Home » Hijab: ಇವರಿಗೆ ಆಪರೇಶನ್ ಥಿಯೇಟರ್’ನಲ್ಲೂ ಹಿಜಾಬ್ ಹಾಕ್ಕೊಂಡೇ ಇರಬೇಕಂತೆ – ಕೇರಳದ MBBS ವಿದ್ಯಾರ್ಥಿಗಳ ಲೇಟೆಸ್ಟ್ ಬೇಡಿಕೆ !

Hijab: ಇವರಿಗೆ ಆಪರೇಶನ್ ಥಿಯೇಟರ್’ನಲ್ಲೂ ಹಿಜಾಬ್ ಹಾಕ್ಕೊಂಡೇ ಇರಬೇಕಂತೆ – ಕೇರಳದ MBBS ವಿದ್ಯಾರ್ಥಿಗಳ ಲೇಟೆಸ್ಟ್ ಬೇಡಿಕೆ !

by Mallika
0 comments

Hijab: ದೇಶದಾದ್ಯಂತ ಹಿಜಾಬ್ ವಿಚಾರವಾಗಿ ಅನೇಕ ಚರ್ಚೆಗಳು ನಡೆಯುತ್ತಲೇ ಇದೆ. ಇದೀಗ ತಿರುವನಂತಪುರಂನಲ್ಲಿರುವ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಏಳು ಮುಸ್ಲಿಂ ವಿದ್ಯಾರ್ಥಿಗಳು ತಮಗೆ ಆಪರೇಷನ್ ಥಿಯೇಟರ್‌ನಲ್ಲೂ ಹಿಜಾಬ್ ಧರಿಸಲು ಅವಕಾಶ ನೀಡಬೇಕು ಎಂದು ಮೆಡಿಕಲ್ ಕಾಲೇಜು ಆಡಳಿತ ಮಂಡಳಿಗೆ ಮನವಿ ಮಾಡಿದ್ದಾರೆ.

ತಿರುವನಂತಪುರಂನಲ್ಲಿರುವ ಮೆಡಿಕಲ್ ಕಾಲೇಜಿನ 7 ಮಂದಿ ವಿದ್ಯಾರ್ಥಿಗಳ ಗುಂಪು ಕಾಲೇಜಿನ ಪ್ರಾಂಶುಪಾಲರಿಗೆ ಪತ್ರ ಬರೆದಿದ್ದು, ಆಪರೇಷನ್‌ ಥಿಯೇಟರ್‌ನೊಳಗೆ ಹಿಜಾಬ್ ಧರಿಸಲು ಅವಕಾಶ ನೀಡುತ್ತಿಲ್ಲ, ಆದರೆ ನಮ್ಮ ಧಾರ್ಮಿಕ ನಂಬಿಕೆ ಪ್ರಕಾರ, ಎಂತಹಾ ಸಂದರ್ಭದಲ್ಲೂ ಹಿಜಾಬ್ ಧರಿಸುವುದು ಕಡ್ಡಾಯವಾಗಿದೆ. ನಮ್ಮ ಧಾರ್ಮಿಕ ತೊಡುಗೆಯನ್ನು ಧರಿಸುವುದರ ಜೊತೆಗೆ ಆಪರೇಷನ್ ಥಿಯೇಟರ್‌ಗಳ ನಿಯಮಗಳನ್ನು ಪಾಲಿಸಿಕೊಂಡು ಎರಡರಲ್ಲೂ ಸಮತೋಲನ ಕಾಯ್ದುಕೊಂಡು ಹೋಗುತ್ತಿದ್ದು ಹಿಜಾಬ್ ಧರಿಸುವ ಮಹಿಳೆಯರಿಗೆ ಇದು ಕಷ್ಟದ ಸಮಯವಾಗಿದೆ.

ಹಾಗಾಗಿ ಆದಷ್ಟು ಬೇಗ ನಮಗೆ ಆಪರೇಷನ್ ಥಿಯೇಟರ್‌ಗಳಲ್ಲಿಯೂ ಹಿಜಾಬ್ ಧರಿಸಲು ಅವಕಾಶ ನೀಡಬೇಕು, ಸಾಧ್ಯವಾಗದಿದ್ದಲ್ಲಿ ನಮಗೆ ಉದ್ದ ಕೈಗಳಿರುವ ಸ್ಕ್ರಬ್ ಜಾಕೆಟ್ (long-sleeved scrub jackets)ಹಾಗೂ ಸರ್ಜಿಕಲ್ ಹುಡ್ಸ್ (surgical hoods)ಧರಿಸಲು ಅವಕಾಶ ನೀಡಬೇಕು ಎಂದು 2020ನೇ ಬ್ಯಾಚ್‌ನ ಮೆಡಿಕಲ್ ವಿದ್ಯಾರ್ಥಿನಿ ಪತ್ರ ಬರೆದಿದ್ದಾರೆ. ಇದಕ್ಕೆ 2018, 2021, 2022ನೇ ಬ್ಯಾಚ್‌ನ ಕೆಲ ಮುಸ್ಲಿಂ ವಿದ್ಯಾರ್ಥಿಗಳು ಸಹಿ ಹಾಕಿದ್ದಾರೆ. ವಿದ್ಯಾರ್ಥಿಗಳು ಪತ್ರ ಬರೆದಿರುವ ವಿಚಾರವನ್ನು ತಿರುವನಂತಪುರ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲರಾದ ಡಾಕ್ಟರ್ ಲಿನೆಟ್ಟೆ ಮೋರಿಸ್ (Dr Linette J Morris) ಖಚಿತಪಡಿಸಿದ್ದಾರೆ.

