Home » Kitchen Tips: ಪ್ರೆಶರ್ ಕುಕ್ಕರ್‌ನ ಸುಟ್ಟ ಆಹಾರ ಮತ್ತು ಕಪ್ಪು ಕಲೆಗಳನ್ನು ಸುಲಭವಾಗಿ ಈ ರೀತಿ ತೆಗೆದು ಹಾಕಿ

Kitchen Tips: ಪ್ರೆಶರ್ ಕುಕ್ಕರ್‌ನ ಸುಟ್ಟ ಆಹಾರ ಮತ್ತು ಕಪ್ಪು ಕಲೆಗಳನ್ನು ಸುಲಭವಾಗಿ ಈ ರೀತಿ ತೆಗೆದು ಹಾಕಿ

0 comments

ಪ್ರೆಶರ್ ಕುಕ್ಕರ್ ಸಮಯ ಉಳಿತಾಯ ಮಾಡುವ, ಪ್ರಭಾವಶಾಲಿಯಾದ, ಹಣ ಉಳಿಸುವ ಅಡುಗೆ ಮನೆಯ ಸಣ್ಣ ಸಾಧನವಾಗಿದ್ದೂ, ಸಾಮನ್ಯವಾಗಿ ಎಲ್ಲರೂ ಉಪಯೋಗಿಸುತ್ತಾರೆ. ಆದರೆ ಅಡುಗೆ ಮಾಡಿದ ನಂತರ ಪ್ರೆಶರ್ ಕುಕ್ಕರ್​ನಲ್ಲಿ ಸುಟ್ಟ ಗುರುತುಗಳು ಸಾಮಾನ್ಯವಾಗಿರುತ್ತದೆ. ಅದನ್ನು ಪ್ರತಿ ಬಾರಿಯೂ ಸ್ವಚ್ಛಗೊಳಿಸಲು ಕಷ್ಟಪಡುವ ಬಗ್ಗೆ ಹೇಳಬೇಕಾಗಿಲ್ಲ. ಇನ್ನೂ ಮುಂದೆ ಆ ಚಿಂತೆ ನಿಮಗೆ ಬೇಡ!!. ಸಣ್ಣ ಪುಟ್ಟ ಕಲೆಗಳನ್ನು ಅತೀ ಸುಲಭವಾಗಿ ತೊಡೆದುಹಾಕುವ ಸೂಪರ್ ಟ್ರಿಕ್ ಅನ್ನು ನಾವಿಂದು ತಿಳಿಸಲಿದ್ದೇವೆ. ಕೆಳಗಿನ ಸಲಹೆಗಳು ನಿಮ್ಮ ಮನೆಯಲ್ಲಿನ ಪ್ರೆಶರ್ ಕುಕ್ಕರ್​ನ ಸುಟ್ಟ ಕಪ್ಪು ಕಲೆಗಳನ್ನು ತೊಡೆದು ಹಾಕಲು ನಿಮಗೆ ಸಹಾಯವಾಗುತ್ತದೆ.

●ನೀರಿನಿಂದ ಬಿಸಿ ಮಾಡಿ:- ಕೊಳೆ ಮತ್ತು ಧೂಳನ್ನು ಸ್ವಚ್ಛಗೊಳಿಸುವುದರಲ್ಲಿ ಬಿಸಿನೀರು ಎತ್ತಿದ ಕೈ. ಅಂಟಿಕೊಂಡಿರುವ ಸುಟ್ಟ ಆಹಾರವನ್ನು ಸ್ವಚ್ಚಗೊಳಿಸಲು ಕುಕ್ಕರಗೆ ನೀರನ್ನು ಹಾಕಿ 15 ನಿಮಿಷಗಳ ಕಾಲ ಕುದಿಯಲು ಬಿಡಿ. ಆಹಾರದ ಸುಟ್ಟ ಕಲೆಗಳು ಸಡಿಲಗೊಳ್ಳುತ್ತವೆ. ಕೆಲವು ನಿಮಿಷಗಳ ಕಾಲ ಬಿಸಿ ಮಾಡಿದ ನಂತರ, ತಣ್ಣಗಾಗಲು ಬಿಡಿ ಮತ್ತು ಸೋಪಿನಿಂದ ಸುಲಭವಾಗಿ ಸ್ವಚ್ಛಗೊಳಿಸಬಹುದು.

