Home » Kodi Shri: ಸಿಎಂ ಸಿದ್ದರಾಮಯ್ಯ ಕುರಿತು ಕೋಡಿ ಶ್ರೀ ಹೊಸ ಭವಿಷ್ಯ!!

Kodi Shri: ಸಿಎಂ ಸಿದ್ದರಾಮಯ್ಯ ಕುರಿತು ಕೋಡಿ ಶ್ರೀ ಹೊಸ ಭವಿಷ್ಯ!!

by V R
0 comments

Kodi Shri: ರಾಜಕೀಯ ವಿಚಾರ, ನೈಸರ್ಗಿಕ ವಿಚಾರ ಹಾಗೂ ಸಾವು ನೋವು, ಮಳೆ ಮತ್ತು ಪ್ರಕೃತಿ ವಿಕೋಪಗಳ ಆದಿಯಾಗಿ ಅನೇಕ ಸಂಗತಿಗಳ ಕುರಿತು ಕೋಡಿ ಮಠದ ಶ್ರೀಗಳು ಭವಿಷ್ಯ ನುಡಿಯುತ್ತಾರೆ. ಅವರ ಎಲ್ಲ ಭವಿಷ್ಯಗಳು ಕೂಡ ನಿಜವಾಗಿವೆ. ಇದೀಗ ಕೊಡಿ ಶ್ರೀಗಳು ಸಿಎಂ ಸಿದ್ದರಾಮಯ್ಯ ಅವರು ಕುರಿತು ಭವಿಷ್ಯ ನುಡಿದಿದ್ದಾರೆ.

 

ಹಾಸನ ಜಿಲ್ಲೆಯ ಅರಸೀಕೆರೆಯ ಹಾರನಹಳ್ಳಿ ಕೋಡಿಮಠದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅವರು, ಕರ್ನಾಟಕದಲ್ಲಿ ಸಂಕ್ರಾಂತಿ ಬಳಿಕ ರಾಜಕೀಯ ವಿಪ್ಲವದ ಲಕ್ಷಣಗಳು ಗೋಚರಿಸಲಿದ್ದಾವೆ. ಆದರೇ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಯಾವುದೇ ತೊಂದರೆ ಆಗುವುದಿಲ್ಲ ಎಂಬುದಾಗಿ ಕೋಡಿಮಠ ಶ್ರೀಗಳು ಸ್ಪೋಟಕ ಭವಿಷ್ಯ ನುಡಿದಿದ್ದಾರೆ.

 

ಅಲ್ಲದೆ ವಿಶ್ವದಲ್ಲಿ ನಡೆಯುತ್ತಿರುವಂತ ಯುದ್ಧ ನಿಲ್ಲೋದು ಸಂವತ್ಸರ ಪರ್ವದಲ್ಲಿ ಕಷ್ಟವಾಗಿದೆ. ಈ ದ್ವೇಷ, ಅಸೂಯೆಗಳ ಮಧ್ಯದಲ್ಲಿ ಒಂದಿಬ್ಬರು ಬಲಿಯಾಗುತ್ತಾರೆ ಎಂಬುದಾಗಿ ಸ್ಪೋಟಕ ಭವಿಷ್ಯ ನುಡಿದರು.

 

 

ಇದನ್ನೂ ಓದಿ: Suicide: ಕಾರ್ಕಳ: ಮಕ್ಕಳಾಗದ ಚಿಂತೆಯಲ್ಲಿ ಮಹಿಳೆ ವಿಷ ಸೇವಿಸಿ ಆತ್ಮಹತ್ಯೆ

You may also like