ಮುಸ್ಲಿಂ ವಿದ್ಯಾರ್ಥಿಗಳು ಆಪರೇಷನ್‌ ಥಿಯೇಟರ್‌ಗಳಲ್ಲಿ ಹಿಜಾಬ್ ಬದಲಾಗಿ ಉದ್ದನೆಯ ಕೈಗಳಿರುವ ಜಾಕೆಟ್‌ ಹಾಗೂ ಹೂಡ್ಸ್‌ಗಳನ್ನು ಧರಿಸಲು ಬಯಸಿದ್ದಾರೆ. ದೀರ್ಘಾವಧಿಯಲ್ಲಿಯೂ ಈ ಬದಲಾವಣೆ ಸಾಧ್ಯವಿಲ್ಲ ಎಂದು ನಾನು ಅವರಿಗೆ ಹೇಳಿದ್ದೇನೆ. ಏಕೆಂದರೆ ಆಪರೇಷನ್‌ ಥಿಯೇಟರ್‌ಗಳಲ್ಲಿ ವೈದ್ಯರಿಗೆ ಸಹಾಯ ಮಾಡುವಾಗ ನಾವು ಮೊಣಕೈವರೆಗೆ ನೀರಿನಲ್ಲಿ ತೊಳೆಯಬೇಕಾಗುತ್ತದೆ. ನಾವು ಸ್ವಚ್ಛತೆ ಹಾಗೂ ಸೋಂಕು ತಡೆಯುವುದಕ್ಕಾಗಿ ಸಾರ್ವತ್ರಿಕ ಮಾನದಂಡವನ್ನು ಅನುಸರಿಸುತ್ತೇವೆ. ಹಾಗಾಗಿ ಇದನ್ನು ನಿರ್ಧರಿಸುವ ಸ್ಥಾನದಲ್ಲಿ ನಾನಿಲ್ಲ. ಅಲ್ಲದೆ ಶಸ್ತ್ರಚಿಕಿತ್ಸಕರು ಮತ್ತು ಸೋಂಕು ನಿಯಂತ್ರಣ ತಜ್ಞರ ಸಭೆಯನ್ನು ಕರೆಯಲಾಗುವುದು. ರೋಗಿಗಳ ಸುರಕ್ಷತೆಯು ಪ್ರಥಮ ಆದ್ಯತೆಯಾಗಿರುತ್ತದೆ. ಇದರಲ್ಲಿ ಯಾವುದೇ ರಾಜಿ ಮಾಡಿಕೊಳ್ಳಲಾಗುವುದಿಲ್ಲ ಎಂದು ಪ್ರಾಂಶುಪಾಲರಾದ ಲಿನೆಟ್ಟೆ ಮೋರಿಸ್ ಹೇಳಿದ್ದಾರೆ.

ಕೋಝಿಕ್ಕೋಡ್ ಸರ್ಕಾರಿ ವೈದ್ಯಕೀಯ ಕಾಲೇಜು ಶಸ್ತ್ರಚಿಕಿತ್ಸೆಯ ವಿಭಾಗದ ವಿಶ್ರಾಂತ ಪ್ರಾಧ್ಯಾಪಕ ಡಾ ರಾಜನ್ ಪಿ ಅವರು ಈ ಬಗ್ಗೆ ಪ್ರತಿಕ್ರಿಯಿಸಿದ್ದು, ವೈದ್ಯಕೀಯ ಕ್ಷೇತ್ರಕ್ಕೆ ಧರ್ಮವನ್ನು ತರಲು ನಾವು ಪ್ರಯತ್ನಿಸಬಾರದು. ಪ್ರಪಂಚದಾದ್ಯಂತ ವೈದ್ಯಕೀಯ ಕ್ಷೇತ್ರದಲ್ಲಿ ಜಾತಿ, ಕುಲ, ಧರ್ಮವನ್ನು ಲೆಕ್ಕಿಸದೆ ಅನುಸರಿಸುತ್ತಿರುವ ಪ್ರಮಾಣಿತ ವ್ಯವಸ್ಥೆಯನ್ನೇ ನಾವು ಹೊಂದಿದ್ದೇವೆ. ಸೋಂಕು ರಹಿತ ಕ್ರಿಮಿನಾಶಕ ಶಸ್ತ್ರಚಿಕಿತ್ಸಾ ಕೊಠಡಿಯನ್ನು ಖಚಿತಪಡಿಸಿಕೊಳ್ಳುವುದಕ್ಕಾಗಿ ನಾವು ಅನುಸರಿಸುವ ವೈದ್ಯಕೀಯ ನಿಯಮಗಳನ್ನು ದುರ್ಬಲಗೊಳಿಸಬಾರದು ಎಂದು ಹೇಳಿದ್ದಾರೆ.

 

ಇದನ್ನು ಓದಿ: Adipurush: ಹಿಂದೂಗಳು ಸಹಿಷ್ಣುರೆಂದು ಈ ಮಟ್ಟಕ್ಕೆ ಇಳಿಯೋದಾ ಎಂದ ಕೋರ್ಟ್, ಸೆನ್ಸಾರ್ ಮಂಡಳಿಗೆ ಛೀಮಾರಿ, ಲೇಖಕನಿಗೆ ಸಮನ್ಸ್ ! 

You may also like

Leave a Comment