Home » ನಾಗಬನದಿಂದ ಪ್ರತಿಷ್ಠೆ ಮಾಡಿದ 6 ನಾಗನ ಕಲ್ಲುಗಳನ್ನು ಎಸೆದು ವಿಕೃತಿ ಮೆರೆದ ದುಷ್ಕರ್ಮಿಗಳು!

ನಾಗಬನದಿಂದ ಪ್ರತಿಷ್ಠೆ ಮಾಡಿದ 6 ನಾಗನ ಕಲ್ಲುಗಳನ್ನು ಎಸೆದು ವಿಕೃತಿ ಮೆರೆದ ದುಷ್ಕರ್ಮಿಗಳು!

0 comments

ಕಿನ್ನಿಗೋಳಿ: ನಾಗಬನ ಪ್ರತಿಷ್ಠೆ ಮಾಡಿದ ಜಾಗದಿಂದ 6 ನಾಗನ ಕಲ್ಲುಗಳನ್ನು ಬೇರೆ ಬೇರೆ ಜಾಗದಲ್ಲಿ ಎಸೆದು ವಿಕೃತಿ ಮೆರೆದ ಘಟನೆ ರವಿವಾರ ನಡೆದಿದೆ.

ಇದು ಕಟೀಲು ಮಲ್ಲಿಗೆಯಂಗಡಿಯ ಪಡುಸಾಂತ್ಯ ಭಂಡಾರಿ ಮನೆತನದ ನಾಗನಬನವಾಗಿದ್ದು,ರವಿವಾರ ಬೆಳಗ್ಗೆ ಭಂಡಾರಿ ಮನೆತನದ ವ್ಯಕ್ತಿಯೊಬ್ಬರು ನಾಗನ ಕಲ್ಲು ಆವರಣದಿಂದ ಹೊರಗೆ ಬಿದ್ದದ್ದನ್ನು ಗಮನಿಸಿ ಪರಿಶೀಲನೆ ನಡೆಸಿದಾಗ ನಾಗಬನದಲ್ಲಿ ಪ್ರತಿಷ್ಠೆ ಮಾಡಿದ ಜಾಗದಿಂದ 6 ನಾಗನ ಕಲ್ಲುಗಳನ್ನು ಎಸೆದು ಬೇರೆ ಬೇರೆ ಜಾಗದಲ್ಲಿ ಹಾಕಲಾಗಿದೆ ಎಂಬುದು ತಿಳಿದಿದೆ.

ಬಿಜೆಪಿ ನಾಯಕ ಈಶ್ವರ್‌ ಕಟೀಲು ತಪ್ಪಿತಸ್ಥರನ್ನು ಬಂಧಿಸಿ ಕ್ರಮ ಜರಗಿಸುವಂತೆ ಆಗ್ರಹಿಸಿದ್ದಾರೆ.ಸ್ಥಳಕ್ಕೆ ಎಸಿಪಿ ಮಹೇಶ್‌ ಕುಮಾರ್‌ ಹಾಗೂ ಪೊಲೀಸರ ತಂಡ ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿದ್ದಾರೆ.

You may also like

Leave a Comment