7
Kerala: ಆಟವಾಡುವಾಗ ತಲೆಯ ಮೇಲೆ ಹಲಸಿನ ಹಣ್ಣು ಬಿದ್ದು 9 ವರ್ಷದ ಬಾಲಕಿಯೊಬ್ಬಳು ಸಾವಿಗೀಡಾದ ಘಟನೆ ಮಲಪ್ಪುರಂನ ಕೊಟ್ಟಕ್ಕಲ್‌ನಲ್ಲಿ ನಡೆದಿದೆ.
ಚಂಗುವೆಟ್ಟಿ ನಿವಾಸಿ ಕುಂಜಲವಿ ಅವರ ಪುತ್ರಿ ಆಯಿಷಾ ದಾಸ್ ಸಾವಿಗೀಡಾದ ಬಾಲಕಿ. ಸ್ನೇಹಿತರ ಜೊತೆ ಮನೆಯ ಹಿಂದೆ ಆಟವಾಡುತ್ತಿದ್ದಾಗ ಆಕೆಯ ತಲೆಯ ಮೇಲೆ ಹಲಸಿನ ಹಣ್ಣು ಬಿದ್ದಿದೆ. ಇದರಿಂದ ತಲೆಗೆ ಗಂಭೀರವಾದ ಪೆಟ್ಟಾಗಿದೆ. ಕೂಡಲೇ ಆಯಿಷಾಳನ್ನು ಆಸ್ಪತ್ರೆಗೆ ದಾಖಲು ಮಾಡಿದ್ದು, ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾಳೆ ಎಂದು ವರದಿಯಾಗಿದೆ.
