Home » ಹೊಸ ವರ್ಷಕ್ಕೆ ಕೊರೊನಾದ ಮತ್ತೊಂದು ರೂಪ ಬರಲಿದೆ; ಕಾದು ನೋಡಿ, ರಾಜ್ಯಕ್ಕೆ ಅವಘಡ ಕಾದಿದೆ – ಘೋರ ಭವಿಷ್ಯ ನುಡಿದ ಕೋಡಿಮಠದ ಶ್ರೀ

ಹೊಸ ವರ್ಷಕ್ಕೆ ಕೊರೊನಾದ ಮತ್ತೊಂದು ರೂಪ ಬರಲಿದೆ; ಕಾದು ನೋಡಿ, ರಾಜ್ಯಕ್ಕೆ ಅವಘಡ ಕಾದಿದೆ – ಘೋರ ಭವಿಷ್ಯ ನುಡಿದ ಕೋಡಿಮಠದ ಶ್ರೀ

by Mallika
0 comments

“ಮಳೆ, ಸಿಡಿಲು, ಬೆಂಕಿ ಕಾಟ, ಮತಾಂಧತೆ ಹೆಚ್ಚುತ್ತೆ, ಸಾವು ನೋವು ಆಗುತ್ತೆ ಎಂದು ಈ ಸಂವತ್ಸರದ ಪ್ರಾರಂಭದಲ್ಲಿಯೇ ಹೇಳಿದ್ದೆ. ಈಗ ಆ ರೀತಿ ಆಗಿದೆ” ಎಂದು ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಹೇಳಿದ್ದಾರೆ.

ಇನ್ನು ಮುಂದೆಯೂ ಮಳೆ ಆಗುವ ಲಕ್ಷಣ ಇದೆ. ಕಾಡಿನಿಂದ ನಾಡಿಗೆ ಪ್ರಾಣಿಗಳ ಪ್ರವೇಶ ಆಗುತ್ತಿದೆ. ಕಾರ್ತಿಕ ಮಾಸದಲ್ಲಿ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಲಿದೆ. ಭೂಮಿಯೊಳಗೆ ವಿಷಜಂತುಗಳು ಹೊರಗೆ ಬಂದು ತೊಂದರೆ ಮಾಡುತ್ತವೆ. ಹೊರಗಡೆ ಹೋಗುವಾಗ ಒಂದು ಬಡಗಿ ಹಿಡಿದುಕೊಂಡು ಹೋಗಬೇಕು ಎಂದು ಭವಿಷ್ಯ ನುಡಿದಿದ್ದಾರೆ.

ರಾಜ್ಯದಲ್ಲಿ ಅವಘಡ ಸಂಭವಿಸಲಿದೆ. ಪ್ರಕೃತಿಯಲ್ಲಿ ಅಲ್ಲೋಲ ಕಲ್ಲೋಲ ಉಂಟಾಗಲಿದ್ದು, ಬೆಂಕಿಯಿಂದ ಹೆಚ್ಚೆಚ್ಚು ಸಮಸ್ಯೆಯಾಗಲಿದೆ. ರಾಜ್ಯದಲ್ಲಿ ಅಪಮೃತ್ಯುವಿನ ಸಂಖ್ಯೆ ಹೆಚ್ಚಲಿದ್ದು, ಈ ವರ್ಷ ಮುಗಿಯುತ್ತಿದ್ದಂತೆ ಕೊರೊನಾ ಮತ್ತೆ ಹೆಚ್ಚಾಗಲಿದೆ. ಕೊರೊನಾ ರೂಪಕ್ಕೆ ಮತ್ತೊಂದು ರೂಪದ ಲಕ್ಷಣಗಳಿವೆ. ಈ ರೋಗ ಬಂದು ಹೋಗುವಾಗ ಬಹಳ ಕಷ್ಟ ಕೊಟ್ಟು ಹೋಗುತ್ತದೆ. ಕಾದು ನೋಡಿ, ರಾಜ್ಯಕ್ಕೆ ಅವಘಡ ಸಂಭವಿಸಲಿದೆ ಎಂದು ಕೋಡಿ ಶ್ರೀ ಹೇಳಿದ್ದಾರೆ.

You may also like

Leave a Comment