Kodi Mutt Swamiji: ಈ ಬಾರಿ ಆಕಾಶದಿಂದ ಭಾರೀ ದೊಡ್ಡ ಆಪತ್ತು ಕಾದಿದೆ ಎಂದು ಹಾರನಹಳ್ಳಿ ಗ್ರಾಮದ ಕೋಡಿಮಠ ಪೀಠಾಧ್ಯಕ್ಷ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿ ಸ್ಫೋಟಕ ಭವಿಷ್ಯ ಹೇಳಿದ್ದಾರೆ.
ಸದರಿ ವರ್ಷದ ಮಳೆಯಿಂದ ದೇಶದಲ್ಲಿ ಹೆಚ್ಚು ತೊಂದರೆ ಆಗಿದೆ. ಪಂಚ ಶಕ್ತಿಗಳಿಂದ ನಮಗೆ ತೊಂದರೆ ಆಗಲಿದೆ. ಭೂಮಿ, ಅಗ್ನಿ, ವಾಯು, ಆಕಾಶ, ಪ್ರಕೃತಿ ಇವೆಲ್ಲ ನಮಗೆ ತೊಂದರೆ ಆಗಲಿದೆ. ಹಾಗೂ ಆಕಾಶದಲ್ಲಿ ಆಗುವ ದೊಡ್ಡ ಸುದ್ದಿಯೊಂದು ಇದೆ. ಜನ ಇದ್ದಕ್ಕಿದ್ದಂತೆ ಸಾಯುತ್ತಾರೆ. ಭೂಮಿ ಬಿರುಕು ಬಿಡುತ್ತದೆ, ಗುಡ್ಡ ಹೋಗುತ್ತೆ ಎಂದು ಹೇಳಿದ್ದೆ ನಾನು, ಪ್ರವಾಹದಲ್ಲಿ ಹಲವು ದೇಶಗಳು ಮುಳುಗುತ್ತವೆ ಎಂದೂ ಹೇಳಿದ್ದೆ. ಅನಾಹುತಗಳು ಇನ್ನೂ ನಡೆಯಲಿದೆ ಎಂದು ಕೋಡಿ ಶ್ರೀ ಅವರು ಸೋಮವಾರ ಹಾಸನದಲ್ಲಿ ಮಾಧ್ಯಮಗಳಿಗೆ ಹೇಳಿದ್ದಾರೆ.
ಆಕಾಶ ತತ್ವ ಪ್ರಕಾರ ತೊಂದರೆ ಆಗಬಹುದು. ರಾಜನ ಮೇಲೆ ಭಂಗ ಬೀರುತ್ತದೆ. ಅಭಿಮನ್ಯುವಿನ ಬಿಲ್ಲನ್ನು ಮೋಸದಿಂದ ಕರ್ಣನ ಕೈಯಲ್ಲಿ ದಾರ ಕಟ್ ಮಾಡಿಸಿದ. ಮಹಾಭಾರತದಲ್ಲಿ ಕೃಷ್ಣ ಇದ್ದ. ಗದಾಯುದ್ಧದಲ್ಲಿ ಭೀಮ ಗೆದ್ದ. ಕೃಷ್ಣನಿಲ್ಲದೆ ದುಯೋರ್ಧನ ಈ ಬಾರಿ ಗೆಲ್ಲುತ್ತಾನೆ. ಹೌದು, ಸೆಂಟ್ರಲ್, ಸ್ಟೇಟ್ ಒಂದೇ ರೀತಿ ಆಗಲಿದೆ. ಸರಕಾರಕ್ಕೆ ತೊಂದರೆ ಇಲ್ಲ. ಜಲ, ಅಗ್ನಿ, ಪೃಥ್ವಿ, ವಾಯು ಇದರಿಂದ ತೊಂದರೆ ಆಗುತ್ತದೆ ಎಂದು ಹೇಳಿದ್ದಾರೆ.
