್ತೆಯ ತೊಡೆಗಳ ಮಧ್ಯೆ ಲೈಂಗಿಕ ಕ್ರಿಯೆಗೆ ಯತ್ನಿಸಿದರೂ ಅದು ಅತ್ಯಾಚಾರಕ್ಕೆ ಸಮ ಎಂದು ಕೇರಳ ಹೈಕೋರ್ಟ್ ತೀರ್ಪು ನೀಡಿದೆ.

ಆತ ತನ್ನ ನೆರೆಮನೆಯ 11 ವರ್ಷದ ಬಾಲಕಿಯ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಎಸಗಿದ್ದ. ಆತ ಸಹಜ ಲೈಂಗಿಕ ಕ್ರಿಯೆ ಮಾಡಿರಲಿಲ್ಲ. ಅಂದರೆ ಪೆನೆಟ್ರೇಟ್ ಮಾಡಿರಲಿಲ್ಲ. ಆದರೆ ಆತ ಬಾಲಕಿಯ ತೊಡೆಗಳ ಮಧ್ಯೆ ಸೆಕ್ಸ್ ಮಾಡಿದ್ದ. ಹಾಗಾಗಿ ಇದು ಸೆಕ್ಸ್ ಅಲ್ಲ ಎಂದು ವಾದಿಸಿತ್ತು ಆರೋಪಿ ಪರ ತಂಡ. ಕೆಳ ನ್ಯಾಯಾಲಯ ಆತನಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಳ ನ್ಯಾಯಾಲಯ ವಿಧಿಸಿದ್ದ ಶಿಕ್ಷೆಯನ್ನು ಆರೋಪಿ ಹೈಕೋರ್ಟ್ ನಲ್ಲಿ ಪ್ರಶ್ನಿಸಿದ್ದ.

ಇದೀಗ ಶಿಕ್ಷೆ ಎತ್ತಿ ಹಿಡಿದಿರುವ ನ್ಯಾಯಾಲಯ, ಜೀವಾವಧಿ ಶಿಕ್ಷೆಯನ್ನು ಸಮರ್ಥಿಸಿಕೊಂಡಿದೆ. 2015 ರಲ್ಲಿ ಈ ಪ್ರಕರಣ ದಾಖಲಾಗಿದ್ದು, ಈಗ ಶಿಕ್ಷೆ ಮತ್ತೆ ಖಾಯಂ ಆಗಿದೆ.

You may also like

Leave a Comment