Home » ರಾಖಿ ಹಬ್ಬಕ್ಕೆ ಮಗಳು ಕೇಳಿದ್ಲು ಕಿಡ್ನಾಪ್ ಮಾಡೋ ದೊಡ್ಡ ಬೇಡಿಕೆ – ಆಸೆ ಈಡೇರಿಸಲು ಬೆಳ್ಳಂಬೆಳಗ್ಗೆ ಹೆತ್ತವರು ಮಾಡಿದ್ದೇನು ಗೊತ್ತಾ?

ರಾಖಿ ಹಬ್ಬಕ್ಕೆ ಮಗಳು ಕೇಳಿದ್ಲು ಕಿಡ್ನಾಪ್ ಮಾಡೋ ದೊಡ್ಡ ಬೇಡಿಕೆ – ಆಸೆ ಈಡೇರಿಸಲು ಬೆಳ್ಳಂಬೆಳಗ್ಗೆ ಹೆತ್ತವರು ಮಾಡಿದ್ದೇನು ಗೊತ್ತಾ?

by ಹೊಸಕನ್ನಡ
0 comments

ರಕ್ಷಾ ಬಂಧನ (Raksha bhandhan) ಹಬ್ಬದಂದು ರಾಖಿ ಕಟ್ಟಲು ಅಣ್ಣ ಬೇಕು ಎಂದು ಮಗಳು ಹಠ ಮಾಡಿದ ಕಾರಣಕ್ಕೆ ಒಂದು ಕಿಡ್ನಾಪ್ ನೇ ನಡೆದುಹೋದ ವಿಚಿತ್ರ ಘಟನೆ ವರದಿಯಾಗಿದೆ. ಒಂದು ತಿಂಗಳ ಗಂಡು ಮಗುವನ್ನು ಅಪಹರಿಸಿದ (Boy Baby Kidnap) ಆರೋಪದ ಮೇಲೆ ಇದೀಗ ದಂಪತಿಯನ್ನು ಪೊಲೀಸರು ಬಂಧಿಸಿದ ಘಟನೆ ಬೆಳಕಿಗೆ ಬಂದಿದೆ.

ಟ್ಯಾಗೋರ್ ಗಾರ್ಡನ್‍ನ ರಘುಬೀರ್ ನಗರದ ನಿವಾಸಿಗಳಾದ ಸಂಜಯ್ ಗುಪ್ತಾ (41) ಮತ್ತು ಅನಿತಾ ಗುಪ್ತಾ (36) ದಂಪತಿಯ 17 ವರ್ಷದ ಮಗ ಈಗಾಗಲೇ ಕಳೆದ ವರ್ಷ ಸಾವನ್ನಪ್ಪಿದ್ದಾನೆ. ಆದರೆ ಮಗಳು ಮುಂಬರುವ ರಕ್ಷಾ ಬಂಧನ (Raksha bhandhan) ಹಬ್ಬದಂದು ರಾಖಿ ಕಟ್ಟಲು ಅಣ್ಣ ಬೇಕು ಎಂದು ಕೇಳಿದ್ದಾಳೆ. ಈ ಹಿನ್ನೆಲೆಯಲ್ಲಿ ಮಗಳ ಆಸೆಯನ್ನು ಪೂರೈಸುವ ಸಲುವಾಗಿ ದಂಪತಿ ಕಳ್ಳತನಕ್ಕೆ ಪ್ಲಾನ್ ಮಾಡಿದ್ದಾರೆ.

ಛಟ್ಟಾ ರೈಲ್ ಚೌಕ್‍ನ ಫುಟ್‍ಪಾತ್‍ನಲ್ಲಿ ವಾಸಿಸುವ ದಂಪತಿ, ಮುಂಜಾನೆ 3 ಗಂಟೆಯ ಸುಮಾರಿಗೆ ಎಚ್ಚರಗೊಂಡಾಗ ತಮ್ಮ ಮಗು ಕಾಣೆಯಾಗಿರುವುದು ಬೆಳಕಿಗೆ ಬಂದಿದೆ. ಮಗುವನ್ನು ಯಾರೋ ಅಪಹರಿಸಿದ್ದಾರೆ ಎಂದು ಪೊಲೀಸ್ ದೂರು ನೀಡಿದ್ದಾರೆ. ಈ ಘಟನೆ ಸಂಬಂಧ ಪೊಲೀಸರು ಸಮೀಪದ ಪ್ರದೇಶದ ಸಿಸಿಟಿವಿ ಕ್ಯಾಮೆರಾಗಳನ್ನು (CCTV Camera) ಪರಿಶೀಲಿಸಿದಾಗ, ಇಬ್ಬರು ಬೈಕ್‍ನಲ್ಲಿ ಆ ಪ್ರದೇಶದಲ್ಲಿ ತಿರುಗಾಡುತ್ತಿರುವುದು ಕಂಡುಬಂದಿದೆ. ಬೈಕ್ ಸಂಜಯ್ ಹೆಸರಿನಲ್ಲಿ ನೋಂದಾಯಿಸುರುವುದು ಬೆಳಕಿಗೆ ಬಂದಿದೆ. ಅಂತೆಯೇ ಟ್ಯಾಗೋರ್ ಗಾರ್ಡನ್‍ನ ರಘುಬೀರ್ ನಗರದಲ್ಲಿರುವ ಸಿ-ಬ್ಲಾಕ್‍ನಲ್ಲಿ ಆರೋಪಿ ದಂಪತಿ ಮತ್ತು ಅಪಹರಣಕ್ಕೊಳಗಾದ ಮಗುವನ್ನು ಪೊಲೀಸರು ಪತ್ತೆ ಹಚ್ಚಿರುವುದಾಗಿ ಉಪ ಪೊಲೀಸ್ ಆಯುಕ್ತ ಸಾಗರ್ ಸಿಂಗ್ ಕಲ್ಸಿ ಹೇಳಿದ್ದಾರೆ.

ಇತ್ತ ಮಗುವಿನ ತಾಯಿ ಎರಡೂ ಕೈ ಮತ್ತು ಕಾಲುಗಳಿಗೆ ಅಂಗವಿಕಲರಾಗಿದ್ದು, ಮತ್ತು ಅವರ ತಂದೆ ಚಿಂದಿ ಆಯುವವರಾಗಿದ್ದಾರೆ. ಅವರು ನಿರಾಶ್ರಿತರಾಗಿದ್ದು, ಫುಟ್‍ಪಾತ್‍ನಲ್ಲಿ ವಾಸಿಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸ್ ವಿಚಾರಣೆಯಲ್ಲಿ, ಛಟ್ಟಾ ರೈಲ್ ಚೌಕ್ ಬಳಿ ತನ್ನ ತಾಯಿಯಿಂದ ಸ್ವಲ್ಪ ದೂರದಲ್ಲಿ ಮಲಗಿದ್ದ ಈ ಶಿಶುವನ್ನು ಅಪಹರಿಸಿದ್ದಾಗಿ ಒಪ್ಪಿಕೊಂಡಿದ್ದಾರೆ. ಸದ್ಯ ವೃತ್ತಿಯಲ್ಲಿ ಟ್ಯಾಟೂ ಆರ್ಟಿಸ್ಟ್ ಆಗಿರುವ ಸಂಜಯ್ ಈ ಹಿಂದೆ ಮೂರು ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಅನಿತಾ ಮೆಹಂದಿ ಕಲಾವಿದೆ ಎಂದು ಪೊಲೀಸರು ತಿಳಿಸಿದ್ದಾರೆ.

You may also like

Leave a Comment