Home » Kodi Shri: ನಟ ದರ್ಶನ್ ಬಗ್ಗೆ ಸ್ಪೋಟಕ ಭವಿಷ್ಯ ನುಡಿದ ಕೋಡಿ ಶ್ರೀ- ಅಭಿಮಾನಿಗಳಲ್ಲಿ ಆತಂಕ ಮೂಡಿಸಿದ ಭವಿಷ್ಯವಾಣಿ !!

Kodi Shri: ನಟ ದರ್ಶನ್ ಬಗ್ಗೆ ಸ್ಪೋಟಕ ಭವಿಷ್ಯ ನುಡಿದ ಕೋಡಿ ಶ್ರೀ- ಅಭಿಮಾನಿಗಳಲ್ಲಿ ಆತಂಕ ಮೂಡಿಸಿದ ಭವಿಷ್ಯವಾಣಿ !!

0 comments

Kodi Shri: ರೇಣುಕಾ ಸ್ವಾಮಿ ಹತ್ಯೆ ಪ್ರಕರಣದಲ್ಲಿ (Renukaswamy murder Case) ದರ್ಶನ್ ಜೈಲು ಪಾಲಾಗಿ ಸುಮಾರು 3 ತಿಂಗಳು ಕಳೆದಿದೆ. ದರ್ಶನ್ ನನ್ನು ಬಿಡಿಸಲು ಪತ್ನಿ ವಿಜಯಲಕ್ಷ್ಮೀ ಹರಸಾಹಸ ಪಡುತ್ತಿದ್ದಾರೆ. ಆದರೂ ದರ್ಶನ್(Darshan) ಗೆ ಬಿಡುಗಡೆಯ ಭಾಗ್ಯವಂತೂ ಸಧ್ಯಕ್ಕಿಲ್ಲ ಅನಿಸುತ್ತೆ. ಈ ನಡುವೆಯೇ ದರ್ಶನ್ ಕುರಿತು ಕೋಡಿ ಶ್ರೀಗಳು(Kodi Shri) ಶಾಕಿಂಗ್ ಭವಿಷ್ಯ ನುಡಿದಿದ್ದಾರೆ.

ಹೌದು, ಕೋಡಿ ಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ದರ್ಶನ್ ಬಗ್ಗೆ ಸ್ಫೋಟಕ ಭವಿಷ್ಯ ನುಡಿದಿದ್ದು, ದರ್ಶನ್‌ನ ಪಾಪದ ಬಗ್ಗೆ ಹಾಗೂ ಜಾಮೀನಿನ ಬಗ್ಗೆ ಅವರು ಮಾತನಾಡಿದ್ದಾರೆ. ಇದೀಗ ಸ್ವಾಮೀಜಿ ಕೋಡಿಶ್ರೀ ಅವರ ಸ್ಫೋಟಕ ಭವಿಷ್ಯ ಅವರ ಅಭಿಮಾನಿಗಳಿಗೆ ಶ್ರೀಗಳ ಭವಿಷ್ಯ ಆತಂಕ ಮೂಡಿಸುವಂತಿದೆ.

ಕೋಡಿ ಶ್ರೀ ಹೇಳಿದ್ದೇನು?
ನಟ ದರ್ಶನ್ ಜಾಮೀನು ಹಾಗೂ ಅವರ ಭವಿಷ್ಯದ ಬಗ್ಗೆ ಮಾತನಾಡಿರುವ ಕೋಡಿಶ್ರೀ, ಮಾರ್ಮಿಕವಾಗಿ ಮಾತನಾಡಿದ್ದಾರೆ. ಪಾಪ ಪಾಷಣ ಕಳೆದುಹೋಗಬೇಕು. ಮಾಡಿರುವ ಕರ್ಮವು ಫಲವತ್ತಾದರೆ ಯಾರೇನು ಮಾಡಲು ಸಾಧ್ಯ ಎಂದಿದ್ದಾರೆ. ಪಾಪದ ಕೆಲಸ ಮಾಡುವುದಕ್ಕೆ ಹೆದರಿಕೆ ಇರಬೇಕಿತ್ತು. ಆದರೆ, ಪಾಪ ಮಾಡುವುದಕ್ಕೆ ನಾವು ಹೆದರುತ್ತಿಲ್ಲ. ಪುಣ್ಯ ಮಾಡುವುದಕ್ಕೆ ನಾವು ಹೆದರುತ್ತಿದ್ದೇವೆ ಎಂದಿದ್ದಾರೆ. ಈ ಮೂಲಕ ದರ್ಶನ್‌ ಅವರು ಪುಣ್ಯ ಮಾಡಿದ್ದರೆ ಅದರ ಫಲಸಿಗಲಿದೆ ಎನ್ನುವ ಅರ್ಥದಲ್ಲೂ ಸ್ವಾಮೀಜಿ ಹೇಳಿರುವಂತಿದೆ.

You may also like

Leave a Comment