●ಅಡಿಗೆ ಸೋಡಾ ಬಳಸಿ:- ನಿಮ್ಮ ಪ್ರೆಶರ್ ಕುಕ್ಕರ್​ನಲ್ಲಿರುವ ಕಲೆಗಳು ಬಹಳ ಸಮಯದಿಂದ ಕುಳಿತಿದ್ದರೆ, ನೀರಿಗೆ ಬೇಕಿಂಗ್ ಸೋಡಾವನ್ನು ಸೇರಿಸಿ ಮತ್ತು ನಂತರ ಅದನ್ನು ಒಲೆಯ ಮೇಲೆ ಇರಿಸಬೇಕು. ಕನಿಷ್ಠ ಒಂದು ಗಂಟೆಗಳ ಕಾಲ ಕುದಿಸಿದ ನಂತರ ತಣ್ಣಗಾಗಲು ಬಿಡಿ ಮತ್ತು ಕುಕ್ಕರ್ ಅನ್ನು ತೊಳೆಯಿರಿ.

●ಗಟ್ಟಿಯಾದ ಕಲೆಗಳಿಗಾಗಿ:- ಗಟ್ಟಿಯಾದ ಕಲೆಗಳಿಗಾಗಿ ಈರುಳ್ಳಿ ಸಿಪ್ಪೆಯನ್ನು ಬಳಸುವ ಮೂಲಕ ಕಲೆಯನ್ನ ತೆಗೆಯಬಹುದು. ಕುಕ್ಕರ್ ಒಳಗೆ ನೀರನ್ನು ಜೊತೆಗೆ ಕೆಲವು ಈರುಳ್ಳಿ ಸಿಪ್ಪೆಗಳನ್ನು ಹಾಕಿರಿ. ನಂತರ ಕುಕ್ಕರ್ ಮುಚ್ಚಿ ಅರ್ಧ ಘಂಟೆಯವರೆಗೆ ಹೆಚ್ಚಿನ ಉರಿಯಲ್ಲಿ ಕುದಿಸಿ. ನಂತರ ಕುಕ್ಕರ್ ಅನ್ನು ಸುಲಭವಾಗಿ ತೊಳೆಯಬಹುದು.

●ಬಿಳಿ ಗುರುತುಗಳಿಗೆ:- ಕಪ್ಪು ಗುರುತುಗಳ ಬದಲಿಗೆ ಬಿಳಿ ಗುರುತುಗಳು ನಿಮ್ಮನ್ನು ಕಾಡುತ್ತಿದ್ದರೆ. ವಿನೆಗರ್ ಸಹಾಯದಿಂದ ಅವುಗಳನ್ನು ಸುಲಭವಾಗಿ ತೊಡೆದುಹಾಕಬಹುದು. ವಿನೆಗರ್ ಆಮ್ಲೀಯವಾಗಿದೆ ಮತ್ತು ಹಾರ್ಡ್ ಕ್ರೂಡ್ ಅನ್ನು ಕರಗಿಸಲು ಸಹಾಯ ಮಾಡುತ್ತದೆ. ಇದಕ್ಕಾಗಿ 1 ಕಪ್ ಬಿಳಿ ವಿನೆಗರ್ ಅನ್ನು ನೀರಿಗೆ ಸೇರಿಸಿ ಮತ್ತು ಅದರೊಂದಿಗೆ ಪ್ರೆಶರ್ ಕುಕ್ಕರ್ ಅನ್ನು ತುಂಬಿಸಿ. ರಾತ್ರಿಯಿಡೀ ಹಾಗೆ ಬಿಡಿ ಮತ್ತು ಮರುದಿನ ಬೆಳಿಗ್ಗೆ ತೊಳೆಯಿರಿ.

●ಕಲೆ ತುಂಬಾ ಗಟ್ಟಿಯಾಗಿಲ್ಲದಿದ್ದರೆ:- ಕುಕ್ಕರ್‌ನಲ್ಲಿ ಸ್ವಲ್ಪ ಬೆಚ್ಚಗಿನ ನೀರನ್ನು ದ್ರವ ಮಾರ್ಜಕದೊಂದಿಗೆ ಹಾಕಿ ಮತ್ತು ಎರಡು ಗಂಟೆಗಳ ಕಾಲ ಬಿಡಿ. ನಂತರ ಬೆಚ್ಚಗಿನ ನೀರಿನಲ್ಲಿ ಎಂದಿನಂತೆ ತೊಳೆಯಿರಿ.

You may also like

Leave a Comment