Kipi Keerthi: ಸೋಶಿಯುಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಕಿಪಿ ಕೀರ್ತಿಯ (Kipi Keerthi) ಪ್ರೇಮ ಪ್ರಕರಣದಲ್ಲಿ ಬಿಲ್ಡಪ್ ಕೊಟ್ಟಿದ್ದ ಮುತ್ತು ಅಲಿಯಾಸ್ ಬ್ಲಾಕ್ ಕೋಬ್ರಾನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಮಿಡಿಗೇಶಿ ಹೊಬಳಿಯ ಹೊಸಕೆರೆ ಮೂಲದ ಮುತ್ತು, ಕ್ಯಾತ್ಸಂದ್ರ ಬಳಿ ಕಡಲೆಕಾಯಿ ವ್ಯಾಪಾರ ಮಾಡಿಕೊಂಡಿದ್ದನು. ಈ ವ್ಯಾಪಾರದ ಜೊತೆಯಲ್ಲಿ ರೀಲ್ಸ್ ಮಾಡಿಕೊಂಡಿದ್ದನು.
ಅಂತೆಯೇ ಕಿಪಿ ಕೀರ್ತಿ ಹೆಸರೇಳಿದರೇ ನಾಲಿಗೆ ಕತ್ತರಿಸುತ್ತೇನೆ ಎಂದು ಚಾಕು ಹಿಡಿದು ಬಿಲ್ಡಪ್ ಕೊಟ್ಟಿದ್ದನು. ಇದರ ಜೊತೆಯಲ್ಲಿಯೇ ಕಿಪಿ ಕೀರ್ತಿ ವಿಚಾರವಾಗಿ ಒಂದಿಷ್ಟು ವಿಡಿಯೋಗಳನ್ನು ಮಾಡಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿಕೊಂಡಿದ್ದನು. ಚಾಕು ಹಿಡಿದ ವಿಡಿಯೋ ವೈರಲ್ ಆಗಿತ್ತು. ಈ ವಿಡಿಯೋ ನೋಡಿದ ಕ್ಯಾತ್ಸಂದ್ರ ಪೊಲೀಸರು ಸುಮೋಟೊ ಪ್ರಕರಣ ದಾಖಲಿಸಿಕೊಂಡಿದ್ದರು.
ಮುತ್ತನನ್ನು ಠಾಣೆಗೆ ಕರೆಸಿ ಪೊಲೀಸರು ಮತ್ತೊಮ್ಮೆ ಈ ರೀತಿ ವಿಡಿಯೋ ಮಾಡದಂತೆ ಎಚ್ಚರಿಕೆ ನೀಡಿದ್ದಾರೆ. ಮತ್ತೊಮ್ಮೆ ಚಾಕು ಹಿಡಿದು ಈ ರೀಲ್ಸ್ ಮಾಡೋದಿಲ್ಲ ಎಂದು ಮುತ್ತು ಪೊಲೀಸರ ಮುಂದೆ ಹೇಳಿಕೆಯನ್ನು ದಾಖಲಿಸಿದ್ದಾನೆ. ಹೇಳಿಕೆ ದಾಖಲಿಸಿಕೊಂಡ ಪೊಲೀಸರು ಮುತ್ತನನ್ನು ಬಿಟ್ಟು ಕಳುಹಿಸಿದ್ದಾರೆ.
ಇದನ್ನೂ ಓದಿ: Mangalore: ಶ್ರೀದೇವಿ ಕಲ್ಲಡ್ಕ ಅವರಿಗೆ ಮಂಗಳೂರು ವಿ.ವಿ.ಯಿಂದ ಡಾಕ್ಟರೇಟ್ ಪದವಿ
