Home » Kodagu : ʼಗಂಧದಗುಡಿʼ ಸಿನಿಮಾ ಮಾದರಿಯಲ್ಲಿ ಆನೆಗಳಿಗೆ ಅಭಯಾರಣ್ಯ

Kodagu : ʼಗಂಧದಗುಡಿʼ ಸಿನಿಮಾ ಮಾದರಿಯಲ್ಲಿ ಆನೆಗಳಿಗೆ ಅಭಯಾರಣ್ಯ

0 comments

Kodagu (Elephant Sanctuary): ಕಳೆದ ಕೆಲ ವರ್ಷಗಳಲ್ಲಿ ಕಾಡಾನೆಗಳು ದಾಳಿಗೆ 33 ಜೀವಗಳು ಬಲಿಯಾಗಿದೆ. 53 ಜನ ಶಾಶ್ವತ ಅಂಗವೈಕಲ್ಯತೆ ಸೇರಿ ನಾನಾ ರೀತಿಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಹಾಗಾಗಿ ಇದೀಗ ರಾಜ್ಯ ಸರಕಾರ ʼಗಂಧದ ಗುಡಿʼ ಸಿನಿಮಾ ಮಾದರಿಯಲ್ಲೇ ʼಆನನೆಗಳ ಅಭಯಾರಣ್ಯ ಮಾಡಲು ಸಿದ್ಧತೆ ಮಾಡಿಕೊಂಡಿದೆ.

ಜನರಿಗೆ ತೊಂದರೆಯಾಗದ ರೀತಿಯಲ್ಲಿ ಕಾಡಾನೆಗಳ ರಕ್ಷಣೆ ಮಡುವ ಕ್ರಮಕ್ಕೆ ಸರಕಾರ ಸಿದ್ಧತೆ ಮಾಡಿದೆ. ಇದಕ್ಕೆ ಕೊಡಗಿನಲ್ಲಿ 2000 ಹೆಕ್ಟೆರ್‌ ಪ್ರದೇಶ್‌ವನ್ನು ಗುರುತು ಮಾಡಿ ನಾಡಿನಲ್ಲೇ ಬೀಡುಬಿಟ್ಟಿರುವ ಕಾಡಾನೆಗಳನ್ನು ಕಾಡಿಗೆ ಸ್ಥಳಾಂತರ ಮಾಡಲು ಕ್ರಮ ತೆಗೆದುಕೊಂಡಿದೆ.

ಹಾಗೆನೇ ಬೆಳೆ ನಷ್ಟ ಮತ್ತು ಜೀವ ಹಾನಿಗೆ ಕಾರಣವಾಗುತ್ತಿರುವ ಕಾಡಾನೆಗಳನ್ನು ಗುರುತಿಸಿ ಅಭಯಾರಣ್ಯಕ್ಕೆ ಬಿಡಲು ಮುಂದಾಗಿದೆ. ಇದಕ್ಕಾಗಿ ಕೊಡಗಿನ ಗ್ರಾಮೀಣ ಭಾಗದಲ್ಲಿ ಬೀಡುಬಿಟ್ಟಿರುವ 200 ಆನೆಗಳಿಗೆ ಆಶ್ರಯ ಕಲ್ಪಿಸುವುದಕ್ಕೆ ಸರಕಾರ ಆಯೋಜನೆ ಮಾಡಿದೆ.

 

You may also like