Home » Kidnap: 16 ರ ಹರೆಯದ ಅನ್ಯಧರ್ಮದ ಬಾಲಕಿ-ಹಿಂದೂ ಯುವಕ ನಾಪತ್ತೆ; ದೂರು ದಾಖಲು

Kidnap: 16 ರ ಹರೆಯದ ಅನ್ಯಧರ್ಮದ ಬಾಲಕಿ-ಹಿಂದೂ ಯುವಕ ನಾಪತ್ತೆ; ದೂರು ದಾಖಲು

0 comments
Kidnap

Kidnap: ಅಪ್ರಾಪ್ತ ವಯಸ್ಸಿನ ಅನ್ಯಧರ್ಮದ ಹುಡುಗಿಯನ್ನು ಹಿಂದೂ ಯುವಕನೋರ್ವ ಕಿಡ್ನ್ಯಾಪ್‌ ಮಾಡಲಾಗಿದೆ ಎಂದು ಆರೋಪಿಸಿ ಪೋಷಕರು ಪೊಲೀಸ್‌ ಠಾಣೆಗೆ ದೂರು ನೀಡಿರುವ ಕುರಿತು ವರದಿಯಾಗಿದೆ.

New Criminal Laws : IPC ಸೆಕ್ಷನ್ ಗೆ ಬಾಯ್ ಬಾಯ್, ಜಾರಿಗೆ ಬಂತು BNS – ಏನು ಈ ಭಾರತೀಯ ನ್ಯಾಯಾಂಗ ಸಂಹಿತೆ ? ಇಂದಿನಿಂದ ಆಗೋ ಬದಲಾವಣೆಗಳೇನು?

ಪೋಷಕರು ನೀಡಿದ ದೂರಿನ ಮೇರೆಗೆ ಕೊಡಿಗೇಹಳ್ಳಿ ಪೊಲೀಸ್‌ ಠಾಣೆಯಲ್ಲಿ ದೂರನ್ನು ದಾಖಲು ಮಾಡಲಾಗಿದೆ. ಯುವತಿ ಮುಸ್ಲಿಂ, ಹುಡುಗ ಹಿಂದೂ ಧರ್ಮಕ್ಕೆ ಸೇರಿದವರಾಗಿದ್ದಾರೆ.

ಶಂಕರ್‌ ಎಂಬ ಹಿಂದೂ ಯುವಕ 16 ರ ಹರೆಯದ ಬಾಲಕಿಯನ್ನು ಕಿಡ್ನಾಪ್‌ ಮಾಡಿರುವುದಾಗಿ ದೂರಲ್ಲಿ ತಿಳಿಸಲಾಗಿದೆ. ಬಾಲಕಿ ಕಿಡ್ನಾಪ್‌ ಆಗಿ 14 ದಿನಗಳಾಗಿದ್ದು, ಪೋಷಕರು ಚಿಂತಾಕ್ರಾಂತರಾಗಿದ್ದಾರೆ. ಕಾಲೇಜಿಗೆಂದು ಹೋದ ಮಗಳು ನಂತರ ಕಾಲೇಜಿನಿಂದ ವಾಪಸ್‌ ಬಾರದ ಕಾರಣ ಕುಟುಂಬಸ್ಥರಿಂದ ಹುಡುಕಾಟ ನಡೆದಿದೆ. ಮೊಬೈಲ್‌ ಫೋನ್‌ ಗೆ ಕರೆ ಮಾಡಿದರೆ ಸ್ವಿಚ್ ಆಫ್‌ ಆಗಿದೆ ಎಂದು ಪೋಷಕರು ದೂರಿನಲ್ಲಿ ಪೊಲೀಸರಿಗೆ ತಿಳಿಸಿದ್ದಾರೆ.

ಶಂಕರ್‌ ಮೊಬೈಲ್‌ ಟ್ರೇಸ್‌ ಮಾಡಿದಾಗ ಚಿಕ್ಕಬಳ್ಳಾಪುರದಲ್ಲಿ ಶಂಕರ್‌ ಬೈಕ್‌ ಪತ್ತೆಯಾಗಿದೆ. ಸಿಸಿಟಿವಿ ಪರಿಶೀಲನೆಯಲ್ಲಿ ಆಂಧ್ರದ ಕರ್ನೂಲ್‌ ಬಸ್ಸು ಹತ್ತಿ ತೆರಳಿರುವುದು ಕಂಡು ಬಂದಿದೆ. ಹೀಗಾಗಿ ಆಂಧ್ರಪ್ರದೇಶಕ್ಕೆ ತೆರಳಿ ತಲೆ ಮರೆಸಿಕೊಂಡಿರಬಹುದು ಎಂದು ಶಂಕಿಸಲಾಗಿದೆ.

Cm Siddaramaiah: ನನ್ನ ಬಳಿ ಮೊಬೈಲ್ ಫೋನೇ ಇಲ್ಲ ಎಂದ ಸಿಎಂ ಸಿದ್ದರಾಮಯ್ಯ! ಏನಿದು ವಿಚಿತ್ರ?

You may also like

Leave a Comment