ಕಳೆದ ಕೆಲ ತಿಂಗಳ ಹಿಂದೆ ಕೇರಳದ ಕೊಚ್ಚಿಯಲ್ಲಿ ಅಪಘಾತವೊಂದರಲ್ಲಿ ಇಬ್ಬರು ಮಾಡೆಲ್ ಗಳು ಮೃತಪಟ್ಟ ಪ್ರಕರಣಕ್ಕೆ ತಿರುವು ಸಿಕ್ಕಿದ್ದು, ಡ್ರಗ್ ಪೆಡ್ಲರ್ ಅಪಘಾತ ನಡೆಸಿ ರೂಪದರ್ಶಿಯಾರನ್ನು ಕೊಲೆ ನಡೆಸಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.ಪ್ರಕರಣ ಸಂಬಂಧ ಡ್ರಗ್ ಪೆಡ್ಲರ್ ಸೈಜು ತೆಂಕಚ್ಚನ್ ಆರೋಪಿಯಾಗಿದ್ದಾನೆ.
ಘಟನೆ ವಿವರ: ಕಳೆದ ಅಕ್ಟೋಬರ್ 31 ರಂದು ಆನ್ಸಿ ಮತ್ತು ಅಂಜನಾ ಎಂಬಿಬ್ಬರು ರೂಪದರ್ಶಿಯರು ಹೋಟೆಲ್ ಒಂದರಲ್ಲಿ ಗೆಳೆಯರೊಂದಿಗೆ ಪಾರ್ಟಿ ನಡೆಸುತ್ತಿದ್ದ ಸಂದರ್ಭ ಅಲ್ಲಿಗೆ ಬಂದಿದ್ದ ಆರೋಪಿ ಸೈಜು ಯುವತಿಯರೊಂದಿಗೆ ಅನುಚಿತವಾಗಿ ವರ್ತಿಸಿದ್ದ.
ಆ ಬಳಿಕ ರಾತ್ರಿ ಹೋಟೆಲ್ ನಲ್ಲೆ ತಂಗಲು ವ್ಯವಸ್ಥೆ ಮಾಡುವುದಾಗಿ ಹೇಳಿದ್ದರಿಂದ ಯುವತಿಯರು ಆತನ ಮಾತನ್ನು ತಿರಸ್ಕರಿಸಿ ಗೆಳೆಯರೊಂದಿಗೆ ಕಾರಿನಲ್ಲಿ ಹೊರಟಿದ್ದರು. ಕೂಡಲೇ ಆರೋಪಿ ಸೈಜು ಯುವತಿಯರನ್ನು ಹಿಂಬಾಲಿಸಿದ್ದಾನೆ.ಈತ ಹಿಂಬಾಲಿಸುತ್ತಿದ್ದೂದನ್ನು ಕಂಡ ಕಾರು ಚಾಲಕ ಯುವತಿಯರಿದ್ದ ಕಾರನ್ನು ವೇಗವಾಗಿ ಚಲಾಸಿದ್ದರ ಪರಿಣಾಮ ಕಾರು ಅಪಘಾತಗೊಂಡಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.
ಅಪಘಾತ ನಡೆದ ಸ್ಥಳದಲ್ಲೇ ಯುವತಿಯರು ಸಾವನ್ನಪ್ಪಿದ್ದು, ಇನ್ನೊರ್ವ ಚಿಕೆತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದ. ಇದೊಂದು ಅಪಘಾತ ಪ್ರಕರಣ ಎಂದು ಮುಚ್ಚಿಹೋಗಲಿದ್ದ ಪ್ರಕರಣ ಹೊಸ ತಿರುವು ಪಡೆದುಕೊಂಡಿದ್ದು, ಕೊಲೆ ಎಂದು ಅನುಮಾನಿಸಿದ ಪರಿಣಾಮ ತೀವ್ರವಾದ ತನಿಖೆ ಹೊಸ ರೂಪ ಪಡೆದುಕೊಂಡು ಪ್ರಮುಖ ಆರೋಪಿಯ ಪತ್ತೆಯಾಗಿದೆ.
