Home » Kodi Shree: ಸಿದ್ದರಾಮಯ್ಯ-ಡಿಕೆಶಿ ಕುರಿತು ಸ್ಫೋಟಕ ಭವಿಷ್ಯ ನುಡಿದ ಶ್ರೀ

Kodi Shree: ಸಿದ್ದರಾಮಯ್ಯ-ಡಿಕೆಶಿ ಕುರಿತು ಸ್ಫೋಟಕ ಭವಿಷ್ಯ ನುಡಿದ ಶ್ರೀ

0 comments

Kodi Shree: ಕರ್ನಾಟಕದಲ್ಲಿ ಮುಖ್ಯಮಂತ್ರಿ ಬದಲಾವಣೆ ಕುರಿತು ಹಲವು ಸುದ್ದಿ ಹರಿದಾಡ್ತಾ ಇದೆ. ಇದರ ಮಧ್ಯೆ ಮುಖ್ಯಮಂತ್ರಿ ಬದಲಾವಣೆ ಕುರಿತು ಕೋಡಿಹಳ್ಳಿ ಶ್ರೀ ಮಹತ್ವದ ಭವಿಷ್ಯವನ್ನು ಯಾದಗಿರಿಯಲ್ಲಿ ಇಂದು ನುಡಿದಿದ್ದಾರೆ.

ಯಾದಗಿರಿಯಲ್ಲಿ ಇಂದು ಮಾತನಾಡಿದ ಕೋಡಿಹಳ್ಳಿ ಶ್ರೀಗಳು, “ಎಲ್ಲಾ ಸಮುದಾಯದ ಎಲ್ಲಾ ಜಾತಿ ಎಲ್ಲಾ ವರ್ಗದವರು ಈ ಭೂಮಿ ಮೇಲೆ ವಾಸವಿದ್ದಾರೆ. ಪ್ರಾಚೀನ ಕಾಲದಿಂದಲೂ ಹಾಲಮತ ಸಮಾಜ ಅಂತ ಆಂದ್ರೆ ಅಡವಿಯಲ್ಲಿದ್ದು ಕುರಿಗಳನ್ನ ಸಾಕೋದು ಮಾಡ್ತಾರೆ. ಕುರಿಯ ಇಕ್ಕಿಯಲ್ಲಿ ಲಿಂಗವನ್ನ ಕಂಡವರು. ಪ್ರಕೃತಿ ಮೇಲೆ ಗಾಳಿಯ ಮೇಲೆ ಭೂಮಿಯ ಮೇಲೆ ಅವರು ಅಡವಿಯಲ್ಲಿ ಇದ್ದು ಕಂಡದ್ದು ನೋಡಿದ್ದ ಅನುಭವಸಿದ್ದನ್ನ ಹೇಳುತ್ತಾ ಬಂದಿದ್ದಾರೆ ಅದು ಕುರುವಿನ ರಟ್ಟು. ಹಾಲು ಕೆಟ್ಟರು ಹಾಲಮತ ಸಮಾಜ ಕೆಡುವುದಿಲ್ಲ ಅಂತ ಹೇಳುತ್ತಾರೆ. ಇವತ್ತು ಹಾಲಮತ ಸಮಾಜದವರ ಕೈಯಲ್ಲಿ ರಾಜ್ಯದ ಅಧಿಕಾರವಿದೆ. ಬಿಡಿಸಿಕೊಳ್ಳೋದು ಅಷ್ಟು ಸುಲಭವಲ್ಲ. ಅವರಾಗೇ ಬಿಡಬೇಕು. ನೀವು ಬಿಡಿಸಿಕೊಳ್ಳುವುದು ಅಷ್ಟು ಸುಲಭವಲ್ಲ. ಮುಂದೆ ಏನಾಗುತ್ತೆ ಎಂದು ಯುಗಾದಿ ಮೇಲೆ ಹೇಳುತ್ತೇನೆ” ಎಂದು ಹೇಳಿರುವ ಕುರಿತು ಟಿವಿ9 ವರದಿ ಮಾಡಿದೆ.

ಈ ಮಾತಿನ ಆಧಾರದಲ್ಲಿ ಸದ್ಯ ಸಿದ್ದರಾಮಯ್ಯನವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸುವುದು ಅಷ್ಟು ಸುಲಭವಲ್ಲ ಎಂದು ಪರೋಕ್ಷವಾಗಿ ಕೋಡಿಹಳ್ಳಿ ಶ್ರೀ ಹೇಳಿದ್ದಾರೆ.

You may also like